ಬೆಂಗಳೂರು: ಇದೀಗ ಟಿಕೆಟ್ ಕೈ ತಪ್ಪಿರುವ ಕಾರಣ ಕೆಜಿಎಫ್ ಬಾಬು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕೆಜಿಎಫ್ ಬಾಬು, “ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳ ಕಾರಣ ಅಸಮಾಧಾನಗೊಂಡು ಪಕ್ಷ ಬಿಡುತ್ತಿದ್ದೇನೆ” ಎಂದು ಅಸ್ಪಷ್ಟವಾಗಿ ಕಾರಣ ನೀಡಿದ್ದಾರೆ. ಇತ್ತೀಚೆಗಷ್ಟೇ ಐಟಿ ಅಧಿಕಾರಿಗಳು,
ಜಿಎಸ್ಟಿ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು, ಮೂಮತಾದವರು ದಾಳಿ ಮಾಡಿದ್ದರು. ಈ ಸಂದರ್ಭ ಅಪಾರ ಪ್ರಮಾಣದಲ್ಲಿ ಸೀರೆಗಳು ಪತ್ತೆಯಾಗಿದ್ದವು. ಅಕ್ರಮವಾಗಿ ಖರೀದಿ ಮಾಡಿದ್ದು ಎಂಬ ಶಂಕೆ ಹಿನ್ನೆಲೆಯಲ್ಲಿ ತನಿಖೆ ಶುರುವಾಗಿತ್ತು. ಈ ಘಟನೆ ನಡೆದದ್ದೇ ಇದೀಗ ಕಾಂಗ್ರೆಸ್ ಪಕ್ಷಕ್ಕೇ ಕೆಜಿಎಫ್ ಬಾಬು ರಾಜೀನಾಮೆ ನೀಡಿದ್ದಾರೆ.