ಬೆಂಗಳೂರು: ಕರ್ನಾಟಕ 2023 ರ ವಿಧಾನಸಭಾ ಚುನಾವಣೆ ಪ್ರಯುಕ್ತ ರಾಜ್ಯದಲ್ಲಿ ಹೀಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಅಬಕಾರಿ ಇಲಾಖೆ ಭರ್ಜರಿ ಬೇಟೆ ನಡೆಸಿದ್ದು, ಕಳೆದ 20 ದಿನಗಳಲ್ಲಿ ಒಟ್ಟು 46 ಕೋಟಿ ಮೌಲ್ಯ ದ 12.24 ಲಕ್ಷ ಲೀಟರ್ ಮದ್ಯ ಸೀಜ್ ಮಾಡಿದ್ದಾರೆ. ಜೊತೆಗೆ 44.02 ಕೆಜಿ ಡ್ರಗ್ಸ್ ಸೀಜ್ ಮಾಡಲಾಗಿದೆ.
ಇನ್ನೂ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 1474 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ನೀತಿ ಸಂಹಿತೆ ವೇಳೆ 16638 ಪ್ರಕರಣಗಳು ದಾಖಲಿಸಿ 21056 ಮಂದಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಹಾಗೂ ಇಲ್ಲಿಯವರೆಗೆ 71.87 ಕೋಟಿ ಹಣ ಸೀಜ್ ಮಾಡಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇನ್ನೂ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ಆಗಲಿದೆ.