ರಾಮನಗರ: ಈ ಬಾರಿ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ(Nomination) ಸಲ್ಲಿಸಿದ್ದಾರೆ. ಆದ್ರೆ, ಇದೀಗ ಆ ನಾಮಪತ್ರ ತಿರಸ್ಕೃತವಾಗುವ ಆತಂಕದಲ್ಲಿದ್ದು, ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಇಂದುನಿರ್ಧಾರವಾಗಲಿದೆ.
ತಮ್ಮ ನಾಮಪತ್ರ ತಿರಸ್ಕೃತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾವಾಗಿ ನಿನ್ನೆ ಸಹೋದರ ಸಂಸದ ಡಿಕೆ ಸುರೇಶ್ ಅವರಿಂದಲೂ ನಾಮಪತ್ರ ಹಾಕಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ನಂತರ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ(nomination verification) ನಡೆಸಲಿದ್ದು, ನಾಮಪತ್ರದಲ್ಲಿ ಲೋಪದೋಷಗಳು ಕಂಡುಬಂದಿದರೆ ತಿರಸ್ಕೃತ ಮಾಡುತ್ತಾರೆ.
ಐಟಿ ಅಧಿಕಾರಿಗಳು ಸಹ ನಾಲ್ಕು ದಿನಗಳ ಹಿಂದಷ್ಟೇ ಡಿಕೆ ಶಿವಕುಮಾರ್ಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಅಲ್ಲದೆ ಏಪ್ರಿಲ್ 17 ರಂದು ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ ನಂತರ ಐಟಿ ಅಧಿಕಾರಿಗಳು ಆಸ್ತಿ ವಿವರದ ಮಾಹಿತಿ ಪಡೆದಿದ್ದಾರೆ. ಜೊತೆಗೆ ಕನಕಪುರಕ್ಕೆ ಬಂದು ಮಾಹಿತಿ ಪಡೆದು ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲೇ ಡಿಕೆ ಶಿವಕುಮಾರ್ ತಮ್ಮ ನಾಮಪತ್ರ ತಿರಸ್ಕಾರ ಆದ್ರೆ, ಸಹೋದರ ಕಣದಲ್ಲಿ ಇರಲಿ ಎಂಬ ಲೆಕ್ಕಾಚಾರಿಂದ ನಾಮಿನೇಷನ್ ಫೈಲ್ ಮಾಡಿಸಿದ್ದಾರೆ.
ಸುಳ್ಳು ಮಾಹಿತಿ ಎಂದು ಸಾಬೀತಾದರೆ ಕಷ್ಟ
ಒಂದು ವೇಳೆ ಡಿಕೆಶಿ ನಾಮಪತ್ರ ತಿರಸ್ಕಾರವಾದರೆ ಕಣದಲ್ಲಿ ‘ಕೈ’ ಅಭ್ಯರ್ಥಿಯೇ ಇಲ್ಲದಂತಾಗುತ್ತೆ. ಹೀಗಾಗಿ ಡಿಕೆ ಶಿವಕುಮಾರ್ ನಾಮಪತ್ರ ತಿರಸ್ಕೃತವಾದರೂ ಸಹೋದರ ಇರಲಿ. ಕ್ಷೇತ್ರದಲ್ಲಿ ನಮ್ಮದೇ ಕುಟುಂಬದ ಹಿಡಿತವಿರಲಿ ಎನ್ನುವುದು ಡಿಕೆ ಶಿವಕುಮಾರ್ ಅವರ ಲೆಕ್ಕಾಚಾರವಾಗಿದೆ. ಇನ್ನು ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಒಂದೇ ವೇಳೆ ಯಾರಾದರೂ ತಕರಾರು ಹಾಕಿದರೆ ಸಮಸ್ಯೆಯಾಗಲಿದೆ. ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ಎಂದು ದೂರು ನೀಡಿದರೆ ಸಂಕಷ್ಟ ಎದುರಾಗಲಿದೆ.
ಚುನಾವಣಾ ಅಧಿಕಾರಿಗಳು ಡಿಕೆ ಶಿವಕುಮಾರ್ ಆಸ್ತಿ ವಿವರ ಪರಿಶೀಲನೆ ಮಾಡಲಿದ್ದು, ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿರುವುದು ಸಾಬೀತಾದ್ರೆ ನಾಮಪತ್ರ ತಿರಸ್ಕೃತ ಸಂಭವವಿದೆ. ಹೀಗಾಗಿಯೇ ಸೇಫರ್ ಸೈಡ್ಗಾಗಿ ಡಿ.ಕೆ.ಸುರೇಶ್ ಅವರಿಂದ ನಾಮಪತ್ರ ಸಲ್ಲಿಸಿದ್ದಾರೆ. ಪ್ಲ್ಯಾನ್ A ಫೇಲ್ ಆದರೂ ಪ್ಲ್ಯಾನ್ B ಸಕ್ಸಸ್ ಆಗಲಿ ಎನ್ನುವುದು ಡಿಕೆಶಿ ಲೆಕ್ಕಾಚಾರವಾಗಿದೆ. ಪರಿಶೀಲನೆ ವೇಳೆ ಆಸ್ತಿ ವಿವರ, ತೆರಿಗೆ ವಿಚಾರ ಕುರಿತ ಅಂಶಗಳ ಕಾರಣದಿಂದ ನಾಮಪತ್ರ ಏನಾದರೂ ರಿಜೆಕ್ಟ್ ಆಗುತ್ತಾ, ತಮ್ಮ ಸಿಎಂ ಆಗುವ ಕನಸು ಭಗ್ನವಾಗುತ್ತಾ ಎಂಬ ಆತಂಕ ಡಿಕೆ ಶಿವಕುಮಾರ್ಗೆ ಶುರುವಾಗಿದ್ದು, ಅವರ ರಾಜಕೀಯ ಭವಿಷ್ಯ ಏನಾಗಲಿದೆ ಎನ್ನುವುದು ಕಾದುನೋಡಬೇಕಿದೆ.