ಕಳೆದ ಒಂದು ವಾರದಿಂದ ಸುಡಾನ್ ನಲ್ಲಿ ನಡೆಯುತ್ತಿರುವ ಸೇನೆ ಮತ್ತು ಅರೆಸೇನಾ ಪಡೆಗಳ ಯುದ್ಧದಿಂದ ಭಾರಿ ಸಾವು ನೋವುಗಳು ಸಂಭವಿಸಿದೆ. ಈ ಮಧ್ಯೆ ಸುಡಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣಾ ಕಾರ್ಯವು ಭರದಿಂದ ಸಾಗಿದೆ. ಇದೀಗ ಸುಡಾನ್ನ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ಮಾನವೀಯ ಆಧಾರದ ಮೇಲೆ 72 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಹೇಳಿವೆ.
ಮುಸ್ಲಿಂ ರಜಾದಿನವಾದ ಈದ್ ಅಲ್- ಫಿತರ್ ಇರುವ ಕಾರಣ ಕದನ ವಿರಾಮ ಘೋಷಣೆ ಮಾಡಿದೆ. ಏ.14ರಂದು ರಾಜಧಾನಿ ಖಾರ್ಟೂಮ್ ಬಾಂಬ್ ಸ್ಫೋಟ ಮತ್ತು ಶೆಲ್ ದಾಳಿಯಿಂದ ತತ್ತರಿಸಿತು. ಈ ಬಗ್ಗೆ ಸೇನೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಅವರು ಸೇನೆಯ ಫೇಸ್ಬುಕ್ ಪುಟದಲ್ಲಿ ಲೈವ್ ಬಂದಿದ್ದು, ಕದನ ವಿರಾಮದ ಬಗ್ಗೆ ಪ್ರಸ್ತಾಸಪಿಸಿಲ್ಲ ಎಂದು ಹೇಳಲಾಗಿದೆ.
ಈದ್ ಅಲ್-ಫಿತರ್ ಆಚರಣೆ ಇರುವ ಕಾರಣ ಕದನ ವಿರಾಮವನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಾಗರಿಕರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್ಗಳನ್ನು ತೆರೆಯಲು ಅವಕಾಶವನ್ನು ನೀಡಲಾಗಿದೆ ಎಂದು ಆರ್ಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.