ತನ್ನ ಆರೋಗ್ಯದ ಕುರಿತಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ನಟಿ ಐಶ್ವರ್ಯಾ ರೈ ಪುತ್ರಿ ಅರಾಧ್ಯ ಬಚ್ಚನ್ ಕೋರ್ಟ್ ಮೆಟ್ಟಿಲೇರಿದ್ದು ಇದೀಗ ಆರಾಧ್ಯಗೆ ಗೆಲುವು ಸಿಕ್ಕಿದೆ.
ಆರಾಧ್ಯ ಅಸ್ವಸ್ಥ, ಆರಾಧ್ಯ ಇನ್ನಿಲ್ಲ ಎಂಬಂತಾ ರೀತಿಯ ವರದಿಗಳನ್ನು ಪ್ರಸಾರ ಮಾಡುವ ಮೂಲಕ ತಪ್ಪಾದ ಮಾಹಿತಿಯನ್ನು ಯೂಟ್ಯೂಬ್ ಗಳು ನೀಡುತ್ತಿವೆ. ಇಂತಹ ಯೂಟ್ಯೂಬ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟಿಗೆ ಆರಾಧ್ಯ ಬಚ್ಚನ್ ಮೊರೆ ಹೋಗಿದ್ದರು. ಈ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ತಗೆದುಕೊಂಡಿದ್ದು ಇದೀಗ ಪ್ರರಕಣದಲ್ಲಿ ಅರಾಧ್ಯ ಬಚ್ಚನ್ ಗೆ ಗೆಲುವು ಸಿಕ್ಕಿದೆ.
ಅಮಿತಾಭ್ ಮೊಮ್ಮಗಳು, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನೀಡಿದ ದೂರಿನನ್ವಯ ದೆಹಲಿ ಹೈಕೋರ್ಟ್ ಹಲವಾರು ಯೂಟ್ಯೂಬ್ ಚಾಲನೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಆರಾಧ್ಯ ಕುರಿತಾಗಿ ತಪ್ಪಾದ ಮಾಹಿತಿ ಹಂಚಿಕೊಂಡ ಯೂಟ್ಯೂಬ್ ವರದಿಗಳನ್ನು ಗೂಗಲ್ ನಿಂದ ತೆಗೆದು ಹಾಕಬೇಕು ಎಂದು ಗೂಗಲ್ ಗೆ ನಿರ್ದೇಶಿಸಿದೆ. ಪ್ರತಿಯೊಂದು ಮಗುವಿನ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಕೋರ್ಟ್ ಹೇಳಿದೆ.
ಇಲ್ಲಸಲ್ಲದ ಸುಳ್ಳು ಸುದ್ದಿ ಬಿತ್ತರಿಸುವ ಖಾಸಗಿ ಯೂಟ್ಯೂಬರ್ಗಳಿಗೆ ಇದು ಎಚ್ಚರಿಕೆಯ ಗಂಟೆಯಾಗಲಿ ಎನ್ನುವ ಕಾರಣಕ್ಕೆ ಅರಾಧ್ಯ ಬಚ್ಚನ್ ಕೋರ್ಟ್ ಮೆಟ್ಟಿಲು ಏರಿದ್ದರು.