ಬೆಂಗಳೂರು: ಸುತ್ತಾಮುತ್ತಾ ರೌಡಿ ಇಟ್ಕೊಂಡ್ರೆ ಚಾಮರಾಜಪೇಟೆ ಡಾನ್ ಆಗಲ್ಲ ಎಂದು ಜಮೀರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಕಿಡಿಕಾರಿದ್ದಾರೆ. ಈ ಸಂಬಂಧ ಚಾಮರಾಜಪೇಟೆಯಲ್ಲಿ ಮಾತನಾಡಿದ ಅವರು, ಚಾಮರಾಜಪೇಟೆ ಸುತ್ತಾಮುತ್ತಾ ರೌಡಿಗಳನ್ನು ಯಾರು ಇಟ್ಕೊಂಡಿದ್ದಾರೆ ಅನ್ನೋದು ನನಗೆ ಗೊತ್ತಿದೆ. ಭಾಸ್ಕರ್ ರಾವ್ ಚಾಮರಾಜಪೇಟೆ ಮನೆ ಮಗ ಅಲ್ಲ ಅಂತಾರೆ. ನಾನೇನು ಅನಾಥನಾ? ನಾನೇನು ಪರದೇಶದಿಂದ ಬಂದಿದ್ದೇನಾ. ನಿಮಗಿಂತ ಹೆಚ್ಚು ನನಗೆ ಚಾಮರಾಜಪೇಟೆ ಮೇಲೆ ಹಕ್ಕಿದೆ ಎಂದು ಭಾಸ್ಕರ್ ಹೇಳಿದ್ದಾರೆ. ನಾನು ಬೆಂಗಳೂರು ಮಣ್ಣಿನ ಮಗ. ಚಾಮರಾಜಪೇಟೆಯನ್ನ ಎಷ್ಟು ಕೆಟ್ಟದಾಗಿ ಇಟ್ಟಿದ್ದಾರೆ ನೋಡಿ.
ಬಂದ ಅನುದಾನವೆಲ್ಲಾ ಎಲ್ಲಿ ಹೋಯ್ತು..!? ಜಮೀರ್ ಅಹ್ಮದ್ 500 ಕೋಟಿ ಬಂಗ್ಲೆ ಕಟ್ಟಿದ್ರು. ಪರ ಪರ ದುಡ್ಡು ಹಂಚಿದ್ರು ಎಂದು ಭಾಸ್ಕರ್ ರಾವ್ ಕಿಡಿಕಾರಿದ್ರು. ಮಡಿವಂತಿಕೆ ಬಗ್ಗೆ ಪ್ರಶ್ನೆ ಕೇಳೋಕೆ ಅವ್ರಿಗೆ ಹಕ್ಕಿಲ್ಲ. ಜಮೀರ್ ನಿಮ್ ಸುತ್ತಾಮುತ್ತಾ ಎಷ್ಟು ಕೇಸ್ ಇರೋರು ಇದ್ದಾರೆ. ಶಾಸಕ ಜಮೀರ್ ಎಷ್ಟು ಜನರಿಗೆ ಸುಮ್ ಸುಮ್ನೆ ರೌಡಿಶೀಟರ್ ಪಟ್ಟ ಕಟ್ಟಿದ್ದಾರೆ ಅನ್ನೋದು ನಂಗೆ ಗೊತ್ತಿದೆ. ಜಮೀರ್ ನಿಮ್ ಅನ್ಯಾಯದ ಪಟ್ಟಿ ನನ್ನ ಜೊತೆ ಇದೆ. ನೀವು ಜಾಸ್ತಿ ಮಾತಾನಾಡಿದ್ರೇ ನಾನು ಬಿಡಬೇಕಾಗುತ್ತೆ. ವೋಟು ಮಾಡೋರು ರಾಜ. ನಂಗೆ ಗೊತ್ತು ಯಾರ ಮನೆಗೆ ಹೋಗಬೇಕು ಹೋಗಬಾರದು. ಗಾಜಿನ ಮನೆಯಲ್ಲಿದ್ದು ಕಲ್ಲೆಸೆಯಬಾರದು ಅಂತಾ ಕಲಿಯಿರಿ ಮೊದಲು ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.