ತುಂಟ ತುಟಿಗಳ ಮೂಲಕ ಬೆಳ್ಳಿಪರದೆಗೆ ಕಿಸ್ ಕೊಟ್ಟಿದ್ದ ಚಂದವನದನ ಹ್ಯಾಂಡ್ಸಮ್ ಹೀರೋ ವಿರಾಟ್ ಗೆ ಬಂಪರ್ ಆಫರ್ ಸಿಕ್ಕಿದೆ. ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಫ್ಯೂಚರ್ ಸೂಪರ್ ಸ್ಟಾರ್ ಎಂಬ ಭರವಸೆ ಮೂಡಿಸಿದ್ದ ಈ ಹುಡ್ಗನಿಗೆ ಬಂಗಾರದ ಅವಕಾಶ ಒಲಿದು ಬಂದಿದೆ.
ಕಿರುತೆರೆಯಿಂದ ಬಣ್ಣದ ಬದುಕು ಶುರು ಮಾಡಿದ್ದ ವಿರಾಟ್ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆಯುವ ಕನಸು ಕಟ್ಟಿಕೊಂಡಿದ್ದಾರೆ.
ಅದರಂತೆ ಒಂದೊಂದೆ ಹೆಜ್ಜೆ ಇಟ್ಟು ಸಾಗ್ತಿರುವ ಈ ಪ್ರತಿಭಾನ್ವಿತ ಕಲಾವಿದನಿಗೆ ಸುಕ್ಕ ಸೂರಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಕಿಸ್ ಚಿತ್ರದ ಬಳಿಕ ಮತ್ತೊಮ್ಮೆ ಎಪಿ ಅರ್ಜುನ್ ಜೊತೆಗೂಡಿ ಅದ್ಧೂರಿ ಲವರ್ಸ್ ಸಿನಿಮಾ ಮಾಡ್ತಿರುವ ವಿರಾಟ್, ಜಯಣ್ಣ ಕಾಂಬೈನ್ಸ್ ನಿರ್ಮಾಣದ ರಾಯಲ್ ಚಿತ್ರದಲ್ಲಿಯೂ ನಾಯಕನಾಗಿ ನಟಿಸುತ್ತಿದ್ದಾರೆ.
ದಿನಕರ್ ತೂಗದೀಪ್ ನಿರ್ದೇಶನದ ಈ ಚಿತ್ರ ತೆರೆಗೆ ಬರುವ ಮೊದ್ಲೇ ಜಯಣ್ಣ ಭೋಗಣ್ಣ ವಿರಾಟ್ ಗೆ ಮತ್ತೊಂದು ಚಾನ್ಸ್ ಕೊಟ್ಟಿದ್ದಾರೆ.
ಕನ್ನಡದ ಮಾಸ್ ಡೈರೆಕ್ಟರ್ ಸೂರಿ ಗರಡಿಯಲ್ಲಿ ಒಮ್ಮೆಯಾದ್ರೂ ಕೆಲಸ ಮಾಡ್ಬೇಕು. ಅವ್ರಿಂದ ಆಕ್ಷನ್ ಕಟ್ ಹೇಳಿಸಿಕೊಳ್ಳಬೇಕೆಂಬ ಕನಸ್ಸು ಫ್ಲಸ್ ಹುಮ್ಮಸ್ಸು ಎಲ್ಲಾ ಕಲಾವಿದರಿಗೆ ಇದ್ದೇ ಇರುತ್ತದೆ. ಆ ಕನಸು ಈಗ ವಿರಾಟ್ ಮಡಿಲು ಸೇರಿದೆ. ಜಯಣ್ಣ ಭೋಗಣ್ಣ ನಿರ್ಮಾಣದ, ಸೂರಿ ನಿರ್ದೇಶನದ ಮಾಸ್ ಎಂಟರ್ ಟೈನರ್ ನಲ್ಲಿ ಕಿಸ್ ಹುಡ್ಗ ಕಂಗೊಳಿಸೋದಂತು ಖಚಿತ..
ಈ ಮೂಲಕ ವಿರಾಟ್ ತಮ್ಮ ಕನಸು ನನಸಾಗಿದೆ. ಶೀಘ್ರದಲ್ಲಿಯೇ ಈ ಪ್ರಾಜೆಕ್ಟ್ ಟೇಕಾಫ್ ಆಗಲಿದ್ದು, ಮತ್ತಷ್ಟು ಅಪ್ ಡೇಟ್ ನೊಂದಿಗೆ ನಿಮ್ಮ ಮುಂದೆ ಬರಲಿದೆ.
ಮೇಘ.ಎಸ್, ಫಿಲ್ಮಂ ಬ್ಯೂರೋ..