ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಇದೀಗ ಈ ಜೋಡಿಯಾ ‘ಮತ್ತೆ ಮದುವೆ’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಟೀಸರ್ ನಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನೇ ಸಿನಿಮಾ ಮಾಡಿದ ಎಲ್ಲ ಕುರುಹುಗಳನ್ನು ನರೇಶ್ ಬಿಟ್ಟುಕೊಟ್ಟಿದ್ದಾರೆ. ಅಲ್ಲದೇ, ಕಾನೂನು ಮೂಲಕ ಹೋರಾಟ ಮಾಡುತ್ತಿರುವ ಪತ್ನಿ ರಮ್ಯಾ ಅವರಿಗೆ ಟೀಸರ್ ನಲ್ಲಿ ನರೇಶ್ ಟಾಂಗ್ ನೀಡಿದ್ದಾರೆ.
ಕೆಲ ತಿಂಗಳ ಹಿಂದೆ ಪತಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರನ್ನು ರಮ್ಯಾ ಮೈಸೂರು ಲಾಡ್ಜ್ ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಬಿಟ್ಟಿದ್ದರು. ಆ ದೃಶ್ಯವನ್ನೂ ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಅಂದು ರಮ್ಯಾ ಮಾಧ್ಯಮಗಳ ಮುಂದೆ ಮಾಡಿದ ಎಲ್ಲಾ ಆರೋಪಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ ಅದರ ಝಲಕ್ ಅನ್ನು ಟೀಸರ್ ನಲ್ಲೂ ತೋರಿಸಲಾಗಿದೆ. ಈ ಮೂಲಕ ಅನೇಕ ವಿಷಯಗಳಲ್ಲಿ ಪತ್ನಿ ರಮ್ಯಾಗೆ ನರೇಶ್ ಟಾಂಗ್ ನೀಡಿದ್ದಾರೆ.
ರಾಜು ನಿರ್ದೇಶನದ ಮತ್ತೆ ಮದುವೆ ಸಿನಿಮಾಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ಕಥೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರವರ ಪಾತ್ರಗಳನ್ನು ಅವರೇ ಮಾಡಿದ್ದು ಈ ಸಿನಿಮಾಗೆ ನರೇಶ್ ಬಂಡವಾಳ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಮದುವೆ ಸಿನಿಮಾ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.