ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ರಾತ್ರೋ ರಾತ್ರಿ ಫೇಮಸ್ ಆದ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆ ಬಳಿಕ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ತಮ್ಮ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಾಗುವ ವಿವೇಕ್ ಅಗ್ನಿಹೋತ್ರಿ ಇದೀಗ ತಾವು ಮಾಡಿರುವ ಟ್ವೀಟ್ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿ ಪಶ್ಚಿಮ ಬಂಗಾಳದ ಬಗ್ಗೆ ಟ್ವೀಟ್ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಬುಕ್ ಸೈನಿಂಗ್ ಇವೆಂಟ್ನ ಸ್ಥಳವನ್ನು ಬದಲಾಯಿಸಲಾಗಿದೆ. ಅರ್ಬನ್ನಕ್ಸಲ್ಸ್ ಬುಕ್ ಸೈನಿಂಗ್ ಇವೆಂಟ್ನ್ನು ಕ್ವೆಸ್ಟ್ ಮಾಲ್ನಿಂದ ಸ್ಟಾರ್ ಮಾರ್ಕ್ ಬುಕ್ ಶಾಪ್, ಸೌತ್ ಸಿಟಿ ಮಾಲ್ಗೆ ಬದಲಾಯಿಸಲಾಗಿದೆ. ಕ್ವೆಸ್ಟ್ ಮಾಡಲ್ ಮುಸ್ಲಿಂ ಏರಿಯಾ ಆಗಿರುವುದರಿಂದ ಅದು ಸೇಫ್ ಅಲ್ಲ ಎಂದು ಹೇಳಲಾಯಿತು. ಆಧುನಿಕ ಬಂಗಾಳದ ದುರಂತ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ಮುಸ್ಲಿಮರನ್ನು ಅಕ್ರಮವಾಗಿ ಮಾಲ್ ಹೈಜಾಕ್ ಮಾಡಲು ಬಿಟ್ಟಿದ್ದಕ್ಕಾಗಿ ವಿವೇಕ್ ಅಗ್ನಿಹೋತ್ರಿ ಪಶ್ಚಿಮ ಬಂಗಾದ ಮುಖ್ಯಮಂತ್ರಿಯನ್ನು ದೂಷಿಸಿದ್ದಾರೆ. ಸ್ನೇಹಿತರೇ ಇದು ನಿಜಕ್ಕೂ ದುರಂತ. ಹಾಗೆಯೇ ಇದೊಂದು ಮುನ್ನೆಚ್ಚರಿಕೆಯ ಪರಿಸ್ಥಿತಿ. ಭಾರತೀಯ ಮಾಲ್ ಒಂದಕ್ಕೆ ಭಾರತೀಯ ಬರಹಗಾರನಿಗೇ ಎಂಟ್ರಿ ಇಲ್ಲ.
ಅದೂ ಕೂಡಾ ಅದು ಮುಸ್ಲಿಂ ಮೆಜಾರಿಟಿ ಎನ್ನುವ ಕಾರಣದಿಂದ. ಮಮತಾ ಬ್ಯಾನರ್ಜಿ ಅವರು ಅಧಿಕೃತವಾಗಿ ಮುಸ್ಲಿಮರನ್ನು ಅನಧಿಕೃತವಾಗಿ ಮಾಲ್ ಹೈಜಾಖ್ ಮಾಡಲು ಬಿಟ್ಟಿದ್ದಾರೆ. ವಿಪರ್ಯಾಸ ಏನೆಂದರೆ ಈ ಪುಸ್ತಕ ಕೂಡಾ ಅರ್ಬನ್ ನಕ್ಸಲ್ಸ್ ಎಂದಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಸುಪ್ರಿಯೋ ಇದು ಸರಿಯಲ್ಲ ಎಂದಿದ್ದಾರೆ. ನಾನು ಬಾಲಿಗಂಜ್ನ ಶಾಸಕ. ಕ್ವೆಸ್ಟ್ ಮಾಲ್ ಇದೇ ಏರಿಯಾದಲ್ಲಿ ಇದೆ ಎಂದು ಅವರು ಉತ್ತರಿಸಿದ್ದಾರೆ.
ಪ್ರೀತಿಯ ವಿವೇಕ್ ಅಗ್ನಿಹೋತ್ರಿ ನೀವು ನನ್ನ ಸಹುದ್ಯೋಗಿ. ಹಾಗೆಯೇ ನಿಮ್ಮ ಒತ್ನಿ ಪಲ್ಲವಿ ಅವರನ್ನೂ ಚೆನ್ನಾಗಿ ಗೊತ್ತು. ಆದರೆ ನೀವು ಹೇಳಿರುವ ಕಾರಣದಿಂದ ಇವೆಂಟ್ ಬದಲಾಯಿಸಲು ನಿರ್ಧರಿಸಿದ್ದೀರಿ ಎನ್ನುವುದು ನನಗೆ ಬೇಸರವಾಗಿದೆ ಎಂದಿದ್ದಾರೆ.
ನಾನು ಅಸಹಾಯಕ ಅಲ್ಲ. ದಯವಿಟ್ಟು ಕೊಲ್ಕತ್ತಾಗೆ ಒಂದು ದಿನ ಮೊದಲೇ ಬನ್ನಿ. ನೀವು ನಿಮ್ಮ ಜೀವನದಲ್ಲಿಯೇ ಬೆಸ್ಟ್ ಬುಕ್ ರಿಲೀಸ್ ಇವೆಂಟ್ ಅನುಭವ ಪಡೆಯುವಿರಿ ಎಂದು ನಾನು ಖಾತರಿಪಡಿಸುತ್ತೇನೆ. ನಾನು ವೈಯಕ್ತಿಕವಾಗಿ ನಿಮ್ಮ ಕಾಳಜಿ ವಹಿಸುತ್ತೇನೆ. ಗೇಮ್ ಎಂದು ಟ್ವೀಟ್ ಮಾಡಿ ಸುಪ್ರಿಯೋ ಚಾಲೆಂಜ್ ಮಾಡಿದ್ದಾರೆ.