ಕರ್ನಾಟಕ ವಿಧಾನಸಭೆಯ ಚುನಾವಣೆ-2023ರ ಮತದಾನ ಮೇ 10 ರಂದು ನಡೆಯಲಿದ್ದು, ಶೇಕಡಾವಾರು ಮತದಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಲಹಂಕ ವಲಯ ವ್ಯಾಪ್ತಿಯಲ್ಲಿ ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪೂರ್ಣಿಮಾ.ಪಿ.ವಿ ರವರು ಇಂದು ಜಕ್ಕೂರಿನಲ್ಲಿರುವ ಜವಾಹರಲಾಲ್ ನೆಹರೂ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್(ಭಾರತೀಯ ವಿಜ್ಞಾನಿ) ರವರ ನೇತೃತ್ವದಲ್ಲಿ ಇಂದು ಅಧ್ಯಯನ ಕೇಂದ್ರದ ಮುಖ್ಯ ಆಡಳಿತಾಧಿಕಾರಿ, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು, ಸಂಸ್ಥೆಯ ಆಡಳಿತ ಸಿಬ್ಬಂದಿಗಳಿಗೆ ಮತದಾನ ಮಾಡುವ ಬಗ್ಗೆ ಅರಿವು ಮೂಡಿಸಿದ ನಂತರ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ವಿವಿಧ ಸ್ಥಳಗಳಲ್ಲಿ ಮತ ಜಾಗೃತಿ:
ಯಲಹಂಕ ವಲಯ ವಿದ್ಯಾರಣ್ಯಪುರ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬಂದಂತಹ ಭಕ್ತರುಗಳಿಗೆ, ಕಾಪಿ ಬೋರ್ಡ್, ದಾಸರಹಳ್ಳಿ, ನಂಜಪ್ಪ ವೃತ್ತ ನಿವಾಸಿಗಳು, ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ಆಟೋ ಚಾಲಕರು, ಉದ್ದಿಮೆದಾರರು, ಕೋಡಿಗೆಹಳ್ಳಿ ಸ್ವಾತಿ ಗಾರ್ಡನ್ ಹೋಟೆಲ್ ನೌಕರರು, ಗ್ರಾಹಕರು, ಸಾರ್ವಜನಿಕರಿಗೆ ಬೀದಿ ಬದಿ ನಾಟಕ, ಮತದಾನ ಜಾಗೃತಿ ಹಾಗೂ ಜಾಥಾ ಮೂಲಕ ಅಭಿಯಾನ ನಡೆಸಿ ಮೇ 10ರಂದು ತಪ್ಪದೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ತಿಳುವಳಿಕೆ ಮೂಡಿಸಲಾಯಿತು. ಈ ವೇಳೆ ಉಪ ಆಯುಕ್ತರಾದ, ಡಾ. ಮಮತಾ, ಸಹಾಯಕ ಕಂದಾಯ ಅಧಿಕಾರಿಗಳಾದ ಶ್ರೀನಿವಾಸ್, ಕಂದಾಯ ವಿಭಾಗದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.