ತುಮಕೂರು: ಆಸ್ತಿ ವಿಚಾರದಲ್ಲೂ ಸುಳ್ಳು ದಾಖಲೆ ನೀಡಿದ ಆರೋಪ ಹಾಗೂ ಅಫಿಡವಿಟ್ ನಲ್ಲಿ ಕೋಟ್೯ ಕೇಸ್ ವಿಚಾರಗಳನ್ನ ಮರೆಮಾಚಿರೋ ಆರೋಪದಲ್ಲಿ (D Krishnakumar) ಕುಣಿಗಲ್ ಬಿಜೆಪಿ ಅಭ್ಯರ್ಥಿಗೆ ಎದುರಾಗುತ್ತಾ ಸಂಕಷ್ಟ ಎಂಬ ಪ್ರಶ್ನೆಗಳು ಮೂಡುತ್ತಿದೆ. ನಾಮಪತ್ರದಲ್ಲಿ ಹಲವು ವಿಚಾರ ಕೈಬಿಟ್ಟ ಬಗ್ಗೆ ಚುನಾವಣಾಧಿಕಾರಿಗಳಿಗೆ ದುರು ನೀಡಿದ್ದು, ಕುಣಿಗಲ್ ಬಿಜೆಪಿ(BJP) ಅಭ್ಯರ್ಥಿ ಡಿ.ಕೃಷ್ಣಕುಮಾರ್ (D Krishnakumar) ನಾಮಪತ್ರ ರದ್ದುಗೊಳಿಸುವಂತೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ದೂರು ನೀಡಿದ್ದಾರೆ.
Section 125A, of representation people act 1951 ರಂತೆ ನಾಮಪತ್ರ ರದ್ದುಗೊಳಿಸುವಂತೆ ಪತ್ರ ಬರೆದಿದ್ದು, ಹಲವು ಆಸ್ತಿ ವಿಚಾರ, ಚೆಕ್ ಬೌನ್ಸ್ ಕೇಸ್ ಗಳಿದ್ರು ಯಾವ ಮಾಹಿತಿ ನೀಡಿಲ್ಲಾ ಎಂಬ ಆರೋಪ ದೂರು ನೀಡಿದ ಪತ್ರದಲ್ಲಿ ನಮೂನೆಯಾಗಿದೆ. ನಿನ್ನೆ ನಾಮಪತ್ರ ಅಂಗೀಕಾರ ಮಾಡಿರೋದರಿಂದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಕೋಟ್೯ ಮೆಟ್ಟಿಲೇರಲು ಸಿದ್ದತೆ ನಡೆಸಿದ್ದು, ಕೋಟ್೯ ಸೂಚನೆ ನೀಡಿದ್ರೆ ನಾಮಪತ್ರ (nomination paper) ರದ್ದಾಗುವ ಸಾಧ್ಯತೆಯಿದೆ. ಇದರಿಂದ ಕುಣಿಗಲ್ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಕನಸು ಭಗ್ನವಾಗುತ್ತದೆ.