ಬೆಂಗಳೂರು: ಸೀರೆಗಾಗಿ ಇಬ್ಬರು ಮಹಿಳೆಯರ ನಡುವೆ ಜಗಳ(Fight) ನಡೆದಿರುವ ಘಟನೆ ರಾಜಧಾನಿ (Bangalore) ಬೆಂಗಳೂರಿನಲ್ಲಿ ನಡೆದಿದೆ. ನಗರದ ಮಲ್ಲೇಶ್ವರಂ ನ 8ನೇ ಕ್ರಾಸ್ನಲ್ಲಿ ಘಟನೆ ನಡೆದಿದ್ದು, ಕೆ.ಎಸ್.ಐ.ಸಿ ಹಾಕಿದ್ದ ಸೀರೆಗಳ ಡಿಸ್ಕೌಂಟ್ ಸೇಲ್ ನಲ್ಲಿ ಗಲಾಟೆ ನಡೆದಿದೆ. ಸೀರೆಗಾಗಿ ಇಬ್ಬರು ಮಹಿಳೆಯರ (Womens)ನಡುವೆ ಫೈಟ್ ನಡೆದಿದ್ದು, ಪರಸ್ಪರ ಜಡೆ ಹಿಡಿದುಕೊಂಡು ಗಲಾಟೆ ಮಾಡಿಕೊಂಡಿದ್ದಾರೆ.
ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು,ಮಹಿಳೆಯರನ್ನು ಜಗಳ ಮಾಡದಂತೆ ಬುದ್ದಿ ಹೇಳಿ ಕಳಿಸಿದ್ದಾರೆ. ಮಲ್ಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಲಾಟೆ ಸಂಬಂಧ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಮಹಿಳೆಯರ ಗಲಾಟೆಯ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
SHARE.Facebook