ಬೆಳಗಾವಿ:- ಬಂದ್ರ ಮಾಮಾನ ಬುಲೆಟ್ ಗಾಡಿ ಹಾಡಿನ ಗಾಯಕನ ಮೇಲೆ ನಾ ಡ್ರೈವರ್ ನನ್ನ ಲವರ್ ಎಂಬ ಹಾಡಿನ ಗಾಯಕನಿಂದ ಮಾರಣಾಂತಿಕ ಹಲ್ಲೆ! ನಿಪ್ಪಾಣಿ ಮುದೋಳ ರಾಜ್ಯ ಹೆದ್ದಾರಿ ಮೇಲೆ ತಡರಾತ್ರಿ ಖ್ಯಾತ ಜಾನಪದ ಗಾಯಕ ಪರಸು ಕೂಲೂರ ಹತ್ಯೆಗೆ ಸಿನಿಮಿಯ ರೀತಿಯಲ್ಲಿ ಹಾಕಿದ್ರಾ ಸ್ಕೆಚ್.? ಹೌದು ರಾಯಬಾಗ ತಾಲೂಕಿನ ಮಂಟೂರ ಗ್ರಾಮದಲ್ಲಿ ಬೀರೇಶ್ವರ ಜಾತ್ರಾ ನಿಮಿತ್ಯ ಜಾನಪದ,ಚಿತ್ರ ರಸಮಂಜರಿ(ಆರ್ಕೆಸ್ಟ್ರಾ) ಕಾರ್ಯಕ್ರಮ ಒಂದನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಖ್ಯಾತ ಜಾನಪದ ಗಾಯಕ ಪರಶು ಕೊಲುರ ಹಾಗೂ ತಂಡ ಆಗಮಿಸಿತ್ತು. ಪರಶು ಕೋಲೂರ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದನ್ನು ಮೊದಲೇ ತಿಳಿದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಾರ್ಯಕ್ರಮ ಮುಗಿಸಿ ಊರಿಗೆ ಹೊರಡುವ ಸಮಯದಲ್ಲಿ ಮಹಾಲಿಂಗಪುರ ಚಿಕ್ಕೋಡಿಯ ಮುಖ್ಯರಸ್ತೆಯಲ್ಲಿ ಬರುವ ರೇಷ್ಮೆ ಫಾರ್ಮ್ ಹತ್ತಿರ ಪರಸು ಕೊಲೂರ ಕಾರನ್ನ ಬುಲೆರೋ ಕಾರೊಂದು ಹಿಂಬಾಲಿಸಿ ಬಂದು ಪರಸು ಕೊಲುರ ಕಾರನ್ನು ತೆಗ್ಗಿಗೆ ತಳ್ಳಿ ಕಾರಿನಲ್ಲಿದ್ದ ಓರ್ವ ಗಾಯಕಿ ಹೆಣ್ಣುಮಗಳನ್ನು ಸೇರಿ ಒಟ್ಟು ನಾಲ್ಕು ಜನರನ್ನು ದುಷ್ಕರ್ಮಿಗಳು ಮನಬಂದಂತೆ ತಳಿಸಿ ಪರಾರಿಯಾಗಿರುತ್ತಾರೆ.
ಮೂಲತಃ ಪರಸು ಕೊಲುರ ಎಂಬ ಗಾಯಕ ಹಾಗೂ ತಂಡ ಮಂಟೂರ ಗ್ರಾಮದಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಸ್ವಗ್ರಾಮಕ್ಕೆ ಹೊಗುವಾಗ ಮಾಳು ನಿಪನ್ಯಾಳ ಎಂಬ ಕೀಚಕ ಪಾಪಿ ಪರಸು ಕೊಲುರ ಗಾಯಕರ ಹಾಗೂ ಗಾಯಕಿರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಾರು ನುಜ್ಜು ಗುಜ್ಜು ಮಾಡಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ (ಜಾನಪದ) ಗಾಯಕರು ಹೆದರಿ ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಯಬಾಗ ಪೋಲಿಸರು ಸ್ಥಳಕ್ಕೆ ಭೆಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.ಇನ್ನೂ ಗಾಯಕರಲ್ಲಿ ಹಾಡುವ ಮೂಲಕ ನಾ ಹೆಚ್ಚು ನೀ ಹೆಚ್ಚು ಎಂಬ ದ್ವೇಷ ಇಟ್ಟುಕೊಂಡಿದ್ದರು. ಹಾಗಾಗಿ ನನ್ನ ವ್ಯಾಪ್ತಿಯ ಗ್ರಾಮದ ಆಜು ಬಾಜು ಹಳ್ಳಿಗೆ ನನ್ನ ವಿರೋಧಿಯನ್ನ ಕರೆಯಿಸಿ ಹಾಡನ್ನು ಹಾಡಿಸಿದ್ದಾರೆ ಎಂಬ ದೂರುಗಳು ಗ್ರಾಮಸ್ಥರ ಬಾಯಲ್ಲಿ ಕೇಳಿ ಬರುತ್ತಿವೆ.ಇನ್ನೂ ರಾಯಬಾಗ ಪೊಲೀಸರು ಕಾನೂನಿನ ಪ್ರಕಾರ ಹಲ್ಲೆ ಮಾಡಿದವರ ವಿರುದ್ದ ಯಾವ ರೀತಿ ಕ್ರಮ ಕೈಗೊಳುತ್ತಾರೆ ಕಾದು ನೋಡಿ.
ವರದಿ:- ಬಾಳು ತೇರದಾಳ ಬೆಳಗಾವಿ