ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, (Bangalore)ಬೆಂಗಳೂರಿನಲ್ಲಿ ಪೊಲೀಸರು(Police) ಹದ್ದಿನ ಕಣ್ಣಿಟ್ಟಿದ್ದಾರೆ. ಅಕ್ರಮವಾಗಿ ಸಾಗಿಸಲಾಗುತ್ತಿರುವ, ನಗದು, ಮದ್ಯ, ಮಾದಕ ದ್ರವ್ಯಗಳು, ಆಭರಣ, ಉಡುಗೊರೆ ಸಾಮಗ್ರಿಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. (Bangalore)ಬೆಂಗಳೂರಿನಲ್ಲಿ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ಏಪ್ರಿಲ್ 20ರ ವರೆಗೆ 2894 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. 76,30,86,056 ಪ್ರಮಾಣ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇದುವರೆಗೆ ನಗರದಲ್ಲಿ ಚುನಾವಣೆಯ ಸಲುವಾಗಿ ಒಟ್ಟು 2894 ಎಫ್ಆರ್ ದಾಖಲಾಗಿದ್ದು 76,30,86,056 ಪ್ರಮಾಣದ ವಸ್ತುಗ ಳನ್ನು ಜಪ್ತಿ ಮಾಡಲಾಗಿದೆ. ಈ ವರೆಗೂ ಒಟ್ಟು ಬೆಂಗಳೂರು ನಗರದಲ್ಲಿ 743 ದೂರುಗಳು ಚುನಾವಣೆಯ ಸಂಬಂಧ ದಾಖಲಾಗಿದೆ. ಅದರಲ್ಲಿ 119 ಸುಳ್ಳು ದೂರುಗಳು, 622 ಪ್ರಕರಣದಲ್ಲಿ ಕ್ರಮಕೈಗೊಳ್ಳಲಾಗಿದೆ. ಉಳಿದ 2 ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.