ಲಂಡನ್: ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೂ ಒತ್ತು ನೀಡಿದ ಮತ್ತು ಕಾಯಕವೇ ಕೈಲಾಸ ಎಂಬ ಮಹೋನ್ನತ ಆದರ್ಶವನ್ನು 12ನೇ ಶತಮಾನದಲ್ಲೇ ಇಡೀ ಜಗತ್ತಿಗೆ ನೀಡಿದ ವಿಶ್ವಗುರು ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಹರಿಕಾರರು(Pioneers of Social Revolution). ಮನುಕುಲಕ್ಕೆ ಸಮಾನತೆಯ ಸೂತ್ರವನ್ನು ಹೇಳಿಕೊಟ್ಟವರು (Basaveshwara)ಬಸವೇಶ್ವರರು. ಜಗತ್ತಿನ ಆಡಳಿತ ಸೂತ್ರದಲ್ಲಿ ‘ಅನುಭವ ಮಂಟಪದ’ ಕಲ್ಪನೆಯ ಬೆಸುಗೆಯನ್ನು ಮಾಡಿದವರೂ ಬಸವಣ್ಣ. ನಾಡಿನೆಲ್ಲೆದೆ ಈ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರ( Basava Jayanti 2023) ಜನ್ಮದಿನವನ್ನು ಬಗೆಬಗೆಯಲ್ಲಿ ಆಚರಿಸಲಾಯಿತು.
ಈ ಕಾರಣದಿಂದ ಬಸವ ತತ್ವಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ಈ ಬಾರಿಯ ಬಸವ ಜಯಂತಿಯನ್ನು ಭಾರತ ಮೂಲದ (London) ಲಂಡನ್ ನಲ್ಲಿರುವ ಭಾರತೀಯರೂ ಅರ್ಥಪೂರ್ಣವಾಗಿ ಆಚರಿಸಿ ಗಮನಸೆಳೆದರು. ಭಾರತೀಯ ಪ್ರಜಾಸತ್ತೆಯ ಹಬ್ಬಗಳ ಸಂದರ್ಭದಲ್ಲಿ ಲಂಡನ್ನ(London) ಲ್ಯಾಂಬೆತ್ ನಗರದ ಥೇಮ್ಸ್ ನದಿಯ ದಂಡೆಯ ಆಲ್ಬರ್ಟ್ ಎಂಬಾಕ್ಮೆಂಟ್ನಲ್ಲಿರುವ ಬಸವೇಶ್ವರ ಪ್ರತಿಮೆ(Basaveshwara statue) ಬಳಿ ವಿಶೇಷ ಕಾರ್ಯಕ್ರಮಗಳು ಏರ್ಪಾಡಾಗುತ್ತಿರುತ್ತವೆ.
ಅದರಂತೆ ( Basava Jayanti 2023) ಬಸವ ಜಯಂತಿಯ ದಿನವಾದ (London)ಲಂಡನ್ನ ಬಸವೇಶ್ವರ ಪ್ರತಿಮೆ ಬಳಿ ದೇಶಪ್ರೇಮದ ಕೈಂಕರ್ಯ ನೆರವೇರಿಸಲಾಯಿತು. ಭಾರತೀಯ ಹೈಕಮೀಷನರ್ ವಿಕ್ರಮ್ ದೊರೆಸ್ವಾಮಿ(High Commissioner Vikram Doreswamy) ಸಹಿತ ಅನೇಕ ಅಧಿಕಾರಿಗಳು, ಉದ್ಯಮಿಗಳು, ಭಾರತ(Indian) ಮೂಲದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ(Basava Jayanti) ಬಸವೇಶ್ವರಿಗೆ ಗೌರವ ಸಮರ್ಪಿಸಿದರು ಎಂದು ಲಂಡನ್ನ ಬಸವೇಶ್ವರ ಫೌಂಡೇಷನ್ ಅಧ್ಯಕ್ಷರೂ ಆದ ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್(Former Mayor Dr. Neeraj Patil) ತಿಳಿಸಿದ್ದಾರೆ.