ಶಿಡ್ಲಘಟ್ಟ: ಕ್ಷೇತ್ರದಲ್ಲಿ ಬಿಜೆಪಿಯ ಅಲೆ ಎದ್ದಿದ್ದು, ಈ ಬಾರಿ ನಮ್ಮ ಅಭ್ಯರ್ಥಿ ರಾಮಚಂದ್ರಗೌಡ ಅತ್ಯಧಿಕ ಮತಗಳಿಂದ ಗೆದ್ದು ವಿಧಾನ ಸಭೆಗೆ ಆಯ್ಕೆ ಆಗಲಿದ್ದಾರೆ, ಆ ಮೂಲಕ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಸಾದ್ಯವಾಗಲಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ವಿಶ್ವಾಸ ವ್ಯಕ್ತ ಪಡಿಸಿದರು.
ನಗರದ ಬಿಜೆಪಿ ಕಚೇರಿ ಸೇವಾಸೌಧದಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ( ಸಾಮಾಜಿಕ ಜಾಲತಾಣದ) ಡಿಜಿಟಲ್ ಕಾರ್ಯಕರ್ತರ ಸಮ್ಮೇಳನವನ್ನು ಉದ್ಘಾಟಸಿ, ಕಾರ್ಯಕರ್ತರು ಹಾಗು ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ, ಅದರ ಜೊತೆಗೆ ರಾಜ್ಯದಲ್ಲಿ ಸಂಪೂರ್ಣ ಅಧಿಕಾರಕ್ಕೆ ಬರಬೇಕಾದರೆ ಕೋಲಾರ, ಚಿಕ್ಕಬಳ್ಳಾಪುರ, ಮತ್ತು ಬೆಂ ಗ್ರಾಮಾಂತರ ಜಿಲ್ಲೆಗಳಿಂದ ಕನಿಷ್ಠ 15 ಶಾಸಕರನ್ನು ಪಕ್ಷದಿಂದ ಆರಿಸಿ ಕಳುಹಿಸಬೇಕು ಆ ಮೂಲಕ ಇಡೀ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬರಬೇಕು ಆಗ ಮಾತ್ರ ಸ್ವಾವಲಂಬನೆಯ ನಿರ್ಧಾರಗಳು ತೆಗೆದು ಕೊಳ್ಳುಲು ಸಾಧ್ಯವಾಗುತ್ತದೆ ಎಂದರು. ಉತ್ತರ ಪ್ರದೇಶ ಹಾಗು ಗುಜರಾತ್ ರಾಜ್ಯಗಳಲ್ಲಿ ಸಂಪೂರ್ಣ ಬಹುಮತದ ಸರ್ಕಾರ ಇರುವುದರಿಂದ ಅಲ್ಲಿ ಗೂಂಡಾ ವರ್ತನೆ ನಿರ್ಮೂಲನೆ ಆಗುತ್ತಿದೆ, ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾದ್ಯವಾಗುತ್ತಿದೆ ಎಂದರು. ಬಿಜೆಪಿ ಪಕ್ಷವು ನುಡಿದಂತೆ ನಡೆಯುವುದರಿಂದ ಹಾಗು ಹಿಂದೆಂದೂ ಸಾದ್ಯವಾಗದ ನಿರ್ಧಾರಗಳನ್ನು ತೆಗೆದು ಕೊಂಡು ಅನುಷ್ಠಾನಕ್ಕೆ ತಂದಿರುವುದರಿಂದ ಜಾಮಾಜಿಕ ಜಾಲತಾಣಗಳಲ್ಲಿ ಇತರೆ ಪಕ್ಷಗಳಿಗಿಂತ ಪ್ರಭಲವಾಗಿದೆ, ಜನರು ಸತ್ಯವನ್ನು ಒಪ್ಪಿ ಪ್ರಚಾರ ಮಾಡುತ್ತಾರೆ ಅದಕ್ಕೆ ಯಾವ ಭಯವು ಬೇಕಾಗಿಲ್ಲ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜಾತಿ, ಧರ್ಮಗಳ ಆಧಾರಿತ ರಾಜಕಾರಣ ಸಲ್ಲ…!
ಬಿಜೆಪಿಯಲ್ಲಿ ಧರ್ಮ ಆಧಾರಿತ ರಾಜಕಾರಣಕ್ಕೆ ಅವಕಾಶವಿಲ್ಲ. ಸೌಹಾರ್ದದ ಸಂಕೇತವಾದ ರಂಜಾನ್ಗೆ ಮೊದಲು ಶುಭಾಶಯ ಕೋರಿದವರು ಪ್ರಧಾನಿ ನರೇಂದ್ರ ಮೋದಿ. ಬಿಜೆಪಿ ಪಕ್ಷದಲ್ಲಿ ಕೋಮು ಗಲಬೆಗೆ ಅವಕಾಶವಿಲ್ಲ, ಇತಿಹಾಸವನ್ನು ಸರಿಯಾಗಿ ಗಮನಿಸಿದ್ದೇ ಆದರೆ ಗೊತ್ತಾಗುತ್ತದೆ, ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಕೋಮು ಗಲಬೆಗಳು ಅತ್ಯಂತ ಕಡಿಮೆ ಉಂಟಾಗಿವೆ. ಬಿಜೆಪಿ ಎಂದೂ ಧಾರ್ಮಿಕ ವೈಶಮ್ಯಕ್ಕೆ ಅವಕಾಶ ಕೊಟ್ಟಿಲ್ಲ. ಇಡೀ ದೇಶದ ಎಲ್ಲ ಧರ್ಮಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಜನರ ಮೂಲಭೂತ ಅವಶ್ಯಕತೆಗಾಳದಂತಹ ಶಿಕ್ಷಣ, ಆರೋಗ್ಯ, ಉದ್ಯೋಗ ಕ್ಷೇತ್ರಗಳಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಸಾದ್ಯವಾಗಿದೆ, ಕೋಮು ಗಲಭೆಗೆ ಪ್ರಚೋದನೆ ಕೊಡುವ ಪಕ್ಷ ನಮ್ಮದಲ್ಲ. ಎಲ್ಲ ಧರ್ಮ, ಹಾಗು ಎಲ್ಲ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಏಕೈಕ ಪಕ್ಷ ಬಿಜೆಪಿ ಎಂದು ನುಡಿದರು.
ಕಳೆದ ಏಳು ದಿನಗಳಿಂದ ಸಿದ್ದರಾಮಯ್ಯನವರು ಬರೀ ಜಾತಿಗಳ ವಿಚಾರವಾಗಿ ಮಾತನಾಡುತ್ತಿದ್ದಾರೆ, ಕಾಂಗ್ರೆಸ್ ನಿಂದ ಯಾರಾದರೂ ಬಿಜೆಪಿಗೆಬಂದರೆ ನಾವು ಅವರ ಜಾತಿ, ಧರ್ಮ ನೋಡಲ್ಲ, ಅದೇ ಬಿಜೆಪಿಯಿಂದ ಯಾರಾದರು ಕಾಂಗ್ರೆಸ್ ಗೆ ಹೋದರೆ ಅಲ್ಲಿ ಅವರ, ಜಾತಿ, ಧರ್ಮ ಇದರ ಕುರಿತಾಗಿಯೇ ಪ್ರಚಾರ ಮಾಡ್ತಾರೆ. ದೇಶದ ಅಭಿವೃದ್ಧಿ ಎಂದರೆ ಕೇವಲ ಒಂದು ಜಾತಿ, ಧರ್ಮದ ಅಭಿವೃದ್ದಿಯಲ್ಲ, ಅದು ಎಲ್ಲರ ಅಭಿವೃದ್ಧಿ ಅದನ್ನು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಅರಿತು ಕೊಳ್ಳಬೆಕು ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕ ಎಂ ರಾಜಣ್ಣ, ಆನಂದ ಗೌಡ ಇನ್ನಿತರರು ಉಪಸ್ಥಿತರಿದ್ದರು.