ಬೆಂಗಳೂರು: ಓಲಾ(Ola) , ಊಬರ್ (Uber) ಆಯ್ತು ಇದೀಗ ಬೆಂಗಳೂರಿನಲ್ಲಿ ಇಂದಿನಿಂದ ಮತ್ತೊಂದು (Taxi service) ಟ್ಯಾಕ್ಸಿ ಸರ್ವೀಸ್ ರೋಡಿಗೆ ಬರುತ್ತಿದೆ. ಹೌದು ಆಟೊರಿಕ್ಷಾದಂತೆ ಪ್ರಯಾಣಿಕ ಸೇವೆ ಒದಗಿಸಲು ನಾಲ್ಕು ಚಕ್ರದ ‘ಕ್ಯೂಟ್ ಕ್ವಾಡ್ರಿಸೈಕಲ್’ ವಾಹನಗಳು ನಗರದಲ್ಲಿ ಇಂದಿನಿಂದ ಅಧಿಕೃತವಾಗಿ ರಸ್ತೆಗೆ ಇಳಿಯಲಿದೆ. ಸಾರಿಗೆ ಇಲಾಖೆ ಈ ವಾಹನಕ್ಕೆ ಪ್ರತ್ಯೇಕ ದರ ನಿಗದಿ ಮಾಡಿದೆ.
ನಾಲ್ಕು ಚಕ್ರದ ವಾಹನಗಳು ಮೀಟರ್ ಆಳವಡಿಕೆಯೊಂದಿಗೆ ರೋಡಿಗೆ ಇಳಿಯಲಿದೆ. ಬಜಾಜ್ ಕಂಪನಿ ಮುಖ್ಯಸ್ಥರು ವಾಹನಗಳಿಗೆ ಇಂದು ಚಾಲನೆ ನೀಡುವರು. ಇದರೊಂದಿಗೆ ನಗರದ ಜನತೆ ಆಟೊ ಮಾದರಿಯಲ್ಲಿ ಈ ವಾಹನದಲ್ಲಿ ಕೂತು ಪ್ರಯಾಣಿಸಬಹುದು. ಈ ವಾಹನಗಳ ಕಾರ್ಯಾಚರಣೆಗೆ ತಿಂಗಳ ಹಿಂದೆಯೇ ಸಾರಿಗೆ ಇಲಾಖೆ ಅನುಮತಿ ನೀಡಿ, ದರ ನಿಗದಿಪಡಿಸಿದೆ. 4 ಕಿ.ಮೀ ವರೆಗೆ 60 ರೂ. ಕನಿಷ್ಠ ದರವಿರಲಿದೆ. ನಂತರ ಪ್ರತಿ ಕಿಲೋ ಮೀಟರ್ಗೆ 16 ರೂ. ಇರಲಿದೆ ಎಂದು ಸಾರಿಗೆ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಕಾರು ಮಾದರಿಯ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವು 2019ರಲ್ಲಿಯೇ ಮಾರುಕಟ್ಟೆಗೆ ಬಂದಿತ್ತು. ಆದರೆ ಸಾರಿಗೆ ಇಲಾಖೆ ದರ ನಿಗದಿ ಪಡಿಸಿರಲಿಲ್ಲ. ಆದರೂ ಉಬರ್ (Uber) ಸಂಸ್ಥೆಯೊಂದಿಗೆ ಅವಲಂಬಿತವಾಗಿ ಟ್ಯಾಕ್ಸಿ ಸೇವೆ ಒದಗಿಸ ಸಲಾಗುತ್ತಿತ್ತು. ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿ ದರ ನಿಗದಿ ಮಾಡಲು ಕೋರಿದ್ದರು. ಸರ್ಕಾರ ಕಳೆದ ತಿಂಗಳು ದರ ನಿಗದಿ ಮಾಡಿದ್ದು, ಸೇವೆಗೆ ಅನುಮತಿ ಬೆನ್ನಲ್ಲೇ ಇಂದಿನಿಂದ ಟ್ಯಾಕ್ಸಿಗಳು ಸೇವೆಗೆ ಸಜ್ಜಾಗಿವೆ.