ದೊಡ್ಡಬಳ್ಳಾಪುರ : ರಾಜ್ಯ ಬಿಜೆಪಿ ಪಕ್ಷ ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದ್ದವಾದ ಮೀಸಲಾತಿ 15 % ಮಾತ್ರ, ಈ ಮೀಸಲಾಯನ್ನು 17 % ಕ್ಕೆ ಏರಿಸುವ ಯಾವುದೇ ಪ್ರಸ್ಥಾಪ ಕ್ಯಾಬಿನೆಟ್ ಅಥವ ಅಸೆಂಬ್ಲಿಯಲ್ಲಾಗಲಿ ಚರ್ಚೆಯಾಗಿಲ್ಲ, ಇದೆಲ್ಲ ಕೇಲವ ಬಿಜೆಪಿಯವರ ರಾಜಕೀಯ ಗಿಮಿಕ್, ಚುನಾವಣೆಯಲ್ಲಿ ಜನರ ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಿದೆ, ಪಾರ್ಪಿಮೆಂಟ್ ನಲ್ಲಿ ಈ ಕುರಿತು ಪ್ರಸ್ತಾಪ ಮಾಡಿ ಜಾರಿ ಮಾಡಬಹುದಾಗಿತ್ತೂ ಆದರೆ ಮಾಡಿಲ್ಲ, ಮಾಡುವ ಮನಸ್ಥಿತಿಯೂ ಅವರಿಗಿಲ್ಲ ಎಂದು ಕಿಡಿಕಾರಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೂಲಂಕುಷವಾಗಿ ಯಾರಿಗೆ ಎಷ್ಟು ಮೀಸಲು ಸಿಗಬೇಕು ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಇಡೀ ರಾಜ್ಯವನ್ನು ನಾವು ಈಗಾಗಲೇ ಸುತ್ತಿಬಂದಿದ್ದೇವೆ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಜನ ಮನಸ್ಸು ಮಾಡಿದ್ದಾರೆ.
ಸುಮಾರು 10 ದಿನಗಳಿಂದ ದೇವನಹಳ್ಳಿ ಪ್ರವಾಸ ಮಾಡುತ್ತಿದ್ದೇನೆ, ಈಗಾಗಲೇ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿ, ಬಿಜೆಪಿ ,ಜೆಡಿಎಸ್ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ.
ದೊಡ್ಡಬಳ್ಳಾಪುರದ ದಲ್ಲಿ ಈ ಬಾರಿ ಶಾಸಕರು ಒಳ್ಳೆ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ಜನರ ಮೇಲಿದೆ, ಜೊತೆಗೆ ರಾಜ್ಯದಲ್ಲಿ ಈಗ ಒಳ್ಳೆ ವಾತಾವರಣ ಇದೆ, ಕೋಮು ಗಲಭೇ ಇಲ್ಲದೇ ಶಾಂತ ರೀತಿಯಲ್ಲಿ ನಾವು ಜೀವಿಸಬೇಕಾದರೇ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ, ಸುಮಾರು ಒಂದು ತಿಂಗಳಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ, ಅಕ್ಕಿ ವಿತರಣೆ, ಮಹಿಳೆಯರಿಗೆ 2 ಸಾವಿರ , ಕೈಗಾರಿಕಾ ತರಬೇತಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗ ಸೃಷ್ಟಿ ಮಾಡಲಿದೆ.
ಬಿಜೆಪಿ ಸರ್ಕಾರ ನಿತ್ಯ ಬಳಕೆ ವಸ್ತುಗಳಿಗೆ ಜಿಎಸ್ಟಿ ಹೇರಿದೆ, ಭಾರತ್ ಜೋಡೋ ಯಾತ್ರೆಗೆ ಜನ ಸಮೂಹವೇ ಬೆಂಬಲ ನೀಡಿದೆ, ಇದನ್ನು ಅರಿತ ವಿರೋಧ ಪಕ್ಷ ರಾಹುಲ್ ಗಾಂಧಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನ ಮಾಡುತ್ತಿದೆ ಇದನ್ನೆಲ್ಲಾ ಜನರೂ ಸೂಕ್ಷ್ಮವಾಗಿ ಗಮಿನಿಸುತ್ತಿದ್ದೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ, ದೇಶದ ಅಭಿವೃದ್ದಿ ಮತ್ತು ರಾಜ್ಯದ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.
ನಾನು ಸಿಎಂ ಅಭ್ಯರ್ಥಿಯಲ್ಲ
ಸಿಎಂ ಅಭ್ಯರ್ಥಿ ಕುರಿತು ವೀರಪ್ಪ ಮೋಯ್ಲಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಸಿಎಂ ಅಭ್ಯರ್ಥಿಯಲ್ಲ, ರೇಸ್ ನಲ್ಲೂ ಇಲ್ಲ, ಹೈಕಮಾಂಡ್ ಸೂಚನೆ ಮೇರೆಗೆ ನಾನು ಸ್ಪರ್ಧಿಸಿದ್ದೇನೆ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ, ಕೆಪಿಸಿಸಿ ಸದಸ್ಯ ಎಸ್ ಆರ್ ಮುನಿರಾಜ್, ಪ್ರಚಾರ ಸಮಿತಿ ಅಧ್ಯಕ್ಷ. ಆಂಜಿನಪ್ಪ, ಚಿದಾನಂದ ಮೂರ್ತಿ, ಹನುಂತರಾಯಪ್ಪ, ಯುವ ಮುಖಂಡ ಅರ್, ವಿ ಮಹೇಶ, ನಂಜೇಗೌಡ, ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಶ್ರೀಧರ್, ಮುತ್ತುರಾಯಪ್ಪ, ಸವಿತ ಇತರರು ಇದ್ದರು.