ಬೆಂಗಳೂರು: ಟ್ರಸ್ಟ್ ಜಾಗದ ವಿಚಾರವಾಗಿ ಟ್ರಸ್ಟಿಗಳಿಗೆ ಜೀವ ಬೆದರಿಕೆ (Life threatening) ಹಾಕಿದ ಗಂಭೀರ ಆರೋಪ ಸುರೇಶ್ ಬಿಎಲ್ ಎಂಬುವವರ ವಿರುದ್ಧ ಕೇಳಿ ಬಂದಿದೆ. ಕುಂಬಾರಪೇಟೆ ಅನ್ನದಾನ ಸಮಿತಿ ಟ್ರಸ್ಟ್(Kumbarpet Annadana Samiti Trust), ಕುಂಬಾರಪೇಟೆ ಆಂಜನೇಯಸ್ವಾಮಿ ಟೆಂಪಲ್ ಬಿಲ್ಡಿಂಗ್ ಸಮಿತಿ ಟ್ರಸ್ಟ್, ಕುಂಬಾರಪೇಟೆ ಅನ್ನದಾನ ಸಮಿತಿ ಕಲ್ಯಾಣ ಮಂದಿರ ಟ್ರಸ್ಟ್ ಜಾಗಕ್ಕಾಗಿ ಜಗಳ ನಡೆದಿದ್ದು, ಸುರೇಶ್ ಬಿಎಲ್ (Suresh BL)ಎಂಬುವವರಿಂದ ಕಟ್ಟಡದ ಬಾಡಿಗೆ ಪಡೆದು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.. ಕೆ ಮುನಿಸ್ವಾಮಿ, ಅನ್ನದಾನ ಸಮಿತಿ ಟ್ರಸ್ಟ್ ಅಧ್ಯಕ್ಷ, ಇತರರಿಂದ ಗಂಭೀರ ಆರೋಪ ಮಾಡಲಾಗಿದೆ. ಬಿಎಲ್ ಸುರೇಶ್ ತಂದೆ ಬಿ ಲಿಂಗಪ್ಪ ಈ ಹಿಂದೆ ಆಂಜನೇಯಸ್ವಾಮಿ ಟೆಂಪಲ್ ಬಿಲ್ಡಿಂಗ್ ಟ್ರಸ್ಟ್ ಅಧ್ಯಕ್ಷರಾಗಿದ್ದರು.
ಇದನ್ನೆ ನೆಪ ಮಾಡಿಕೊಂಡು ತಾನೇ ಅಧ್ಯಕ್ಷ ಎಂದು ಬಿಂಬಿಸಿಕೊಂಡು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆಯೆ ಕೋರ್ಟ್ ಟ್ರಸ್ಟ್ ತಂಟೆಗೆ ಹೋಗಬಾರದು ಎಂದು ಸೂಚಿಸಿದ್ದರು ಕೂಡ ತೊಂದರೆ ಕೊಟ್ಟು ಧಮ್ಕಿ ಹಾಕಿರುವ ಆರೋಪ ಮಾಡಲಾಗಿದೆ. ಅಲ್ಲದೇ ಟ್ರಸ್ಟಿಗಳ ಕೊಲೆ ಮಾಡುವುದಾಗಿ ಬೆದರಿಕೆ ಮಾಡಿದ್ದಾರೆ. ಸದ್ಯ ಟ್ರಸ್ಟ್ ಜಾಗದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿದ್ದು, ಬಿಎಲ್ ಸುರೇಶ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.