ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ ವಾರ್ಡಿನಲ್ಲಿ ಇಂದು, ಬೂತ್ ಮಟ್ಟದ ಕಾರ್ಯಕರ್ತರ ಸಮಾಲೋಚನೆಯನ್ನು ಮಾನ್ಯ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯನವರು(Minister K. Gopaliah) ನಡೆಸಿ ಮಾತನಾಡಿದರು. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಕೋವಿಡ್ ಅವಧಿಯಲ್ಲಿ, ಉಚಿತವಾಗಿ ಆರೋಗ್ಯ ಕಿಟ್ ಹಾಗೂ ಆಹಾರ ಕಿಟ್, ಆಕ್ಸಿಜನ್, ಮಾತ್ರೆಗಳನ್ನು ನೀಡಿ ಜನಸಾಮಾನ್ಯರ ಸಂಕಷ್ಟದ ಪರಿಸ್ಥಿತಿಯಲ್ಲಿ ನನ್ನ ಜೊತೆ ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಕ್ಷೇತ್ರದ ಜನರ ಉಳಿವಿಗಾಗಿ ಬಹಳ ಕಾಳಜಿ ವಹಿಸಲಾಗಿದೆ ಎಂದರು.
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ, ಜನಸಾಮಾನ್ಯರ ಅನುಕೂಲವಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮೂರು ಬಾರಿ ಶಾಸಕನಾಗಿ ತಮ್ಮೆಲ್ಲರ ಆಶೀರ್ವಾದ ಹಾಗೂ ಹೆಚ್ಚಿನ ಸಹಕಾರದಿಂದ ರಾಜ್ಯದ ಅಬಕಾರಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಇದಕ್ಕೆ ಕಾರಣರಾದ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಘಟಕ, ನಮ್ಮ ಕ್ಲಿನಿಕ್, ನವ ನಂದಿನಿ ಪಾರ್ಕ್, ಗುಣಮಟ್ಟದ ಕಾಮಗಾರಿಯ ರಸ್ತೆಗಳು, ಕೃಷ್ಣಾನಂದ ನಗರದಲ್ಲಿನ ಶಾಲೆಗಳು, ಬ್ಯಾಡ್ಮಿಂಟನ್ ಕೋರ್ಟ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಇತರ ಪಕ್ಷಗಳು ಕ್ಷೇತ್ರದ ಜನತೆಗೆ ಆಶ್ರಯವಾಗಲಿಲ್ಲ. ಅಂದಿನ ದಿನದಲ್ಲಿ ಜನಸಾಮಾನ್ಯರಿಗೆ 350ಕ್ಕೂ ಹೆಚ್ಚಿನ ಆಕ್ಸಿಜನ್ ಹಾಗೂ ಲಸಿಕೆಯನ್ನು ನೀಡಿ ಕ್ಷೇತ್ರದ ಜನರ ಕಲ್ಯಾಣಕ್ಕೆ ಹಗಲಿರಲು ಶ್ರಮಿಸಿದ್ದೇನೆ ಎಂದು ಹೇಳಿದರು. ಮಾಜಿ ಉಪಮೇಯರ್ ಎಸ್.ಹರೀಶ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಯರಾಮ್, ಅವಿನ್ ಆರಾಧ್ಯ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಉಪಸ್ಥಿತರಿದ್ದರು.