ತುಮಕೂರು : ನಾನು ಮುಸ್ಲಿಂ ಸಮಾಜವನ್ನು ಎಂದು ಕೈ ಬಿಟ್ಟಿಲ್ಲ, ಕೈ ಬಿಡುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ಕೂಡಲೇ ಮೀಸಲಾತಿ ರದ್ದು ಪದ್ಧತಿಯನ್ನು ನಾನು ವಾಪಸ್ ಪಡೆಯುತ್ತೇನೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಮಾತುಕೊಟ್ಟರು.
ಸೋಮವಾರ ಶಿರಾದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡಿದ್ದೀರಿ ನಿಮಗೆ ಎಲ್ಲರಿಗೂ ಧನ್ಯವಾದ. ನಾನು ಮುಸ್ಲಿಂ ಸಮಾಜವನ್ನು ಎಂದು ಕೈ ಬಿಟ್ಟಿಲ್ಲ, ಕೈ ಬಿಡುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ಕೂಡಲೇ ಮೀಸಲಾತಿ ರದ್ದು ಪದ್ಧತಿಯನ್ನು ನಾನು ವಾಪಸ್ ಪಡೆಯುತ್ತೇನೆ ಎಂದು ಹೇಳಿದರು.
ರಾಜ್ಯ ಅಭಿವೃದ್ಧಿಗೆ ಕುಮಾರಸ್ವಾಮಿ ಹಲವು ಯೋಜನೆ
ರಾಜ್ಯದ ಜನ ಬಡತನ ಬೇಗೆಯನ್ನು ಕಡಿಮೆ ಮಾಡಬೇಕು ಎಂಬ ಆಸೆಯನ್ನು ಎಚ್ಡಿ ಕುಮಾರಸ್ವಾಮಿ ಹೊಂದಿದ್ದಾರೆ. ವೃದ್ಧಾಪ್ಯವೇತನ, ಮಾಶಾಸನವನ್ನು 5000 ರೂ. ನೀಡಲು ಮುಂದಾಗಿದ್ದಾರೆ. ರೈತರಿಗೆ ಮುಂಚೆಯೇ ಅನುದಾನ ನೀಡಿ ಕೃಷಿಗೆ ಬೆಳವಣಿಗೆ ಪೋತ್ಸಾಹ ನೀಡುವಂತಹ ಹಲವು ಯೋಜನೆ ಹಾಕಿಕೊಂಡಿದ್ದಾರೆ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಸಾಲ ಮನ್ನಾ, ಗ್ರಾಮವಾಸ್ತವ್ಯ ಮಾಡಿದ್ದಾರೆ. ಅವರನ್ನು ನೀವು ಕೈಬಿಡಬೇಡಿ. ಜೆಡಿಎಸ್ಗೆ ಮನ ನೀಡಿ ಎಂದು ಮನವಿ ಮಾಡಿದರು.
ಸಮಾಜದ ಕಟ್ಟಕಡೆಯ ಸಮುದಾಯಕ್ಕೂ ನ್ಯಾಯ
ನಾವು ಸಮಾಜದ ಕಟ್ಟ ಕಡೆಯ ಸಮುದಾಯಕ್ಕೂ ನ್ಯಾಯವನ್ನು ಒದಗಿಸಿದ್ದೇವೆ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು, ಬಡವರ ಕಷ್ಟ ನೀಗಬೇಕು ಎಂದು ಹೇಳಿದರು. ಕುಮಾರಸ್ವಾಮಿ ಅವರು ಇನ್ನೆರಡು ದಿನದಲ್ಲಿ ಬರ್ತಾರೆ, ಪ್ರಚಾರ ಕೈಗೊಳ್ಳುತ್ತಾರೆ ಎಂದು ಹೇಳಿದರು. ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕು, ಅವರ ಮನಸ್ಸಿನಲ್ಲಿ ಬಡವರ ಕಣ್ಣೀರನ್ನು ಒರಸಬೇಕೆಂಬ ಆಸೆ ಇದೆ. ಬಡವರ ಪರವಾಗಿ ದುಡಿಬೇಕು ಅನ್ನೋ ಮನೋಭಾವ ಇದೆ ಎಂದರು.
ಭದ್ರಾ ಯೋಜನೆ ಜಾರಿ; ತುಮಕೂರಿಗೆ ನೀರು
ಪಾವಗಡ, ಮಧುಗಿರಿ, ಶಿರಾ ಮಧ್ಯಕರ್ನಾಟಕ ಪ್ರಮುಖ ಊರುಗಳು. ಇಲ್ಲಿ ನೀರಿಗೆ ಬರವಿದೆ. ಭದ್ರ ಮೇಲ್ದಂಡೆ ಯೋಜನೆ ಮೂಲಕ ಪ್ರತಿ ಗ್ರಾಮಕ್ಕೆ ಕುಡಿಯುವ ನೀರು ತರಲಾಗುವುದು.
ರಾಜ್ಯಸಭಾ ಸದಸ್ಯನಾಗಗಿ ಹೋರಾಟ ಮುಂದುವರೆಸುವೆ
ರಾಜ್ಯಸಭಾ ಸದಸ್ಯನಾಗಿ ಹೆಣ್ಣು ಮಕ್ಕಳಿಗೆ ಪ್ರಾಶ್ಯಸ್ತ ಕೊಡುತ್ತೇನೆ. ಹೆಣ್ಣು ಮಕ್ಕಳಿಗೆ ಮೀಸಲಾತಿ ಹೆಚ್ಚಳ ಕುರಿತು ಹೋರಾಟ ಮಾಡುತ್ತೇನೆ. ಕಾವೇರಿ ಹೋರಾಟ ಮಾಡುತ್ತೇನೆ ಬಿಡುವುದಿಲ್ಲ. ನಾವು ಮಹಿಳೆಯರನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಆಶ್ವಾಸನೆ ನೀಡಿದರು.