ದೇಹದ ಆರೊಗ್ಯವನ್ನು ಕಾಪಾಡಿಕೊಳ್ಳಲು ನೀರು ಕುಡಿಯುವುದು ಅತ್ಯಗತ್ಯ. ಜೀವಕೋಶಗಳಿಗೆ ಪೋಷಕಾಂಶಗಳನ್ನು ಸಾಗಾಣೆ ಮಾಡಲು, ದೇಹದ ತಾಪಮಾನವನ್ನು ನಿಯಂತ್ರಿಸಲು ಮತ್ತು ಕೀಲುಗಳ ಸಮರ್ಪಕವಾಗಿರಲು ಇದು ಆವಶ್ಯಕ. ಹಾಗಾಗಿ ಮುಂಜಾನೆ ವೇಳೆ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಯಾವ ರೀತಿಯ ಅನುಕೂಲತೆಗಳಿವೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
Morning ನೀರಿನ ಸೇವನೆ ಎಷ್ಟು ಅಗತ್ಯ:
ಇಂದು ನೀರು (Water) ನಮ್ಮ ದೇಹಕ್ಕೆ ಅಗತ್ಯವಾದ ಮಟ್ಟದವರೆಗೆ ನಾವು ಸೇವಿಸುತ್ತಿಲ್ಲ ಬದಲಾಗಿ ನೆನಪಾದರೆ ಎಲ್ಲೊ ಒಮ್ಮೊಮ್ಮೆ ಬಾಯಾರಿಕೆಯಾದರೆ ಸೇವಿಸುತ್ತೇವೆ. ಆದರೆ ಪ್ರತಿ ನಿತ್ಯ ಮುಂಜಾನೆಯೇ ನೀರಿನ (Water) ಸೇವನೆ ಮಾಡುವುದು ಎಷ್ಟೇಲ್ಲ ಆರೋಗ್ಯ ಪ್ರಯೋಜನ ಹೊಂದಿದೆ ಎಂಬುದನ್ನು ಈ ಲೇಖನದ ಮೂಲಕ ನೀವು ತಿಳಿಯಿರಿ.
ಕೆಲವರು ಬೆಳಗ್ಗೆ ಎದ್ದ ಕೂಡಲೆ ಬಿಸಿ ಅಥವಾ ತಣ್ಣಗಿನ ನೀರನ್ನು ಸೇವನೆ ಮಾಡುತ್ತಾರೆ ಇದು ದೇಹಕ್ಕೆ ತುಂಬಾ ಪ್ರಯೋಜನವನ್ನು ನೀಡುತ್ತದೆ. ಮೊದಲನೇಯದಾಗಿ ದೇಹ ಹಲವು ಗಂಟೆಗಳ ಕಾಲ ಯಾವುದೇ ನೀರಿನಾಂಶ ಇಲ್ಲದೇ ಶಕ್ತಿ ಹೀನವಾಗಿರುತ್ತದೆ ಹಾಗಾಗಿ ನೀರಿನ ಸೇವನೆ ನಮಗೆ ದೇಹದ ಹೊಸ ಚೈತನ್ಯಕ್ಕೆ ಕಾರಣವಾಗುತ್ತದೆ.
ಯಾವೆಲ್ಲ ಪ್ರಯೋಜನ?
- ಖಾಲಿ ಹೊಟ್ಟೆಯಲ್ಲಿ ನೀರಿನ ಸೇವನೆ ಮಾಡುವುದರಿಂದ ಅಜೀರ್ಣ ಸಮಸ್ಯೆ ಬಾರದೇ ಚಯಾಪಚಯ ಕ್ರಿಯೆಗೆ ಇದು ನೆರವಾಗಲಿದೆ.
- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸೇವನೆ ಮಾಡುವುದರಿಂದ ತಲೆ ನೋವಿನಿಂದ ಮೈಗ್ರೆನ್ (Maigrain) ನಂತಹ ದೊಡ್ಡ ಸಮಸ್ಯೆಯೂ ಪರಿಹಾರ ಆಗುತ್ತದೆ.
- ದೇಹದ ತೂಕ ಕಡಿಮೆ ಮಾಡಬೇಕೆನ್ನುವವರು ಬಿಸಿ ನೀರಿಗೆ ಲಿಂಬೆ ರಸ ಅಥವಾ ಜೇನು ತುಪ್ಪ ಬೆರೆಸಿ ಸೇವಿಸಿದರೆ ನಿಮ್ಮ ಬೊಜ್ಜನ್ನು ಕರಗಿಸಲು ನೆರವಾಗುತ್ತದೆ.
- ಮಲಬದ್ಧತೆ ಸಮಸ್ಯೆ ಇರುವವರು ನೀರಿನ ಸೇವನೆ ಹೇರಳವಾಗಿ ಮಾಡಲೇಬೇಕು.
- ಖಾಲಿ ಹೊಟ್ಟೆಯಲ್ಲಿ ನೀರಿನ ಸೇವನೆ ಮಾಡುವುದರಿಂದ ನಿಮ್ಮ ದೇಹ ಹಾಗೂ ಮನಸ್ಸು ಎರಡು ಕೂಡ ಶುದ್ಧವಾಗೇ ಇರುತ್ತದೆ.
- ನೀರಿನ ಅತಿಯಾದ ಸೇವನೆ ಮತ್ತು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮ್ಮ ಚರ್ಮದ ಕಾಂತಿ ಸಹ ಹೊಳಪಾಗಿರಲು ನೆರವಾಗುತ್ತದೆ.
ಒಟ್ಟಾರೆಯಾಗಿ ಇಷ್ಟೇಲ್ಲ ಆರೋಗ್ಯ ಪ್ರಯೋಜನ (Health Benefit) ಕಾಲಿಹೊಟ್ಟೆಯಲ್ಲಿ ಬೆಳಗ್ಗೆ ಎದ್ದ ಕೂಡಲೇ ನೀರಿನ ಸೇವನೆ ಮಾಡುವುದರಿಂದಾಗಿಯೇ ನಿಮಗೆ ದೊರೆಯಲಿದೆ. ನೀವು ಈ ಪ್ರಯೋಜನ ಪಡೆಯಲೂ ತಪ್ಪದೇ ನಮ್ಮ ಟಿಪ್ಸ್ ಗಳನ್ನು ಫಾಲೋ ಮಾಡಿ ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.