ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣರವರು,(V. Somanna) ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ(Tējasvi sūrya), ರಾಜ್ಯ ಉಸ್ತುವಾರಿಗಳಾದ ಅಣ್ಣಮಲೈ(Annamalai), ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ|| ಆರುಣ್ ಸೋಮಣ್ಣ, ಬಿಜೆಪಿ ಅಭ್ಯರ್ಥಿ ಕೆ.ಉಮೇಶ್ ಶೆಟ್ಟಿರವರು, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡರವರು ಬೈಕ್ ಜಾಥ ಮತ್ತು ಚುನಾವಣಾ ಕಾರ್ಯಾಲಯ ಉದ್ಘಾಟಿಸಿದರು. ಬೈಕ್ ಜಾಥ ಗಣೇಶ ದೇವಸ್ಥಾನ, 6ನೇ ಬ್ಲಾಕ್, ರಾಜಾಜಿನಗರ ಜೈಮುನಿರಾವ್ ಸರ್ಕಲ್, ಅಗ್ರಹಾರ ದಾಸರಹಳ್ಳಿ ಮೂಲಕ ಪ್ರಶಾಂತನಗರ ಸರ್ಕಲ್ ನಲ್ಲಿರುವ ಪಕ್ಷದ ಕಛೇರಿ ಉದ್ಘಾಟನೆ ನಂತರ, ಮೂಡಲಪಾಳ, ವೃತ್ತ ನಾಗರಬಾವಿ ವೃತ್ತ ಶ್ರೀ ಗಣೇಶ ದೇವಸ್ಥಾನನಾಯಂಡಹಳ್ಳಿ ಕೊನೆಗೊಂಡಿತು.
ವಿ.ಸೋಮಣ್ಣರವರು ಮಾತನಾಡಿ ನಾನು ಚುನಾವಣೆ ನಿಂತಿರುವುದು ಮಾಜಿ ಮುಖ್ಯಮಂತ್ರಿ ಮೇಲೆ ,ತಾಯಿ ಚಾಮುಂಡೇಶ್ವರಿ ಮಲೈಮಹದೇಶ್ವರ ಆಶೀರ್ವಾದದಿಂದ ನಿಂತಿದ್ದೇನೆ.ವರುಣಾ ಕ್ಷೇತ್ರದಲ್ಲಿ ಸಾವಿರಾರು ಜನರನ್ನ ಭೇಟಿ ಮಾಡಿದ್ದೇನೆ. ಉತ್ತಮ ಸ್ಪಂದನೆ ಸಿಕ್ಕಿದೆ.ಗೋವಿಂದರಾಜನಗರ ವಿಧಾನಸಭಾ ಪ್ರತಿಯೊಬ್ಬರು ನೀವೆ ಅಭ್ಯರ್ಥಿ ಎಂದು ಹೋರಾಟ ಮಾಡಿ, ಜನರೆ ಮುಖ್ಯ.ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ನೂರಾರು ಎಕರೆ ಭೂಕಬಳಿಕೆ ಮಾಡಿದ ವ್ಯಕ್ತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ.
ಅಪ್ಪ 15ವರ್ಷ ಮತ್ತು ಮಗ 10ವರ್ಷ ಏನು ಕೆಲಸ ಮಾಡಿದ್ದಾರೆ. ಕೊರೋನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಎಲ್ಲಿ ಹೋಗಿದ್ದರು. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ , ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದದಿಂದ 45ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಜಾತಿ ನೋಡಿ ಮತ ನೀಡಬೇಡಿ.ದಾಸರಹಳ್ಳಿ ಮತ್ತು ಪಂತರಪಾಳ್ಯದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಿಡ್ನಿ ಡಯಾಲಿಸಿಸ್ ಆಸ್ಪತ್ರೆ, 70ಕ್ಕೂ ಹೆಚ್ಚು ದೇವಸ್ಥಾನಗಳು 16ಎಕರೆ ನಾಯಂಡಹಳ್ಳಿ ಕೆರೆ ಅಭಿವೃದ್ದಿ.
ಗೋವಿಂದರಾಜನಗರ ವಿಧಾನಸಭಾ ಅಭಿವೃದ್ದಿ ಕೆಲಸಗಳನ್ನು ನೋಡಿ ಮತ ನೀಡಿ.ಅಣ್ಣಮಲೈರವರು ಮಾತನಾಡಿ ಈ ಬಾರಿ ಬಿಜೆಪಿ 140ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ವಿ.ಸೋಮಣ್ಣರವರನ್ನು ವರುಣ, ಚಾಮರಾಜನಗರದಲ್ಲಿ ಕ್ಷೇತ್ರದಲ್ಲಿ ನಿಲ್ಲಲಾಗಿದೆ ಮೈಸೂರು,ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಸೋಮಣ್ಣರವರ ಪ್ರಭಾವದಿಂದ ಹಲವಾರು ಅಭ್ಯರ್ಥಿಗಳು ಜಯಗಳಿಸಲಿದ್ದಾರೆ.ವರುಣದಲ್ಲಿ ಸಿದ್ದರಾಮಯ್ಯರವರು ಒಂದು ದಿನ ಬಂದು ಹೋಗುತ್ತೇನೆ ಎಂದು ಹೇಳಿದ್ದರು, ಅದರೆ ಇಂದು ವರುಣ ಕ್ಷೇತ್ರ ಬಿಟ್ಟು ಸಿದ್ದರಾಮಯ್ಯ ಹೋಗುತ್ತಿಲ್ಲ.
ವಿ.ಸೋಮಣ್ಣ ಸೈಜಿಕಲ್ ಸ್ಟೈಕ್ ಮಾಡಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ.ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಸಿಪಾಯಿಯಂತೆ ಕೆಲಸ ಮಾಡಬೇಕು ಎಂದು ಹೇಳಿದರು.ತೇಜಸ್ವಿ ಸೂರ್ಯ ರವರು ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಪರ ಅಲೆ ಇದೆ, ಕೇಂದ್ರ ಮತ್ತು ರಾಜ್ಯದ ಅಭಿವೃದ್ದಿ ಕೆಲಸಗಳನ್ನು ನೋಡಿ ಮತ ಕೊಡಿ.
ಗೋವಿಂದರಾಜನಗರ ವರುಣಾ ಮತ್ತು ಚಾಮರಾಜನಗರ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಮಣ್ಣ ಅಸ್ತ ಪ್ರಯೋಗದಿಂದ ಜಯಗಳಿಸಲಿದೆ ಎಂದು ಹೇಳಿದರು.ಅಭ್ಯರ್ಥಿ ಕೆ.ಉಮೇಶ್ ಶೆಟ್ಟಿರವರು ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ವಸತಿ ಸಚಿವರಾದ ವಿ.ಸೋಮಣ್ಣರವರು ಮಾಡಿದ ಅಭಿವೃದ್ದಿ ಕಾರ್ಯಗಳು ಮನೆಮತಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ವಿ.ಸೋಮಣ್ಣರವರ ಅಭಿವೃದ್ದಿ ಕೆಲಸಗಳೆ ನನಗೆ ಶ್ರೀರಕ್ಷೆಯಾಗಿದೆ.
ಪ್ರಧಾನಿ ನರೇಂದ್ರಮೋದಿರವರು, ಗೃಹಮಂತ್ರಿಗಳಾದ ಅಮಿತ್ ಷಾರವರು, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಆನೇಕ ಹಿರಿಯ ನಾಯಕರುಗಳು ಚುನಾವಣೆ ಪ್ರಚಾರ ಆಗಮಿಸಲಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಮನೆಯಲ್ಲಿ ವಿ.ಸೋಮಣ್ಣರವರ ಮಾಡಿರುವ ಅಭಿವೃದ್ದಿ ಕಾರ್ಯಗಳು ಕುರಿತು ಮೆಚ್ಚುಗೆ ಮಾತುಗಳನ್ನ ಆಡುತ್ತಿದ್ದಾರೆ ಎಂದು ಹೇಳಿದರು. ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್, ಗಂಗಭೈರಯ್ಯ, ದಾಸೇಗೌಡ, ಶ್ರೀಮತಿ ರೂಪಲಿಂಗೇಶ್ವರ್, ಪಲ್ಲವಿ ಚನ್ನಪ್ಪ, ರಾಮಪ್ಪ, ಜಯರತ್ನ ಮತ್ತು ಬಿಜೆಪಿ ಮುಖಂಡರುಗಳಾದ ಡೊಡ್ಡವೀರಯ್ಯ, ರಾಜಪ್ಪ, ಕ್ರಾಂತಿರಾಜುರವರು ಭಾಗವಹಿಸಿದ್ದರು.