ತಿರುವನಂತಪುರಂ: ಕೇರಳದಲ್ಲಿ (Kerala)ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಸರ್ಕಾರ ಕೇಂದ್ರವು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡುತ್ತದೆ ಎಂದಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಿರ್ವಹಿಸಿದ ಪ್ರಧಾನಿ ಮೋದಿ ಕೇರಳ ಅಭಿವೃದ್ಧಿ ಆದರೆ ದೇಶ ವೇಗವಾಗಿ ಅಭಿವೃದ್ದಿ ಹೊಂದುತ್ತದೆ ಎಂದು ಹೇಳಿದ್ದಾರೆ. ಮೋದಿ ಇಂದು ತಿರುವನಂತಪುರಂ- ಕಾಸರಗೋಡು ನಡುವಿನ ಕೇರಳದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ.
ತಿರುವನಂತಪುರಂನಲ್ಲಿ ಮೋದಿಯವರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು. ಅವರು 1,500 ಕೋಟಿ ವೆಚ್ಚದ ಡಿಜಿಟಲ್ ಸಯನ್ಸ್ ಪಾರ್ಕ್ ಗೆ ಅಡಿಗಲ್ಲು ಹಾಕಿದ್ದು, ಕೊಚ್ಚಿ ವಾಟರ್ ಮೆಟ್ರೊಗೆ (water metro) ಚಾಲನೆ ನೀಡಿದ್ದಾರೆ.ಕೇರಳವು ಜಾಗೃತ ಮತ್ತು ವಿದ್ಯಾವಂತ ಜನರ ರಾಜ್ಯವಾಗಿದೆ, ಇಲ್ಲಿನ ಜನರ ಕಠಿಣ ಪರಿಶ್ರಮ ಮತ್ತು ನಮ್ರತೆ ಅವರ ಗುರುತಿನ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಿರುವನಂತಪುರಂನಲ್ಲಿ ಡಿಜಿಟಲ್ ಸೈನ್ಸ್ ಪಾರ್ಕ್ಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.