ಸುಡಾನ್ ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾಕಷ್ಟು ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನು ಕರೆತರಲು ಭಾರತ ಸರ್ಕಾರ ಅಪರೇಷನ್ ಕಾವೇರಿ ಆರಂಭಿಸಿದ್ದು ಇದರ ಅಡಿಯಲ್ಲಿ ಸುಡಾನ್ ನಿಂದ ಭಾರತೀಯರ ಮೊದಲ ಬ್ಯಾಚ್ ಹೊರಟಿದೆ.
ಅಪರೇಷನ್ ಕಾವೇರಿ ಮೊದಲ ಬ್ಯಾಚ್ ನಲ್ಲಿ 278 ಪ್ರಯಾಣಿಕರನ್ನ ಹೊತ್ತ ಐಎನ್ಎಸ್ ಸುಮೇಧಾ ಹಡಗು ಸುಡಾನ್ನಿಂದ ಜೆಡ್ಡಾಗೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್ಎಸ್ ಸುಮೇಧಾದಲ್ಲಿದ್ದ ಭಾರತೀಯರ ಫೋಟೋಗಳನ್ನ ಟ್ವೀಟ್ ಮಾಡಿದ್ದು, ತಮ್ಮ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳಲು ಕೆಲವರು ರಾಷ್ಟ್ರಧ್ವಜವನ್ನ ಹಿಡಿದಿದ್ದರು ಎಂದರು.
ಅದ್ರಂತೆ ಬಾಗ್ಚಿ, ‘ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್’ನಿಂದ ಮೊದಲ ಬ್ಯಾಚ್ ಭಾರತೀಯರು ಹೊರಟಿದ್ದಾರೆ. ಐಎನ್ಎಸ್ ಸುಮೇಧಾ 278 ಜನರೊಂದಿಗೆ ಸುಡಾನ್ ಏರ್ ಫೋರ್ಟ್ ನಿಂದ ಜೆಡ್ಡಾಗೆ ಹೊರಟಿದೆ’ ಎಂದು ಟ್ವೀಟ್ ಮಾಡಿದ್ದಾರೆ.