ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿದ್ದ ಪತಿಗೆ ಬೆಂಗಳೂರಿನ 46ನೇ ಸಿಸಿಹೆಚ್ ನ್ಯಾಯಾಲಯವು ಜೀವಾವಧಿ ಶಿಕ್ಷೆ, (Life imprisonment) ಜೊತೆಗೆ 2 ಸಾವಿರ ರೂ. ದಂಡ ವಿಧಿಸಿದೆ. 2013ರಲ್ಲಿ ಅಪರಾಧಿಪತಿ ರಾಜೇಶ್, ತನ್ನ ಪತ್ನಿ ಶಾರದಾ ಎಂಬುವವ ರನ್ನ ಕೊಲೆ ಮಾಡಿದ್ದ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ(Kumaraswamy Layout Station) ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದೀಗ 10 ವರ್ಷದ ಬಳಿಕ ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.
ಇನ್ನು ಇತ ಕೊಲೆ ಮಾಡುವುದಕ್ಕೂ ಮುನ್ನ ರಾಜೇಶ್ ಹಾಗೂ ಶಾರದಾಗೆ ಕೋರ್ಟ್ ವಿಚ್ಛೇದನ ನೀಡಿತ್ತು. ಬಳಿಕ ಪತ್ನಿಗೆ ಜೀವನಾಂಶ ನೀಡುವಂತೆ ಕೋರ್ಟ್ ರಾಜೇಶ್ನಿಗೆ ಆದೇಶಿಸಿತ್ತು. ಜೀವನಾಂಶ ನೀಡದಿದ್ದಕ್ಕೆ ರಾಜೇಶ್ನನ್ನು ಜೈಲಿಗೆ ಕಳಿಸಿದ್ದ ಕೋರ್ಟ್, ಜೈಲಿನಿಂದ ಬಿಡುಗಡೆಯಾದ ಬಳಿಕ ಚಾಕುವಿನಿಂದ 52 ಬಾರಿ ಇರಿದು ಪತ್ನಿಯನ್ನ ಕೊಲೆ ಮಾಡಿದ್ದ. ಬಳಿಕ ಆರೋಪಿಯನ್ನ ಬಂಧಿಸಿ, ತನಿಖೆ ನಡೆಸಿ. ಕೋರ್ಟ್ಗೆ ಸಲ್ಲಿಸಿದ್ದು, ಇದೀಗ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.