ಬೆಂಗಳೂರು: ಸಿದ್ದರಾಮಯ್ಯ ಹೆಸರಿನಿಂದಲೇ ಪ್ರತಾಪ್ ಸಿಂಹಗೆ ಪ್ರಖ್ಯಾತಿ ಎಂದು ಶಾಸಕ ಜಮೀರ್ ಅಹಮದ್ ಖಾನ್(zameer ahmed khan) ಹೇಳಿದ್ದಾರೆ. ಈ ಸಂಬಂಧ ಚಾಮರಾಜಪೇಟೆಯಲ್ಲಿ ಮಾತನಾಡಿದ ಅವರು, ಸಂಸದರಾಗಿ ಪ್ರತಾಪ್ ಸಿಂಹ ಅವರ ಕೊಡುಗೆ ಸೊನ್ನೆ. ಅವರು ಸಿದ್ದರಾಮಯ್ಯ(Siddaramaiah) ಬಗ್ಗೆ ಮಾತನಾಡಿಯೇ ನಾಯಕರಾಗಲು ಹೊರಟವರು. ಪ್ರತಾಪ್ ಸಿಂಹ ಅವರು ರಾಜಕೀಯದಲ್ಲಿ ಉಳಿಯಬೇಕಾದರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಿದರೆ ಮಾತ್ರವೇ ಸಾಧ್ಯವಿದೆ, ಬೆಳಗ್ಗೆದ್ದರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಬೇಕಾಗಿದೆ.
ಸಂಸದ ಪ್ರತಾಪ್ ಸಿಂಹಾ(Pratap Simha)ಗೆ ರಾತ್ರಿಯ ಕನಸ್ಸಿನಲ್ಲೂ ಸಿದ್ದರಾಮಯ್ಯ ಅವರೇ ಬರುತ್ತಾರೆ. ವರುಣಾದಲ್ಲಿ ಸಿದ್ದರಾ ಮಯ್ಯ ಗೆದ್ದೇ ಗೆಲ್ಲುತ್ತಾರೆ. ಈ ಬಾರಿ ಸಿದ್ದರಾಮಯ್ಯ ಅವರು 1 ಲಕ್ಷ ಅಂತರದಲ್ಲಿ ಗೆಲ್ಲುತ್ತಾರೆ. ಸಿದ್ದರಾಮಯ್ಯ ಅವರು ಪ್ರಚಾರ ಮಾಡುವುದೇ ಬೇಕಾಗಿಲ್ಲ. ಜನರು ಅವರಿಗೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೊಗೆ ಮತ ನೀಡುತ್ತಾರೆ ಎಂದು ಹೇಳಿದರು. ಮೀಸಲಾತಿ ಹೆಚ್ಚಳ ಅಥವಾ ರದ್ದು ಮಾಡುವ ಮೊದಲು ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು,
ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿ, ನಂತರ ಸದನದ ಮುಂದಿಟ್ಟು ಚರ್ಚಿಸಿ ಅನುಮೋದನೆ ಪಡೆಯಬೇಕು. ಆದರೆ ರಾಜ್ಯ ಸರ್ಕಾರ ಈ ಯಾವುದೇ ಸಂವಿಧಾನಾತ್ಮಕ ನಿಯಮಗಳ ಪಾಲನೆ ಮಾಡಿಲ್ಲ. ಯಾವುದೇ ಜಾತಿಗಳಿಗೆ ಮೀಸಲಾತಿ ಹೆಚ್ಚಿಸಲು ನಮ್ಮ ತಕರಾರಿಲ್ಲ. ಆದರೆ ಒಬ್ಬರ ಮೀಸಲಾತಿ ಕಿತ್ತುಕೊಂಡು ಬೇರೊಬ್ಬರಿಗೆ ನೀಡಿರುವುದು ಸರಿಯಲ್ಲ. ಮೀಸಲಾತಿ ಪರಿಷ್ಕರಣೆ ಎಂಬುದು ಬಿಜೆಪಿ ಪಕ್ಷ ಮತದ್ರುವೀಕರಣಕ್ಕಾಗಿ ಮಾಡಿದ ನಾಟಕ ಮಾತ್ರ ಎಂದು ಜಮೀರ್ ಹೇಳಿದ್ದಾರೆ.