ಬೆಂಗಳೂರು: ಕ್ರಿಮಿನಲ್ ಸ್ಯಾಂಟ್ರೋ ರವಿ ಪತ್ನಿಯ (Santro Ravi Wife)ವಿರುದ್ಧದ ಪ್ರಕರಣದಲ್ಲಿ “ಬಿ’ ವರದಿ ಸಲ್ಲಿಸಲು ರಾಜಧಾನಿ (bangalore) ಬೆಂಗಳೂರಿನಲ್ಲಿ ಸಿಸಿಬಿ(CCB) ಸಿದ್ಧತೆ ನಡೆಸಿದೆ. ಭ್ರಷ್ಟಾಚಾರದ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದ ಸ್ಯಾಂಟ್ರೋ ರವಿ ಅಕ್ರಮಗಳು ಕೊನೆಗೂ ಬಹಿರಂಗಗೊಂಡಿತ್ತು. ಆದರೆ, ಆತನ ಪತ್ನಿ ಹಾಗೂ ನಾದಿನಿ ವಿರುದ್ಧ ಶ್ರೀಪ್ರಕಾಶ್ ಎಂಬಾತನ ಮೂಲಕ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದಲ್ಲಿ ಹುರುಳಿಲ್ಲ ಎಂಬ ಅಂಶವು ಸಿಸಿಬಿ ತನಿಖೆಯಲ್ಲಿ ದೃಢಪಟ್ಟಿದೆ.
ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ “ಬಿ’ ವರದಿ ಸಲ್ಲಿಸಲು ಸಿಸಿಬಿ ಸಿದ್ಧತೆ ನಡೆಸಿದ್ದಾರೆ. ಇನ್ನೂ ಸ್ಯಾಂಟ್ರೋ ರವಿಯ ವೈಯಕ್ತಿಕ ಮಾಹಿತಿಯುಳ್ಳ ಲ್ಯಾಪ್ ಟಾಪ್ ಪತ್ನಿ ಕೈ ಸೇರಿದ್ದವು. ತನ್ನ ಪತ್ನಿ ಬಳಿ ಇದ್ದ ಲ್ಯಾಪ್ಟಾಪ್ ತನ್ನ ಕೈ ಸೇರಬೇಕೆಂಬ ಉದ್ದೇಶದಿಂದ ಸ್ಯಾಂಟ್ರೋ ರವಿ ಪತ್ನಿ ವಿರುದ್ಧವೇ ಷಡ್ಯಂತರ ರೂಪಿಸಿದ್ದ. ಇದಕ್ಕೆ ವರ್ಗಾವಣೆಯಾಗುವ ಆತಂಕದಲ್ಲಿದ್ದ ಕಾಟನ್ಪೇಟೆ ಠಾಣೆ ಇನ್ಸ್ಪೆಕ್ಟರನ್ನು ಬಳಸಿಕೊಂಡಿದ್ದ. ತಾನು ಹೇಳಿದಂತೆ ಕೇಳಿದರೆ ವರ್ಗೆ ತಡೆಹಿಡಿಯುವುದಾಗಿ ಹೇಳಿದ್ದ ಎನ್ನಲಾಗಿದೆ.