ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಕ್ಷದಿಂದ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನೇಕಾರರಿಗೆ ಅನ್ಯಾಯವಾಗಿದೆ.
ನೇಕಾರರು ಮತದಾನ ಮಾಡುವ ಸಮಯದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟು ತಮ್ಮ ಅಮೂಲ್ಯವಾದ ಮತವನ್ನು ನೀಡುವಾಗ ಯಾರಿಗೆ ಹಾಕಬೇಕು ಯಾರಿಗೆ ಹಾಕಬಾರದೆಂದು ಯೋಚಿಸಿ ಮಹತ್ವದ ಹೆಜ್ಜೆ ಇಡಿ.
ಕಳೆದ ಮೂರು ನಾಲ್ಕು ತಿಂಗಳಗಳಿಂದ ನೇಕಾರರ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಿ ಎಂದು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಿರಂತರ ಹೋರಾಟ ಮಾಡಿದರು ನೇಕಾರರಿಗೆ ನ್ಯಾಯ ಸಿಗಲಿಲ್ಲ, ನೇಕಾರ ಸಮುದಾಯದವರಿಗೆ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಿ ಎಂದು
ಬಿಜೆಪಿ ವರಿಷ್ಠರ ಕಾಲನ್ನು ಹಿಡಿದರು ನಮ್ಮ ನೇಕಾರರಿಗೆ ನ್ಯಾಯ ಸಿಗಲಿಲ್ಲ ಇದರಿಂದ ನಮ್ಮ ನೇಕಾರ ಸಮುದಾಯಕ್ಕೆ ಅವಮಾನ ಆಗಿದೆ.
ಎಲ್ಲಾ ನೇಕಾರರು ಇದನ್ನು ಗಮನದಲ್ಲಿಟ್ಟುಕೊಂಡು ಯೋಗ್ಯರಿಗೆ ಮತದಾನ ಮಾಡಿ ಅಯೋಗ್ಯರಿಗೆ ಮಾಡಬೇಡಿ ಇದು ನೇಕಾರರ ಮರ್ಯಾದೆಯ ಪ್ರಶ್ನೆಯಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜು ಅಂಬಲಿ ಹೇಳಿದರು.
ಪಕ್ಷೇತರ ಸ್ಪರ್ಧೆಗಾಗಿ ನಾಮಪತ್ರ ಸಲ್ಲಿಸಿದ ಶ್ರೀ ಶಿವಶಂಕರ ಶ್ರೀಗಳಿಗೆ ಕೊಲ್ಲಲು ಸ್ಕೆಚ್
ಕೆಲವು ದುಷ್ಟ ಶಕ್ತಿಗಳು ಶ್ರೀ ಶಿವಶಂಕರ ಶ್ರೀಗಳಗೆ ಮಾನಸಿಕ ಮತ್ತು ದೈಹಿಕ ಚಿತ್ರ ಹಿಂಸೆಯನ್ನು ನೀಡಿ ಮತ್ತು ಕಣದಿಂದ ಹಿಂದೆ ಸರಿಯಬೇಕೆಂದು ಕಾಣದ ಕೈಗಳು ಕೆಲಸ ಮಾಡಿವೆ. ಶ್ರೀ ಶಿವಶಂಕರ್ ಶ್ರೀಗಳ ಕಥೆ ಮುಗಿಸಬೇಕೆಂದು ಹುಣ್ಣಾರ ನಡೆಸಿದ್ರಂತೆ ಎಂದು ರಾಜು ಅಂಬಲಿ ಗಂಭೀರ ಆರೋಪ ಮಾಡಿದ್ದಾರೆ. ದ್ವೇಷದ ರಾಜಕಾರಣ ಮತ್ತು ಪೂಜ್ಯರನ್ನು ಕಾಡಿದ್ದಾರೋ ಅವರಿಗೆ ಆ ಭಗವಂತ ಶಿಕ್ಷೆ ಕೊಡುತ್ತಾನೆ ಎಂದು ಹೇಳಿದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ