ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರ ಮುಖಾಂತರ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುಸುತಿದ್ದಾರೆ. ಮೈತೊಬ್ಬರ ಮೇಲೆ ಬಂದೂಕು ಇರಿಸಿ ಗುಂಡು ಹಾರಿಸುತಿದ್ದಾರೆ ಎಂದು ಭಾರತೀಯ ಜನತಾ ನಾಯಕ ಬಿ.ಎಲ್.ಸಂತೋಷ ಮೇಲೆ ಆರೋಪ ಮಾಡಿದರು.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗಂಭೀರ ಸ್ವರೂಪದ ಆರೋಪದ ಮಾಡಿದರು.ಬೇರೆಯವರ ಮುಖಾಂತರ ಯುದ್ಧ ಬೇಡಾ ನೇರವಾಗಿ ಯುದ್ಧಕ್ಕೆ ಬನ್ನಿ ಎಂದು ಜಗದೀಶ್ ಶೆಟ್ಟರ್ ಸವಾಲು ಹಾಕಿದರು.
ನನ್ನ ವಿರುದ್ಧ ಲಿಂಗಾಯತ ಸಮುದಾಯದ ನಾಯಕರ ಸಭೆ ಮಾಡಿದ್ದು ಅದೊಂದು ಲಿಂಗಾಯತ ನಾಯಕರ ಸಭೆ ಅಲ್ಲಾ ಅಲ್ಲಿ ಎಲ್ಲ ಲಿಂಗಾಯತ ನಾಯಕರು ಸಮುದಾಯದವರು ಇರಲಿಲ್ಲ ಎಂದರು.ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಯಡಿಯೂರಪ್ಪ ಅವರನ್ನು ನಾನು ಎಂದು ಟೀಕೇ ಮಾಡಿರಲಿಲ್ಲ. ನನಗೆ ಯಡಿಯೂರಪ್ಪ ನವರು ನನಗೆ ಟಿಕೆಟ್ ಕೊಡಿಸಲು ಸಾಕಷ್ಟು ಪ್ರಯತ್ನ ಪಟ್ಟರು.ಆದರೆ ನಿನ್ನೆ ಬಿ.ಎಸ್ ಯಡಿಯೂರಪ್ಪ ನವರು ನಿನ್ನೆ ಆರೋಪ ಮಾಡಿದ್ದು ಆರ್ಶೀವಾದ ಎಂದರು.
ಯಡಿಯೂರಪ್ಪನವರು ಹಿಂದೆ ವಿಧಾನ ಸಭೆಯ ಸ್ಪೀಕರ ಮಾಡಿದರು ಯಡಿಯೂರಪ್ಪನವರು ಅಂದು ಸಹ ನನ್ನ ಸಲಹೆಯನ್ನು ಪಡೆದುಕೊಂಡರು.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರ ಕೇವಲ ಧಾರವಾಡಕ್ಕೆ ಸೀಮೀತ ಆಗಿಲ್ಲ.
ಈ ಕ್ಷೇತ್ರ ಈಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸೇರಿದಂತೆ ಅನೇಕ ನಾಯಕರು ನನ್ನ ಬಗ್ಗೆ ಮಾತನಾಡುತಿದ್ದಾರೆ. ನನ್ನೇ ಏಕೆ ಡ್ರಾ ಗೇಟ್ ಮಾಡತಾ ಇದ್ದಾರೆ ಬಡಪಾಯಿ ನಾನು ಎಂದ ಅವರು ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ದು ಗೊತ್ತಾಗತಾ ಇಲ್ಲ. ನಾನು ಏನು ಅಪರಾಧ ಮಾಡಿದೇ ಕೇವಲ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೇಳಿದೆ ಎಂದರು. ಇನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಹ ನಾಯಕರ ಮೇಲೆ ಒತ್ತಡ ತಂದೆ ಆದರೆ ಶೆಟ್ಟರ್ ಪಕ್ಷದ ನಿಲುವಿಗೆ ಬದ್ಧರಾಗಲಿಲ್ಲ ಎಂದರು.
ಎಐಸಿಸಿ ಮುಖಂಡ ರೋಹನ್ ಗುಪ್ತಾ, ಮುಖಂಡರಾದ ರಜತ್ ಉಳ್ಳಾಗಡ್ಡಿಮಠ, ಸದಾನಂದ ಡಂಗನವರ, ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಧಾರವಾಡ ಗ್ರಾಮೀಣ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರು ಮುಂತಾದವರು ಇದ್ದರು.