ಅದೊಂದು ಸಾಮಾನ್ಯ ಹಳ್ಳಿ.. ಆದ್ರೆ ಅಲ್ಲಿರೋ ಮನೆಗಳನ್ನ ಹೊಕ್ಕುದ್ರೆ ಎದೆ ಝಲ್ ಅನ್ನುತ್ತೆ…ಪ್ರತಿ ಮನೆಯಲ್ಲೂ ಸದಸ್ಯರಂತೆ ವಾಸವಾಗಿವೆ ಅಪಾಯಕಾರಿ ಸರ್ಪಗಳು… ಆ ಸರ್ಪಗಳ ಬುಸ್ ಬುಸ್ ಸದ್ದೆ ಮಕ್ಕಳಿಗೆ ಜೋಗುಳ… ಇಷ್ಟಕ್ಕೂ ಈ ಸರ್ಪಗಳು ಪ್ರತಿ ಮನೆಯಲ್ಲೂ ವಾಸವಿರೋದು ಯಾಕೆ..? ಅಷ್ಟಕ್ಕೂ ಇಂತಹದ್ದೊಂದು ವಿಸ್ಮಯಕಾರಿ ಸ್ಥಳ ಇರೋದಾದ್ರೂ ಎಲ್ಲಿ..? ಇದನ್ನ ಕಲಿಯುಗದ ನಾಗಲೋಕ ಅಂತ ಕರೆಯೋದ್ಯಾಕೆ…ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ
ಮಹಾರಾಷ್ಟ್ರ ಅಂದ ತಕ್ಷಣ ನಮ್ಮ ಕಣ್ಣಿಗೆ ಕಾಣೋದು ಲೆಕ್ಕವಿಲ್ಲದಷ್ಟು ಸ್ಲಮ್ ಗಳು..ಆಕಾಶದೆತ್ತರಕ್ಕೆ ಏರಿರೋ ಹೈಫೈ ಕಟ್ಟಡಗಳು… ಒಂದು ಕಡೆ ವಾಹನ ದಟ್ಟಣೆ, ಮತ್ತೊಂದು ಕಡೆ ಫುಟ್ ಪಾತ್ ನಲ್ಲಿ ಗಡಿಬಿಡಿಯಿಂದ ಓಡಾಡೋ ಸಾವಿರಾರು ಜನ..
ಆದರೆ ದೇಶದ ಎರಡನೇ ದೊಡ್ಡ ರಾಜ್ಯವಾಗಿರೋ ಈ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿಶೇಷತೆಗಳನ್ನ ಹೊಂದಿರೋ ಹಳ್ಳಿಗಳು ಇದಾವೆ.. ಇಲ್ಲಿನ ಎಲ್ಲಾ ಹಳ್ಳಿಗಳಿಗಿಂತ ಭಿನ್ನವಾಗಿ ಎಲ್ಲರನ್ನ ಗಮನ ಸೆಳಿತಿರೋದು land of snake ಅಂತ ಹೆಸ್ರು ಪಡ್ದಿರೋ ಶೆತ್ಫಲ್ ಎಂಬ ಒಂದು ಸಣ್ಣ ಹಳ್ಳಿ.. ಇದು ತನ್ನ ಭಯಂಕರವಾದ ಆಚರಣೆಯಿಂದಲೇ ಪ್ರಖ್ಯಾತಿಗಳಿಸಿರೋ ಗ್ರಾಮ..
ಅಚ್ಚರಿ ಆಗ್ತಿದ್ಯ.. ಅಚ್ಚರಿ ಪಡೋ ವಿಷ್ಯನೇ ಆದ್ರೂ ಸತ್ಯ.. ಕಲ್ಲಿನ ಹಾವಿಗೆ ಹಾಲೆರೆದು ಪೂಜೆ ಮಾಡ್ತಿರೋರ ಎದ್ರುಗೇನೆ ಒಂದು ಹಾವು ಬಂತು ಅಂದ್ರೆ ಭಯದಲ್ಲಿ ನಡುಗಿ ಹೋಗ್ತಾರೆ.. ಅಂತದ್ರಲ್ಲಿ ನಿಜವಾದ ಹಾವುಗಳೊಟ್ಟಿಗೆ ಪ್ರತಿದಿನ ಬದುಕನ್ನ ಸಾಗಿಸ್ತಾ, ಅದನ್ನ ತಮ್ಮ ಮನೆಯ ಸದಸ್ಯನಂತೆ ಪೋಷಿಸಿಕೊಂಡು ಬರ್ತಿದ್ದಾರೆ ಈ ಊರ ಜನ ಅಂದ್ರೆ ನೀವು ನಂಬ್ಲೇಬೇಕು..
ಅಂದಾಗೆ ಈ ಹಳ್ಳಿ ಇರೋದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ.. ನೋಡೋಕೆ ಸುಂದರವಾಗಿದೆಯಾದ್ರೂ ಇದು ಇತರ ಹಳ್ಳಿಗಳಂತಲ್ಲ.. ತನ್ನ ಭಯಾನಕ ಪರಿಸರದಿಂದ ಎಲ್ಲರ ಗಮನವನ್ನ ಸೆಳೀತಿರೋ ಈ ಹಳ್ಳಿಯಲ್ಲಿ ಸುಮಾರು 2650 ಜನ ಬದುಕನ್ನ ಕಟ್ಟಿಕೊಂಡಿದ್ದಾರೆ.. ಈ ಎಲ್ಲರಲ್ಲೂ ಹಾವಿನ ಬಗ್ಗೆ ಇರೋ ಆಸಕ್ತಿ ನಿಜಕ್ಕೂ ಬೆಚ್ಚಿಬೀಳಿಸುವಂತದ್ದು..
ಹೌದು.. ಈ ಹಳ್ಳಿಯಲ್ಲಿನ ಪ್ರತಿಯೊಂದು ಮನೆಗೂ ವಿಶೇಷ ಅತಿಥಿಯೊಬ್ಬ ಪ್ರತಿದಿನ ಬಂದೇ ಬರ್ತಾನೆ.. ಇಂತ ರಿಮೋಟ್ ಏರಿಯಾಗೆ ಯಾವ ವಿಶೇಷ ಅತಿಥಿ ಅಂತ ಅನ್ಕೋಬೇಡಿ.. ಇಲ್ಲಿ ನಮಗೆ ಸಿಗೋ ಅತಿಥಿ ಬೇರೆ ಯಾರೂ ಅಲ್ಲ.. ಈ ನಾಗರಾಜ..
ಯೆಸ್.. ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ಕಾಳಿಂಗ ಸರ್ಪಗಳು ಹಲವು ವರ್ಷಗಳಿಂದ ಇಲ್ಲಿನ ಪ್ರತಿಮನೆಯಲ್ಲೂ ಜಾಗ ಮಾಡಿಕೊಂಡಿವೆ.. ಅವರ ಜೊತೆ ಸೋದರರಂತೆ ಬದುಕ್ತಾನೂ ಇವೆ..ಇಂತಹದ್ದೊಂದು ವಿಸ್ಮಯಕ್ಕೆ ಕಾರಣವಾಗಿರೋ ಊರಿನ ಹೆಸ್ರು ಶೆತ್ಫಲ್..!
ಯಾವುದಿದು ಶೆತ್ಫಲ್ ಗ್ರಾಮ.. ಹಾವುಗಳಿಗೂ ಈ ಹಳ್ಳಿಗೂ ಇರೋ ನಂಟಾದ್ರೂ ಏನು? ಹಾವು ಅಂದ್ರೇನೆ ಮೂರು ಮಾರು ದೂರ ಓಡೋ ಜನ ಹಾವುಗಳೊಂದಿಗೆ ಜೀವನ ಸಾಗಿಸ್ತಿದಾರೆ ಅಂದ್ರೆ ಅದಕ್ಕೆ ಕಾರಣ ಆದ್ರೂ ಏನು?. ಎಲ್ಲವನ್ನೂ ಹೇಳ್ತೀವಿ ಆದ್ರೆ ಅದಕ್ಕಿಂತ ಮುಂಚೆ ಒಂದು ಸ್ಮಾಲ್ ಬ್ರೇಕ್.
ಈ ಹಳ್ಳಿಯಲ್ಲಿ ಹಾವಿಗೆ ಆಶ್ರಯ ಒದಗಿಸದೇ ಇರೋ ಒಂದೇ ಒಂದು ಮನೇನೂ ಇಲ್ಲ.. ಪ್ರತಿ ಮನೆಯಲ್ಲೂ ಹಾವುಗಳಿಗೆ ನೆರಳಿದೆ ಅಂದ್ರೆ ಆಶ್ಚರ್ಯ ಆಗುತ್ತೆ.. ಇದಕ್ಕೆ ಕಾರಣ ಆದ್ರೂ ಏನು ಅಂತ ಹುಡುಕ್ತಾ ಹೋದಾಗ ಸಾಕಷ್ಟು ಅಂಶಗಳು ಬೆಳಕಿಗೆ ಬರುತ್ತೆ.
ಈ ಶೆತ್ಫಲ್ ಹಳ್ಳಿಯಲ್ಲಿ ಹಾವುಗಳಿಗೆ ವಿಶೇಷ ಮನ್ನಣೆ ಇದೆ.. ಇವು ಈ ಹಳ್ಳಿಯ ಯಾವುದೇ ರಸ್ತೆಯಲ್ಲಿ ಯಾವದೇ ಮನೆಯಲ್ಲಿ ಎಲ್ಲಿ ಬೇಕಾದರೂ ಓಡಾಡಿಕೊಂಡು ಇರ್ತಾವೆ… ಯಾರು ಇದಕ್ಕೆ ಅಡ್ಡಿ ಮಾಡೋದಿಲ್ಲ.. ಹಾವುಗಳು ಕೂಡ ಜನರಿಗೆ ತೊಂದರೆಯನ್ನ ಕೊಡೋದಿಲ್ಲ.. ಆದ್ರೆ ಈ ರೀತಿ ಹಾವುಗಳು ಪ್ರತಿ ಮನೆಯಲ್ಲು ಆಶ್ರಯ ಪಡ್ಯೋಕೆ ಒಂದು ವಿಶೇಷ ಕಾರಣ ಇದೆ..
ಪುಣೆಯಿಂದ ಸುಮಾರು 200 ಕಿ.ಮೀ ದೂರದಲ್ಲಿರೋ ಈ ಶೆತ್ಫಲ್ ಹಳ್ಳಿಯಲ್ಲಿನ ಪ್ರತಿಯಂದು ಮನೆಯೂ ಕೂಡ ಹಾವುಗಳ ಆಶ್ರಯತಾಣ.. ಎಲ್ಲಿ ನೋಡುದ್ರು ಹಾವುಗಳು ಹರಿದಾಡೋದನ್ನ ಕಾಣ್ಬೋದು.. ಯಾಕೆ ಗೊತ್ತಾ?
ನಮ್ಮ ಭಾರತದಲ್ಲಿ ಮೊದ್ಲಿಂದಾನೂ ಹಾವುಗಳನ್ನ ದೇವರು ಅಂತ ಆರಾಧಿಸ್ತೀವಿ.. ಹಾವುಗಳನ್ನ ಕುರಿತಂತೆ ಸಾಕಷ್ಟು ಪುರಾಣ ಕಥೆಗಳೂ ಕೂಡ ಇದಾವೆ.. ಶಿವ ಹಾವನ್ನ ತನ್ನ ಕೊರಳಲ್ಳೇ ಸುತ್ತಿಕೊಂಡಿದ್ರೆ, ಕೃಷ್ಣ ಕಾಳಿಂಗ ಸರ್ಪವನ್ನ ಮಣಿಸಿದ ಕಥೆ ಇದೆ…..
ನಾಗರ ಪಂಚಮಿ ಅನ್ನೋ ವಿಶೇಷ ಹಬ್ಬದಂದು ಹಾವನ್ನ ಪೂಜಿಸಿ ಅದರ ಆಶಿರ್ವಾದ ಪಡ್ಯೋಕೆ ಅಂತ ತುಂಬಾ ಜನ ಅದನ್ನ ಆರಾಧಿಸ್ತಾರೆ.. ಅದ್ರೆ ಅವರ ಆರಾಧನೆ, ಪೂಜೆ ಏನೇ ಇದ್ರೂ ಅದು ನಾಗರ ಕಲ್ಲಿಗೆ ಮಾತ್ರ.. ನಿಜವಾದ ಹಾವನ್ನ ಎದುರಿಗೆ ಕೂರಿಸಿಕೊಂಡು ಪೂಜೆ ಮಾಡಿ ಅಂದ್ರೆ ಮಾಡ್ತಾರಾ? ಆದರೆ ಈ ಊರ ಜನ ಹಾವಿನ ಜೊತೆ ಜೊತೆಯಲ್ಲೇ ಬದುಕನ್ನ ಕಟ್ಟಿಕೊಂಡಿದ್ದಾರೆ…ಇದಕ್ಕೊಂದು ಕಾರಣ ಇರಲೇಬೇಕಲ್ವಾ..?
ಹೌದು….ಇದಕ್ಕೆ ಕಾರಣ ಏನಪ್ಪ ಅಂದ್ರೆ, ಇಲ್ಲಿನ ಜನರ ನಂಬಿಕೆ.. ಈ ಹಳ್ಳಿಯ ಪ್ರತಿ ಮನೆಯಲ್ಲೂ ನಾಗರಾಜನಿಗೆ ಅಂತಲೇ ಒಂದು ವಿಶೇಷ ಸ್ಥಳ ಇದ್ದೇ ಇರುತ್ತೆ…ಈ ಸ್ಪೆಶಲ್ ಪ್ಲೇಸ್ನಲ್ಲಿ ಹಾವುಗಳು ಬಂದು ರೆಸ್ಟ್ ಮಾಡಿ ಹೋಗ್ತಾವೆ.. ಇದು ಹಾವುಗಳಿಗೆ ಅಂತ ಮನೆಯವರು ಮನೆಯಲ್ಲೇ ಮಾಡೋ ದೇವಸ್ಥಾನ.. ಈ ದೇವಸ್ಥಾನಕ್ಕೆ ಬಂದು ವಿಶ್ರಾಂತಿ ಪಡ್ಯೋ ಹಾವುಗಳು ಮನೆಯವರನ್ನ ಹರಸಿ ಹೋಗ್ತಾವೆ ಅನ್ನೋದು ಈ ಜನರ ನಂಬಿಕೆ..
“ನಮ್ಮ ಹಳ್ಳಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಹಾವನ್ನ ಕಾಣ್ಬೋದು. ಅವು ನಮ್ಮ ಮನೆಯ ಒಬ್ಬ ಸದಸ್ಯನಂತೆಯೇ ನಮ್ಮ ಜೊತೆ ಇರುತ್ವೆ. ನಮ್ಮ ಹಳ್ಳಿಯಲ್ಲಿನ ಚಿಕ್ಕ ಮಕ್ಕಳೂ ಕೂಡ ಅವುಗಳ ಜೊತೆ ಸ್ನೇಹದಿಂದ ಇರ್ತಾವೆ..”
ಇಲ್ಲಿ ಹಾವುಗಳು ಬಂದಾಗ ಯಾರು ಕಿರ್ಚಾಡೋಲ್ಲ… ಅದಿರ್ಲಿ ಸಣ್ಣ ಭಯನೂ ಅವರ ಮುಖದಲ್ಲಿ ಮೂಡೋಲ್ಲ.. ಹಾವುಗಳು ಕೂಡ ಆರಾಮಾಗಿ ಬಂದು ಮನೆ ತುಂಬಾ ಓಡಾಡಿಕೊಂಡು ಇರ್ತಾವೆ.. ಬೇಕೆಂದಾಗ ಬಂದು ಹೋಗೋಕೆ ಅವುಗಳಿಗೆ ಯಾರ ಅಡ್ಡಿಯೂ ಇಲ್ಲ..
ಹಾವುಗಳು ರೆಸ್ಟ್ ಮಾಡೋಕೆ ಅಂತಾನೆ ಒಂದು ಜಾಗ ಬಿಡೋದು ಇಲ್ಲಿನ ಪದ್ಧತಿ.. ಇದನ್ನ ಹಾವುಗಳು ಫ್ರೀಯಾಗಿ ಓಡಾಡೋ ಅಷ್ಟು ಜಾಗ ಇರೋ ಹಾಗೆ ರೆಡಿ ಮಾಡ್ಲಾಗಿರುತ್ತೆ.. ಅವು ಎಷ್ಟು ಆರಾಮಾಗಿ ಬಂದು ಇಲ್ಲಿದ್ದು ಹೋಗ್ತಾವೋ ಜನಾನೂ ಅಷ್ಟೇ ವಿನಮ್ರಭಾವದಿಮದ ಅವುಗಳಿಗೆ ಸ್ವಾಗತ ನೀಡ್ತಾರೆ..
ಚಿಕ್ಕ ಚಿಕ್ಕ ಮಕ್ಕಳು ಕೂಡ ಹಾವುಗಳನ್ನ ಮೈಮೇಲೆ ಬಿಟ್ಟಿಕೊಂಡು ಆಟ ಆಡ್ತಾವೆ.. ತಮ್ಮ ಸ್ನೇಹಿತ ಅನ್ನೋತರ ಸರ್ಪಗಳೊಟ್ಟಿಗೆ ಸಮಯ ಕಳೀತಾವೆ.. ಈ ಹಾವುಗಳು ಮನೆಯಲ್ಲಿನ ಎಲ್ಲಾ ಕೋಣೆಗಳನ್ನ ಪ್ರವೇಶ ಮಾಡೋದಲ್ದೇ ಕ್ಲಾಸ್ರೂಮ್ಗಳ ಒಳಗೂ ಹೋಗಿ ಪಾಠ ಕೇಳ್ತವೆ.. ಹಾವುಗಳು ಶಾಲೆ ಒಳಗೆ ಬಂದ್ರು ತಡೆಯೋರು ಯಾರೂ ಇಲ್ಲ.. ಮಕ್ಕಳು ಕೂಡ ಭಯ ಗಾಬರಿ ಇಲ್ದೇ ತಮ್ಮ ಪಾಡಿಗೆ ತಾವು ಪಾಠ ಕೇಳ್ತಾರೆ.. ಇದು ಈ ಹಳ್ಳಿಯಲ್ಲಿ ದಿನನಿತ್ಯ ನಡೆಯುವಂತದ್ದು..
ಇದನ್ನೆಲ್ಲಾ ನೋಡ್ತಿದ್ರೆ ಈ ಹಳ್ಳಿಯ ಭಯಾನಕವಾಗಿ ಕಾಣಿಸುತ್ತೆ…ಆದ್ರೆ ಭಯ ಅನ್ಸೋದು ನಮಗೆ ಮಾತ್ರ….ಈ ಊರವರಿಗಲ್ಲ.. ಆದ್ರೆ ಒಂದ್ ಪ್ರಶ್ನೆ…. ಸುತ್ತಾ ಮುತ್ತಾ ಹೀಗೆ ನೂರಾರು ಹಾವುಗಳಿದ್ದಾಗ ಅದು ಯಾರಿಗೂ ಕಚ್ಚಿ ಹಾನಿ ಮಾಡಿಲ್ವ ಅನ್ನೋದು?
ಈ ರೀತಿ ನೂರಾರು ಹಾವುಗಳ ಮಧ್ಯೆ ವಾಸ ಮಾಡ್ತಿರೋ ಅಲ್ಲಿನ ಜನರಿಗೆ ಈ ಸರಿಸೃಪಗಳಿಂದ ಏನಾದ್ರೂ ಹಾನಿಯಾಗಿದ್ಯ? ಅಲ್ಲಿನ ಜನರ ಪ್ರಾಣಕ್ಕೆ ಇರೋ ರಕ್ಷಣೆ ಆದ್ರೂ ಏನು? ಎಲ್ಲವನ್ನೂ ಹೇಳ್ತೀವಿ ಆದ್ರೆ ಅದಕ್ಕು ಮುಂಚೆ ಒಂದು ಶಾರ್ಟ್ ಬ್ರೇಕ್.
ಯಾವ್ದೇ ರೀತಿ ಭಯ ಇಲ್ದೇ ಚಿಕ್ಕ ಮಕ್ಕಳು ಸೇರಿದಂತೆ ಇಲ್ಲಿನ ಜನ ಹಾವುಗಳೊಂದಿಗೆ ಜೀವನ ನಡೆಸ್ತಿದಾರೆ.. ಭಕ್ತಿ ಜೊತೆ ಪ್ರೀತಿನೂ ಕೂಡ ಅವುಗಳಿಗೆ ನೀಡ್ತಿದಾರೆ.. ಅವುಗಳಿಗೆ ನೆಲೆ ಇರ್ಲಿ ಅಂತ ತಮ್ಮ ಮನೆಯಲ್ಲೇ ಸ್ಪೆಶಲ್ ಪ್ಲೇಸ್ ಅನ್ನು ಕೂಡ ಬಿಟ್ಟು ಕೊಟ್ಟಿದ್ದಾರೆ.. ಏನೇ ಆಗ್ಲಿ.. ಈ ಹಾವುಗಳು ಹಳ್ಳಿಗರಿಗೆ ಏನು ಹಾನಿ ಮಾಡ್ಲಿಲ್ವ ಅನ್ನೋದು ಒಂದು ಪ್ರಶ್ನೆಯಾಗಿ ಎಲ್ಲರನ್ನು ಕಾಡುತ್ತೆ..
ಇಲ್ಲಿ ಹೇಳ್ಬೇಕಿರೋ ಒಂದೇ ಮಾತು ಅಂದ್ರೆ.. ಇಲ್ಲಿನ ಜನ ನಿಜಕ್ಕೂ gusty people.. ಯಾಕಂದ್ರೆ ಈ ಹಾವುಗಳಿಂದ ಇದುವರೆಗೂ ಒಬ್ಬರಿಗೂ ಕೂಡ ಯಾವ್ದೇ ರೀತಿಲಿ ಹಾನಿ ಆಗಿಲ್ಲ.. ಇಷ್ಟೊಂದು ಹಾವುಗಳು ದಿನ ಜನರ ಸುತ್ತ ಮುತ್ತಾನೇ ಸುತ್ತಾಡ್ತಿದ್ರು ಅವು ಒಂದು ಬಾರೀನೂ ಯಾರನ್ನು ಕಚ್ಚಿದ ಉದಾಹರಣೆ ಇಲ್ಲ..
ಇಲ್ಲಿನ ಪ್ರತಿ ಮನೆಯ ಛಾವಣಿಯಲ್ಲಿ ಹಾವುಗಳಿಗೆ ಅಂತ ಸ್ಥಾನ ನೀಡೋಕೆ ಕಾರಣ ಶಿವನ ಮೇಲಿನ ಭಕ್ತಿ.. ಹೌದು.. ಶಿವನನ್ನ ಪೂಜಿಸೋರು ಹಾವನ್ನ ಕೂಡ ಪೂಜಿಸೋದನ್ನ ನಾವು ನೋಡ್ತಾ ಬಂದಿದೀವಿ.. ಈ ಹಳ್ಲೀಯಲ್ಲಿ ಸಿದ್ದೇಶ್ವರ ದೇವಾಲಯ ಅಂತ ಒಂದು ದೇವಸ್ಥಾನ ಇದೆ… ಇಲ್ಲಿ ಇರೋದು ಶಿವನ ಮೂರ್ತಿ.. ಈ ಶಿವನ ಮೂರ್ತಿಯ ಮೇಲೆ ತಾಮ್ರದ ಏಳು ತಲೆಯ ಸರ್ಪವಿದೆ.. ಈ ಪರಶಿವನನ್ನ ಆರಾಧಿಸೋ ಜನ ಹಾವುಗಳಿಗೆ ನೆರಳನ್ನ ಒದಗಿಸೋದು ತಮ್ಮ ಕರ್ತವ್ಯ ಅಂತಾನೇ ತಿಳ್ದಿದಾರೆ.. ಅದಕ್ಕಾಗಿ ಅವುಗಳು ಬಂದು ವಿಶ್ರಾಂತಿ ಪಡೆಯೋದಕ್ಕೆ ಸಹಾಯ ಆಗ್ಲಿ ಅಂತ ವಿಶೇಷ ಜಾಗಗಳನ್ನ ಮನೆಯಲ್ಲಿ ಮಾಡಿದ್ದಾರೆ
ಅಷ್ಟೇ ಅಲ್ಲಾ ಹಾವು ಕಚ್ಚಿರೋರನ್ನ ಕರ್ಕೊಂಡು ಬಂದ್ರೆ ಅವರನ್ನ ಗುಣ ಪಡಿಸುವ ಶಕ್ತಿ ಈ ದೇವರಿಗೆ ಇದೆ ಅಂತಾನೂ ಸ್ಥಳೀಯರು ನಂಬಿಕೆ ಇಟ್ಟಿದ್ದಾರೆ.. ಹಾಗಾಗಿ ಇಲ್ಲಿಗೆ ಸಾಕಷ್ಟು ಕಡೆಯಿಂದ ಹಾವು ಕಡಿತಕ್ಕೆ ಮದ್ದು ಹುಡುಕಿಕೊಂಡು ಇಲ್ಲಿಗೆ ಬರ್ತಾರೆ….
ಹಾವುಗಳು ಇಷ್ಟು ಅನ್ಯೋನ್ಯವಾಗಿ ಇಲ್ಲಿನ ಜನರೊಟ್ಟಿಗೆ ಇರೋದಕ್ಕೆ ಕಾರಣ ಏನು ಅಂತ ಯೋಚಿಸಿದ್ರೆ ಅದಕ್ಕೆ ಒಂದು ವೈಜ್ಞಾನಿಕ ವ್ಯಾಖ್ಯಾನವನ್ನ ನೀಡ್ಬೋದು.. ಹಾವುಗಳು ಒಣ ಹವೆಯ ವಾತಾವರಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರ್ತಾವೆ.. ಇದು ಅವುಗಳಿಗೆ ಸೂಕ್ತವಾದ ವಾತಾವರಣ..
ಮಹಾರಾಷ್ಟ್ರದ ಶೆತ್ಫಲ್ ಅನ್ನೋ ಈ ಗ್ರಾಮವೂ ಕೂಡ ಹಾವುಗಳು ವಾಸ ಮಾಡೋದಕ್ಕೆ ಬೇಕಾದಂತ ಹವಾಗುಣವನ್ನು ಹೊಂದಿದೆ.. ಇಲ್ಲಿನ ಜನರು ಅಷ್ಟೇ ಹಾವುಗಳನ್ನ ಕಂಡಾಗ ಗಾಬರಿ ಬೀಳೋದು, ಹೊಡೆಯುವುದು ಅಥವಾ ಓಡಿ ಹೋಗಿ ಆತಂಕ ಸೃಷ್ಟಿ ಮಾಡೋದು ಮಾಡೋದಿಲ್ಲ… ಹಾಗಾಗಿ ಈ ಹಾವುಗಳು ಕೂಡ ಇಲ್ಲಿನ ಜನ್ರಿಗೆ ತೊಂದರೆ ಕೊಡೋದಿಲ್ಲ…
ಅಂದ್ರೆ ಇಲ್ಲಿ ಒಬ್ಬರಿಗೆ ಒಬ್ರು ಹೊಂದಿಕೊಂಡು ಹೋಗೋ ತರದ ಜೀವನ ಶೈಲಿಯನ್ನ ರೂಢಿಸಿಕೊಂಡಿರೋದ್ರಿಂದ ಹಾವಿನ ಜೀವನಕ್ರಮದಲ್ಲಿ ಮನುಷ್ಯರ ಹಾಗೂ ಮನುಷ್ಯರ ಜೀವನದಲ್ಲಿ ಹಾವಿನ ಮಧ್ಯಪ್ರವೇಶ ಆಗಿಲ್ಲ ಅಂತಾನೇ ಹೇಳ್ಬೋದು.. ಈಗೀಗ ಇಲ್ಲಿನ ಗ್ರಾಮಸ್ಥರು ಒಂದು ಹೊಸ ಮನೆಯನ್ನೇ ಕಟ್ಟೋದಕ್ಕೆ ತಯಾರಿ ನಡೆಸ್ತಿದಾರೆ.. ಯಾಕಂದ್ರೆ ಈ ಹಾವುಗಳಿಗೆ ನೆರಳನ್ನ ನೀಡೋ ದೇವಸ್ಥಾನ ಹೆಚ್ಚು ವಿಶಾಲವಾಗಿ.. ವ್ಯವಸ್ಥಿತವಾಗಿರ್ಲಿ ಅಂತ..
ಹಾವುಗಳು ಕಚ್ಚಿ ಅವಘಡ ಆಗ್ಬಿಡುತ್ತೆ ಅನ್ನೋ ಭಯ ನಮ್ಮಂತವ್ರಿಗೆ ಮಾತ್ರ.. ಆದ್ರೆ ಇಲ್ಲಿ ಇದುವರೆಗೂ ಯಾವುದೇ ಅಹಿತಕರ ಘಟನೆಗಳು ವರದಿ ಆಗಿಲ್ಲ…ನಿಜಕ್ಕೂ ಈ ಹಳ್ಳಿಯಲ್ಲಿ ಹಾವು ಮತ್ತು ಮನುಷ್ಯರ ನಡುವಿನ ಅನ್ಯೋನ್ಯತೆ ವಿಸ್ಮಯಕಾರಿಯಾಗಿಯೇ ಇದೆ…ಇದೆಲ್ಲ ನಿಜವಾ..? ಅನ್ನೋ ಪ್ರಶ್ನೆ ನಮ್ಮನ್ನ ಕಾಡುವುದಂತೂ ಸತ್ಯ…