ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಸಿದ್ಧತೆಗಳು ಗರಿಗೆದರಿವೆ. ಮೂರು ಪಕ್ಷಗಳ ಬಿಗ್ ಫೈಟ್ ಗೆ ಅಖಾಡವಾಗಿರೋ ಕರುನಾಡಿನಲ್ಲಿ ಚುನಾವಣಾಧಿಕಾರಿಗಳು ಚುನಾವಣೆ ಎದುರಿಸೋಕೆ ಅಂತ ಇನ್ನಿಲ್ಲದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ..ಯಾವ ರೀತಿ ಸಿದ್ದತೆ ನಡೆಸಿದೆ ಅನ್ನೋ ಫುಲ್ ಡಿಟೇಲ್ಸ್ ಇಲ್ಲಿದೆ. ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರಿದೆ.ಚುನಾವಣೆಗೆ ಇನ್ನೂ ಕೇವಲ 15 ದಿನ ಬಾಕಿ.ಹೀಗಾಗಿ ಪಾರದರ್ಶಕ ಚುನಾವಣೆ ನಡೆಸಲು ಚುನಾವಣೆ ಆಯೋಗ ಮುಂದಾಗಿದೆ.
ಮೇ 10 ರಂದು ನಡೆಯುವ ಚುನಾವಣೆಗೆ ಸಿದ್ದತೆ ನಡೆಸಿರುವ ಆಯೋಗ,ರಾಜ್ಯದಲ್ಲಿನ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.ಇವತ್ತು ಸುದ್ದಿಗೋಷ್ಟಿ ನಡೆಸಿದ ಚುನಾವಣಾ ಆಯೋಗ,ಈ ಬಾರಿ ಎಷ್ಟು ಮಂದಿ ಹೊಸ ಮತದಾರರಿದ್ದಾರೆ..ಮನೆಯಿಂದಲೇ ಮತದಾನ ಮಾಡುವವರು ಎಷ್ಟು ಮಂದಿ,ಎಷ್ಟು ನಗದು, ಉಡುಗೊರೆ ವಸ್ತುಗಳ ಜಪ್ತಿ ಮಾಡಲಾಗಿದೆ ಇತ್ಯಾದಿ ವಿವರಗಳನ್ನು ಬಹಿರಂಗಪಡಿಸಿದರು.
-ರಾಜ್ಯದಲ್ಲಿ ಒಟ್ಟು ಮತದಾರರು- 5,30,85,566
-ಪುರುಷ ಮತದಾರರ ಸಂಖ್ಯೆ 2,66,82,156
– ಮಹಿಳಾ ಮತದಾರರ ಸಂಖ್ಯೆ 2,63,98,483
-16,04,285 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ-
-ಹೊಸದಾಗಿ ಸೇರ್ಪಡೆಯಾದವರಲ್ಲಿ 11,71,558 ಯುವ ಮತದಾರರಾಗಿದ್ದು, 18-19 ವಯಸ್ಸಿನವರಾಗಿದ್ದಾರೆ
ಅನಿವಾಸಿ ಭಾರತೀಯ ಮತದಾರರು- 3048
ವಿಶೇಷ ಚೇತನ ಮತದಾರರು- 571281
2022ರ ಸೆಪ್ಟೆಂಬರ್ 1 ರಿಂದ 38 ಲಕ್ಷ ವೋಟರ್ ಐಡಿ ನೀಡಲಾಗಿದೆ.ರಾಜ್ಯದಲ್ಲಿ 58,545 ಪೋಲಿಂಗ್ ಸ್ಟೇಷನ್ ಸ್ಥಾಪನೆ ಆಗಿವೆ.1,15,709 ಇವಿಎಂ, 89379 ವಿವಿಪ್ಯಾಟ್ ಯಂತ್ರ ಅಳವಡಿಸಲಾಗುವುದು.47,488 ಯೋಧರಿಗೆ ಅಂಚೆ ಮತಪತ್ರಗಳನ್ನು ಕಳುಹಿಸಲಾಗಿದೆ.80 ವರ್ಷ ದಾಟಿದ 80,250 ಜನರು ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿದ್ದಾರೆ.ಪ್ರತಿ ಬೂತ್ ನಲ್ಲಿ ನೋಂದಾಯಿಸಿದ ಮತದಾರರಿಗೆ ಪೂರ್ವ ಮಾಹಿತಿ ನೀಡಲಾಗುವುದು.ಮತದಾನ ಸಿಬ್ಬಂದಿ, ಪೊಲೀಸರು, ಪೋಲಿಂಗ್ ಏಜೆಂಟ್ ಮನೆಯಿಂದಲೇ ಮತದಾನ ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಿದವರ ಮನೆಗೆ ತೆರಳಲಿದ್ದಾರೆ. ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದೆ. ಮನೆಯಿಂದಲೇ ಮತದಾನದ ವಿಡಿಯೋಗ್ರಾಫ್ ಮಾಡಲಾಗುವುದು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನೂ ನೀತಿ ಸಂಹಿತೆ ಹಿನ್ನಲೆಯಲ್ಲಿ ಅನಧಿಕೃತ ರ್ಯಾಣಲಿಗಳ ಸಂಬಂಧ ಈವರೆಗೆ 53 ಎಫ್ಐಆರ್ ದಾಖಲಿಸಲಾಗಿದೆ. ಗುಂಪು ಘರ್ಷಣೆ ಸಂಬಂಧ 15 ಎಫ್ಐಆರ್ ಹಾಗೂ ದ್ವೇಷ ಭಾಷಣ ಸಂಬಂಧ 5 ಎಫ್ಐಆರ್ ಸೇರಿದಂತೆ ಒಟ್ಟು 673 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 265 ಕೋಟಿ ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣೆ ಆಯುಕ್ತರು ತಿಳಿಸಿದರು.. ಒಟ್ನಲ್ಲಿ ಮತದಾರರ ಅನುಮಾನಗಳನ್ನು ದೂರ ಮಾಡಿ, ಪಾರದರ್ಶಕ ಚುನಾವಣೆ ನಡೆಸಲು ಚುನಾವಣೆ ಆಯೋಗ ಮುಂದಾಗಿದೆ. ಈ ಬಾರಿ ಶೇಕಡಾವಾರು ಮತದಾನವನ್ನು ಹೆಚ್ಚಿಸಲು ಚುನಾವಣಾಧಿಕಾರಿಗಳು ಇನ್ನಿಲ್ಲದ ಕಸರತ್ತು ನಡೆಸ್ತಿದ್ದು, ಇವರು ನಿರೀಕ್ಷೆ ಸಕ್ಸಸ್ ಆಗುತ್ತಾ ಅನ್ನೋದು ಚುನಾವಣೆ ಬಳಿಕ ತಿಳಿಯಲಿದೆ.