ಬೆಂಗಳೂರು: ರಾಜಧಾನಿ ಬೆಂಗಳೂರಿನ(Bangalore) ಬೊಮ್ಮನಹಳ್ಳಿ ಕಾಲ್ ಸೆಂಟರ್(Bommanahalli Call Centre) ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಇದೀಗ ಬೊಮ್ಮನಹಳ್ಳಿ ಪೊಲೀಸರ(Bommanahalli Police) ಮೇಲೂ ತನಿಖೆ ನಡೆಯೋ ಸಾಧ್ಯತೆ ಇದೆ. ಬೊಮ್ಮನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್(Inspector Prashant) ಹಾಗೂ ಸಿಬ್ಬಂದಿಗಳ ಮೇಲೆ ಇಲಾಖಾ ತನಿಖೆ ನಡೆಯುವ ಸಾಧ್ಯತೆ ಇದ್ದು, ಅದಕ್ಕೆ ಕಾರಣ ಆರೋಪಿಗಳಿಂದ ಬೊಮ್ಮನಹಳ್ಳಿ ಪೊಲೀಸರು ಈ ಹಿಂದೆಯೇ ಬೆನಿಫಿಟ್ಸ್ ಪಡೆದಿದ್ದರಾ ಎಂಬ ಅನುಮಾನವೇ ಕಾರಣವಾಗಿದೆ. ಅಕ್ಯುಮೆಟ್ರಿಕ್ ಕಂಪೆನಿಯ(Accumetric Company) ಮೇಲೆ ಸಿಸಿಬಿ ದಾಳಿಯಿಂದ ಹಿಂದಿನ ಡೀಲ್ ಪ್ರಕರಣ ಬೆಳಕಿಗೆ ಬರುತ್ತಾ ಎನ್ನುವ ಅನುಮಾನ ಇದೀಗ ಎದ್ದಿದೆ.
ಏನಿದು ಪ್ರಕರಣ?
ಚಿತ್ತೂರಿನ ಅಜಯ್, ಎನ್.ವಿ ಅಕ್ಯುಮೆಟ್ರಿಕ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್(Managing Director) ಆಗಿದ್ದ. ಬಡಮಕ್ಕಳಿಗೆ ಸಹಾಯ ಮಾಡ್ತೀವಿ ಎಂದು ಈತ ಕಾಲ್ ಸೆಂಟರ್ ತೆಗೆದಿದ್ದ. ಕಾಲ್ ಸೆಂಟರ್ನ ಪ್ರತಿ ಸಿಬ್ಬಂದಿಯೂ ದಿನವೊಂದಕ್ಕೆ 200 ಕಾಲ್ ಮಾಡಲೇ ಬೇಕಿತ್ತು ಎಂದು ಹೇಳಲಾ ಗುತ್ತಿದೆ. ಹೀಗೆ ಕರೆ ಸ್ವೀಕರಿಸಿ ದಾನ ಮಾಡುತ್ತೇವೆ ಎಂದು ಹಣವನ್ನು ಟ್ರಾನ್ಫರ್ ಮಾಡಿದರೆ ಆರೋಪಿ ಅಜಯ್,
ತನ್ನ ಎನ್ಜಿಓ ಬ್ಯಾಂಕ್ ಖಾತೆಗೆ(NGO Bank Account) ಆ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.ಇನ್ನು ಈ ಆರೋಪಿ ಅಜಯ್, ಈ ಹಿಂದೆ ಯೂಟ್ಯೂಬ್ ನಲ್ಲಿ ಸಾಂಗ್ ಕೂಡ ಮಾಡಿದ್ದ. ಯೂಟ್ಯೂಬ್ನಲ್ಲಿ ಆರೋಪಿಯ ಹಾಡುಗಳು ಲಕ್ಷಾಂತರ ವೀವ್ಸ್ ಪಡೆದಿದ್ದು ಈತನ ಕ್ರೇಜ್ ಹೇಗಿದೆ ಅನ್ನೋದನ್ನ ಈ ವೀಡಿಯೋವನ್ನು ನೋಡಿದ್ರೆ ಗೊತ್ತಾಗುತ್ತದೆ. ಅಜಯ್ ಬೇಗ ಶ್ರೀಮಂತನಾಗಬೇಕು, ಪ್ರಖ್ಯಾತಿ ಗಳಿಸಬೇಕು ಎಂದು ಹೀಗೆಲ್ಲಾ ಮಾಡಿದ್ದಾನೆ ಎಂದು ಹೇಳಲಾಗಿದೆ.