ರಾಮನಗರ: ನಾನು ಕನಕಪುರಕ್ಕೆ ಬಂದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಭಯ ಕಾಡುತ್ತಿದೆ, ಅದಕ್ಕಾಗಿ ಮಾಟ – ಮಂತ್ರ ಮಾಡಿಸುತ್ತಿದ್ದಾರೆ ಎಂದು ಆರ್. ಅಶೋಕ್ (R Ashok) ವ್ಯಂಗ್ಯವಾಡಿದರು.
ಕನಕಪುರ ತಾಲೂಕಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಕುಮಾರ್ಗೆ ಸೋಲಿನ ಬಗ್ಗೆ ಅರಿವು ಆದ ಕೂಡಲೇ ಹೋಮ, ಹವನ ಮಾಡಿಸುತ್ತಿದ್ದಾರೆ. ಮಾಠ-ಮಂತ್ರ ಎಲ್ಲ ಮಾಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಶ್ರೀಮತಿಯೂ ಫಸ್ಟ್ ಟೈಮ್ ಚುನಾವಣೆ (Election) ಪ್ರಚಾರ ಮಾಡುತ್ತಿದ್ದಾರೆ. ನನ್ನನ್ನು ಅವರು ಟ್ರಾಕ್ ಮಾಡುತ್ತಿದ್ದಾರೆ. ಆದರೆ ಅವರಿಗೆ ಗೆಲುವು ಈ ಸಾರಿ ಅಷ್ಟು ಸುಲಭವಲ್ಲ ಎಂದು ಸವಾಲು ಹಾಕಿದರು.
ಕನಕಪುರವನ್ನು ಸೂಕ್ತ ಪ್ರದೇಶವಾಗಿ ಘೋಷಣೆ ಮಾಡಿ. ಎಲ್ಲ ಮತಗಟ್ಟೆ ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಬೇಕೆಂದು ನಾನು ಚುನಾವಣಾ ಆಯೋಗಕ್ಕೂ ಪತ್ರ ಬರೆಯುತ್ತೇನೆ ಎಂದ ಅವರು, ಜೆಡಿಎಸ್ನವರು ಕೂಡ ಆತಂಕಗೊಂಡಿದ್ದಾರೆ. ನಾವು ಏನೋ ಮತ ಹಾಕಿಸುತ್ತೇವೆ. ಆದರೆ ಆ ಮತಗಳನ್ನು ಕೊನೆಗೆ ಶಿವಕುಮಾರ್ ಇಲ್ಲದೆ ರೀತಿ ಮಾಡ್ತಾರೆ ಅಂತಾ ಶಿವಕುಮಾರ್ ನಡೆಗೆ ಅವರ ಪಕ್ಷದವರೇ ಬೇಸತ್ತು ಹೋಗಿದ್ದಾರೆ. ನನಗೆ ಅವರ ಎಷ್ಟು ಕಾರ್ಯಕರ್ತರು ಫೋನ್ ಮಾಡಿ ಬೆಂಬಲ ಕೊಡುತ್ತಿದ್ದಾರೆ ಎಂದು ಹೇಳಿದರು.
ಡಿಕೆಶಿ ಹುಟ್ಟೂರಿಗೂ ನಾನು ಹೋಗಿದ್ದೇನೆ. ನಾನು ಜೆಡಿಎಸ್ ಮುಖಂಡರಿಗೆ ಮನವಿ ಮಾಡುತ್ತೇನೆ. ಇಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ನಿರ್ಮಾಣ ಆಗುತ್ತಿದೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಜೋಡೇತ್ತಿನ ಪರಿಸ್ಥಿತಿ ನೋಡಿದ್ದೀರಿ. ಜೋಡೆತ್ತುಗಳ ನಡುವಳಿಕೆಯನ್ನು ನೀವು ನೋಡಿದ್ದೀರಿ. ಕನಕಪುರದಲ್ಲಿ ದಿನನಿತ್ಯ ಗಲಾಟೆಗಳು ನಡೆಯುತ್ತಿವೆ. ಇವರು ಮತ್ತೆ ಜೋಡೆತ್ತು ಆದರೆ ನಿಮ್ ಕಥೆ ಏನು ಅಂತಾ ಯೋಚನೆ ಮಾಡಿ. ಅದಕ್ಕಾಗಿ ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ, ಬಿಜೆಪಿಗೆ ಸೇರ್ಪಡೆ ಆಗಿ ಎಂದು ತಿಳಿಸಿದರು.