ಚಾಮರಾಜನಗರ:- ಜೆಡಿಎಸ್ ಅಭ್ಯರ್ಥಿಗೆ ಆಮಿಷವೊ ಡ್ಡಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿರುದ್ಧ ಕ್ರಮವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ಗೆ ಕರ್ನಾಟಕ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಅಂಬರೀಶ್ ದೂರು ನೀಡಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ 223 ಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಪರಿಶೀಲನೆ ಮುಗಿದು ಹಿಂಪಡೆಯಲು ನಿಗದಿಯಾಗಿದ್ದ ಸಮಯದೊಳಗಿನ ಪರಿಮಿತಿಗೆ ಒಳಪಟ್ಟು ಒಂದು ಗಂಟೆ ಅವಧಿಯ ಹಿಂದೆ ಜೆ.ಡಿ.ಎಸ್ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ ಬಿ.ಜೆ.ಪಿ ಅಭ್ಯರ್ಥಿಯಾದ ಸೋಮಣ್ಣ ಹಾಗೂ ಅವರ ಸಹಚರರು ಕರೆ ಮಾಡಿ ಆಮಿಷ ಒಡ್ಡಿರುವುದರ ವಿಷಯವು ಸುದ್ದಿ ಮಾದ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದಾಗಿದೆ.
ಜೊತೆಗೆ ಈ ಆಡಿಯೋ ಸಂಭಾಷಣೆಯ ನೈಜತೆಯನ್ನು ಕುರಿತು ಸ್ವತಃ ಜೆ.ಡಿ.ಎಸ್ ಅಭ್ಯರ್ಥಿ ಆಲೂರು ಮಲ್ಲು ಸತ್ಯವೆಂದು ಹೇಳಿಕೆ ಕೊಟ್ಟಿದ್ದಾರೆ. ಹೀಗಿದ್ದರೂ ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಮೇಲೆ ನಡೆದಿರುವ ಈ ದೌರ್ಜನ್ಯ ಪ್ರಕರಣ ಕುರಿತು ಸಾರ್ವಜನಿಕ ಸಾಕ್ಷ್ಯ ಲಭ್ಯವಿದ್ದರೂ ಕನಿಷ್ಟ ಕ್ರಮವನ್ನು ತೆಗೆದುಕೊಳ್ಳದೆ ಇರುವುದು ಅನುಮಾನವನ್ನು ಹುಟ್ಟುಹಾಕಿದೆ. ಈ ಕೂಡಲೇ ಆಮಿಷವೊಡ್ಡಿರುವ ಬಿ.ಜೆ.ಪಿ ಅಭ್ಯರ್ಥಿ ಹಾಗೂ ಅವರ ಸಹಚರರ ಮೇಲೆ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಕೊಳ್ಳೇಗಾಲ ಅಭ್ಯರ್ಥಿ ನಿಂಗರಾಜು ಎಸ್, ಚಾಮರಾಜನಗರ ಅಭ್ಯರ್ಥಿ ಎಂ. ನಾಗೇಂದ್ರ ಬಾಬು ಇದ್ದರು.