ಅಣ್ಣಿಗೇರಿ: ನಾಳೆ ಪಟ್ಟಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಎಪ್ರಿಲ್ 28ರಂದು ಶುಕ್ರವಾರ ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ ತಿಳಿಸಿದರು. ಪಟ್ಟಣದಲ್ಲಿ ಬುಧವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಂಕರ್ ಪಾಟೀಲ ಮುನೇನಕೊಪ್ಪರ ಚುನಾವಣೆ ಪ್ರಚಾರಕ್ಕಾಗಿ ಶುಕ್ರವಾರ 28ನೇ ತಾರೀಕಿನಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ನಾವು ಅನೇಕ ತಯಾರಿಗಳನ್ನು ಹಾಗೂ ವ್ಯವಸ್ಥಿತವಾದ ಕಾರ್ಯಕ್ರಮವನ್ನು ನಡೆಸಲು ಸಜ್ಜಾಗಿದ್ದೇವೆ ಎಂದರು. ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಕೇಂದ್ರ ಸಚಿವರಾದ ಪ್ರಲಾಜಿ ಜೋಶಿ,ಶಂಕರ ಪಾಟೀಲ ಮುನ್ನೇನಕೊಪ್ಪ ಸೇರಿದಂತೆ ಅನೇಕ ಮುಖಂಡರು ಸಾತ ನೀಡಲಿದ್ದಾರೆ.ಹಾಗೂ ಈ ಒಂದು ಕಾರ್ಯಕ್ರಮಕ್ಕೆ 20 ರಿಂದ 25 ಸಾವಿರ ಜನಸಂಖ್ಯೆ ಕೊಡುವ ನಿರೀಕ್ಷೆ ಎಂದು ಇದೆ ವೇಳೆ ತಿಳಿಸಿದರು.ಈ ವೇಳೆ ಎಸ್ ಬಿ ದಾನಪ್ಪ ಗೌಡರ, ಶಿವಯೋಗಿ ಸುರುಕೋಡ, ದೇವರಾಜ ದಾಡಿಬಾವಿ,ಶಿವಾನಂದ ಹೊಸಳ್ಳಿ, ಸಿಜಿ ನಾವಳ್ಳಿ, ರಾಘವೇಂದ್ರ ರಾಮಗಿರಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು