ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ (dk shivukumer) ಮೇಲೆ ದಾಸರಹಳ್ಳಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಪಿ ಎನ್ ಕೃಷ್ಣಮೂರ್ತಿ( PN Krishnamurthy) ಅವರು ಗಂಭೀರ ಆರೋಪ ಮಾಡಿದ್ದಾರೆ. ಡಿಕೆಶಿವಕುಮಾರ್ ಗೆ ಬೆಂಗಳೂರಿನಲ್ಲಿ ಪತ್ರ ಬರೆದು ಪಿ ಎನ್ ಕೃಷ್ಣಮೂರ್ತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಅವರು ದಾಸರ ಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ದಾಸರಹಳ್ಳಿ ಮಂಜುನಾಥ್ ರನ್ನು ಕಾಂಗ್ರೆಸ್ ಕರೆತರಲು ಪ್ರಯತ್ನ ಮಾಡಿ ವಿಫಲರಾದರು.
ಹೀಗಾಗಿ ದಾಸರಹಳ್ಳಿ ಮಂಜುನಾಥ್ ಗೆ (Dasarahalli Manjunath)ಅನುಕೂಲ ಆಗಲು ಧನಂಜಯ್ ಗೆ ಟಿಕೇಟ್ ನೀಡಿದ್ದಾರೆ. ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ ಗೆ ಗೆಲುವು ಸಿಗಲು ಕಳೆದ ಬಾರಿಯೂ ಡಿಕೆಶಿ ದ್ರೋಹ ಮಾಡಿದ್ದರು. ನನ್ನನ್ನು ಸೋಲಿಸಲೆಂದೇ ಆರ್ ಆರ್ ನಗರದಲ್ಲಿ ಜೆಡಿಎಸ್ ನಿಂದ ೨೦೧೩ ರಲ್ಲಿ ಹನುಮಂತರಾಯಪ್ಪ ರನ್ನು ಡಿಕೆಶಿ ಕರೆತಂದು ಜೆಡಿ ಎಸ್ ಟಿಕೇಟ್ ನೀಡಿದರು ಎಂದು ಪಿ ಎನ್ ಕೃಷ್ಣಮೂರ್ತಿ ಅವರು ಪತ್ರದಲ್ಲಿ ಆರೋಪ ಮಾಡಿದ್ದಾರೆ.