ಬೆಂಗಳೂರು: ಕೇಂದ್ರದ ಎಲ್ಲ ಯೋಜನೆಗಳು ಎಲ್ಲ ಸಮುದಾಯಕ್ಕೂ ಸಿಕ್ಕಿವೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ತಿಳಿಸಿದರು. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ(Malleshwar BJP office) ಮಾತನಾಡಿದ ಅವರು,ಮುಸ್ಲಿಂ ಮೀಸಲಾತಿ ರದ್ದುಪಡಿಸಿದ್ದನ್ನು ಸಮರ್ಥಿಸಿಕೊಂಡು ಸಂವಿಧಾನ ಬದ್ಧವಾಗಿಲ್ಲದ ಮೀಸಲಾತಿ ರದ್ದುಪಡಿಸಲಾಗಿದೆ. ಆದರೆ, ಅವರಿಗಿರುವ ಸವಲತ್ತುಗಳನ್ನು ತೆಗೆದಿಲ್ಲ. ನಮ್ಮ ಸರ್ಕಾರ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಎನ್ನುವ ತತ್ವದ ಅಡಿ ಇದೆ. ಮುಸ್ಲಿಂ , ಕ್ರಿಶ್ಚಿಯನ್ ಹಿಂದೂ ಎಲ್ಲ ಧರ್ಮದ ಜನರಿಗೂ ನಮ್ಮ ಸರ್ಕಾರ ಎಲ್ಲ ಸೌಲಭ್ಯ ನೀಡಿದೆ.
ಮುಸ್ಲಿಮರಿಗೆ ಅನ್ಯಾಯ ಮಾಡಿತು ಎನ್ನುವುದು ಸುಳ್ಳು ಆರೋಪ. ಆ ರೀತಿ ಹೇಳುವುದು ವಿಪಕ್ಷಗಳ ಕೇವಲ ಪ್ರಚಾರ ಮಾತ್ರ. ಕೇಂದ್ರದ ಯಾವುದೇ ಯೋಜನೆಗಳಲ್ಲಿ ತಾರತಮ್ಯ ಮಾಡಿಲ್ಲ. ಎಲ್ಲ ಯೋಜನೆಗಳು ಎಲ್ಲ ಸಮುದಾಯದ ಜನರಿಗೆ ಸಮಾನವಾಗಿ ತಲುಪಿದೆ. ಯಾವ ಯೋಜನೆಯಿಂದ ಯಾವುದೇ ಸಮುದಾಯವನ್ನೂ ಹೊರಗಿಟ್ಟಿಲ್ಲ. ಅಭಿವೃದ್ಧಿ ಯೋಜನೆಗಳಲ್ಲಿ ತಾರತಮ್ಯ ಮಾಡಿಲ್ಲ. ತಾರತಮ್ಯ ಮಾಡಿದ್ದು, ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಹೇಳಿದ್ದಾರೆ.