ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಲೆಕ್ಷನ್(Election in the state) ಬಿಸಿಯ ಜೊತೆ ಜೊತೆಗೆ ಬಿಸಿಲಿನ ಕಾವು ಕೂಡ ಹೆಚ್ಚಳವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ (capital is Bangalore)ಬೇಸಿಗೆಯ ಸುಡು ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದು ಬೇಸಿಗೆಯ ಬಿಸಿ ಝಳಕ್ಕೆ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬಳಕೆ(Power consumption) ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ. ಬಿಸಿಲಿನ ಹಬೆಯಿಂದ ಬೆಂದಿರುವ ಜನರು ಇಡೀದಿನ ಫ್ಯಾನ್, ಏರ್ ಕಂಡಿಷನ್, ಏರ್ ಕೂಲರ್ ಮೊರೆ ಹೋಗುತ್ತಿದ್ದು, ಕಳೆದ ವರ್ಷಗಳಿಗೆ ಹೋಲಿಸಿದ್ರೆ, ಈ ಬಾರಿ ವಿದ್ಯುತ್ ಬಳಕೆ ಭಾರೀ ಹೆಚ್ಚಳ ಕಂಡಿದೆ.
ಮಾರ್ಚ್ 2022 ರಲ್ಲಿ 6913 ಮೆಗಾ ವ್ಯಾಟ್ ಬಳಕೆ ಮಾಡಲಾಗಿತ್ತು. ಆದರೆ ಈ ಬಾರಿ ಮಾರ್ಚ್ 2023ರಲ್ಲಿ 7740 ಮೆಗಾ ವ್ಯಾಟ್ ಬಳಕೆ ಮಾಡಲಾಗಿದೆ. ಹೀಗಾಗಿ 2022 ಮಾರ್ಚ್ ಹೋಲಿಸಿದ್ರೆ 2023 ಮಾರ್ಚ್ನಲ್ಲಿ 829 ವ್ಯಾಟ್ ಏರಿಕೆ ಕಂಡಿದ್ದು, ವಿದ್ಯುತ್ ಅನಾವಶ್ಯಕ ಉಪಯೋಗ ಬೇಡ ಎಂದು ಬೆಸ್ಕಾಂ ಗ್ರಾಹಕ ವಿಭಾಗದ ಮ್ಯಾನೇಜರ್ ನಾಗರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.