ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿದ್ದ ಚಿಲುಮೆ ಸಂಸ್ಥೆ(Chilume NGO) ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಮತಗಟ್ಟೆಗಳಿಗೆ ಸಾಮಗ್ರಿ ಟೆಂಡರ್ ಪಡೆಯಲು ಬಾರಿ ಸರ್ಕಸ್ ಮಾಡುತ್ತಿದೆ. ಮತದಾರರ ಮಾಹಿತಿ ಕಳವು ಮಾಡಿರುವ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆಯು(Chilume NGO) ಶಿಕ್ಷಣ, ಸಂಸ್ಕೃತಿ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್, ನಗರದ ಮತಗಟ್ಟೆಗಳಿಗೆ ಸಾಮಗ್ರಿ ವಿತರಿಸುವ ಹಲವು ಟೆಂಡರ್ನಲ್ಲಿ ಭಾಗವಹಿಸಿದೆ. ಬಿಬಿಎಂಪಿ ಈ ಚಿಲುಮೆ ಸಂಸ್ಥೆಯನ್ನ ಕಳೆದ ವರ್ಷ ಡಿಸೆಂಬರ್ನಲ್ಲಿ ಕಪ್ಪುಪಟ್ಟಿಗೆ ಸೇರಿಸಿತ್ತು.
ಅದರೂ ಸಹ ಈ ಬಾರಿ ವಿಧಾನಸಭಾ ಚುನಾವಣೆಗೆ ಮತಗಟ್ಟೆಗಳಿಗೆ ಬೇಕಾಗುವ ಸಾಮಗ್ರಿಗಳ ಪೂರೈಕೆ ಟೆಂಡರ್ನಲ್ಲಿ ಚಿಲುಮೆ ಸಂಸ್ಥೆ ಮತ್ತೆ ಭಾಗಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮತದಾರ ಮಾಹಿತಿ ಕಳವು ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯನ್ನೂ ಬಿಬಿಎಂಪಿ(BBMP) ಅಯುಕ್ತರು ಕಪ್ಪು ಪಟ್ಟಿಗೆ ಸೇರಿಸಿ, ಯಾವುದೇ ಪಾಲಿಕೆ ಟೆಂಡರ್ ನಲ್ಲಿ ಭಾಗವಹಿಸದಂತೆ ಆದೇಶ ನೀಡಿದ್ದರು. ಅದರೆ ಕೆಲ ರಾಜಕೀಯ ಮುಖಂಡರ ಜೊತೆ ಕೈಜೊಡಿಸಿರುವ ಚಿಲುಮೆ ಸಂಸ್ಥೆ ಮತ್ತೆ ಚುನಾವಣಾ ಹೊತ್ತಲಿ ಕೆಲ ರಾಜಕೀಯ ಮುಖಂಡದ ಜೊತೆಗೆ ಕೈ ಜೋಡಿಸಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಮುಂದಾಗಿದೆ.