ಬೆಂಗಳೂರು: ಆ ಏರಿಯಾದಲ್ಲಿ ಸಂಜೆ ಏನೋ ಒಂಥರಾ ಕೆಟ್ಟ ವಾಸನೇ.. ಯಾವುದೋ ಗಾರ್ಬೇಜ್ ವಾಸನೆ ಅಂದುಕೊಂಡವರಿಗೆ ಗೊತ್ತಾಗಿದ್ದು ಅದು ಗಾರ್ಬೇಜ್ ಅಲ್ಲ ಕೊಳೆತ ಶವದ ವಾಸನೆ ಅಂತ. ಹೌದು ಬೆಂಗಳೂರಿನ(Bangalore) ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ.. ಯೆಸ್ ಇದೇ ಏರಿಯಾ ನೋಡಿ ಎರಡು ಜೋಡಿ ಶವಗಳು ಸಿಕ್ಕಿರುವುದು. ನಗರದ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರ.ಸಂಜೆ ಈ ಏರಿಯಾದಲ್ಲೆ ಏನೋ ಒಂಥರಾ ಕೆಟ್ಟ ವಾಸನೇ ಬರ್ತಾ ಇತ್ತು.
ಒಂದಷ್ಡು ಜನರು ಯಾವುದೋ ಗಾರ್ಬೇಜ್ ವಾಸನೆಯೊ(smell of garbage) ಅಥವಾ ಸ್ಯಾನಿಟರಿ ಪೈಪ್ ಹೊಡೆದು ಹೋಗಿರಬೇಕು ಅಂದುಕೊಂಡಿದ್ರು. ಆದ್ರೆ ಈ ಅಪಾರ್ಟ್ಮೆಂಟ್ ನ ಮೂರನೆ ಮಹಡಿಯಲ್ಲಿ ವಾಸವಿದ್ದವರು ಯಾರು ಮೂರ್ನಾಲ್ಕು ದಿನದಿಂದ ಕಾಣ್ತಾ ಇರಲಿಲ್ಲ. ಅಲ್ಲದೆ ಅಲ್ಲೆ ಹೆಚ್ಚು ವಾಸನೇ ಬರ್ತಾ ಇತ್ತು. ಹೀಗಾಗಿ ಸ್ಥಳಿಯರು ಪೊಲೀಸ್ರು ಮಾಹಿತಿ ನೀಡಿದ್ರು. ಪೊಲೀಸ್ರು ಬಂದು ಪರಿಶೀಲನೆ ಮಾಡಿದಾಗ ಇಬ್ಬರು ಮಹಿಳೆಯರ ಶವ ಪತ್ತೆಯಾಗಿದೆ. ಜಬೀನಾ ಹಾಗೂ ರೆಜಿಯಾ ಸುಲ್ತಾನ ಎಂಬ ತಾಯಿ ಮಗಳು ಎಂಬುದು ಗೊತ್ತಾಗಿದೆ
ಯೆಸ್ ಜಬೀನಾ ಹಾಗೂ ಮಗಳು ರೆಜಿಯಾ ಸುಲ್ತಾನ ಕೆಲ ವರ್ಷಗಳಿಂದ ಇದೇ ಫ್ಲಾಟ್ ನಲ್ಲಿ ವಾಸವಿದ್ರು. ರೆಜಿಯಾ ಸುಲ್ತಾನಗೆ ಮದುವೆ ಮಾಡಿಕೊಟ್ಟಿದ್ರು ಗಂಡನ ಜೊತೆ ಸರಿ ಬಾರದಿದ್ದಕ್ಕೆ ಗಂಡನ ಮನೆಯಿಂದ ಬಂದು ತಾಯಿಯ ಜೊತೆಯೇ ವಾಸವಾಗಿದ್ದಳು. ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡ್ತಾ ಇದ್ದ ರೆಜಿಯಾ ಸುಲ್ತಾನ ತಾಯಿ ಜೊತೆ ಇದ್ದರು ಗಂಡ ಆಗಾಗ ಬಂದು ಗಲಾಟೆ ಮಾಡ್ತಾ ಇದ್ದ. ಹೀಗಿರುವಾಗ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ.
ಅಲ್ಲದೆ ಮೃತ ದೇಹಗಳ ಬಳಿ ಮದ್ಯದ ಬಾಟಲಿ ಹಾಗೂ ಬಲವಂತವಾಗಿ ಕೈಗಳನ್ನ ಕಟ್ಟಿ ಹಾಕಿ ನೇಣಿಗೆ ಹಾಕಿರುವುದು ಪ್ರಾಥಮಿಕವಾಗಿ ಗೊತ್ತಾಗಿದ್ದು ಇಂದೊಂದು ಜೋಡಿ ಕೊಲೆ ಎಂಬ ಅನುಮಾನ ದಟ್ಡವಾಗಿ ಇದೆ. ಸದ್ಯ ಬಂಡೆಪಾಳ್ಯ ಪೊಲೀಸ್ರು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು ರೆಜಿಯಾ ಸುಲ್ತಾನಳ ಗಂಡನನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಾ ಇದ್ದಾರೆ. ಅಲ್ಲದೆ ಪ್ರಕರಣದ ಪತ್ತೆಗಾಗಿ ನಾಲ್ಕು ತಂಡಗಳನ್ನ ಮಾಡಿದ್ದು ಪೊಲೀಸ್ರು ತನಿಖೆಯನ್ನ ತೀವ್ರಗೊಳಿಸಿದ್ದಾರೆ.