ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಇದೀಗ ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮೊದಲ ಬಾರಿಗೆ 2ನೇ ಪತ್ನಿ ಜೊತೆ ಪ್ರಭುದೇವ ಕಾಣಿಸಿಕೊಂಡಿದ್ದು, ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕನ್ನಡದ ಪ್ರತಿಭೆ ನಟ ಪ್ರಭುದೇವ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು ಎಲ್ಲಿಯೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರಭುದೇವ ಪ್ರಭುದೇವ್ ಅವರ 2ನೇ ಮದುವೆ ಬಗ್ಗೆ ರಿವೀಲ್ ಆಗಿತ್ತು.
ಹಿಮಾನಿ ಸಿಂಗ್ ಎಂಬ ವೈದ್ಯೆಯನ್ನು ಸೀಕ್ರೆಟ್ ಆಗಿ ಪ್ರಭುದೇವ್ ಮದುವೆಯಾಗಿದ್ದರು. 2020ರಲ್ಲಿ ಇವರಿಬ್ಬರ ವಿವಾಹ ರಹಸ್ಯವಾಗಿ ನಡೆದಿತ್ತು. ಲಾಕ್ಡೌನ್ನಲ್ಲಿ ಈ ಮದುವೆ ನಡೆದ ಕಾರಣ ಈ ಮದುವೆ ರಹಸ್ಯವಾಗಿಯೇ ಉಳಿಯಿತು. ನಟ ಪ್ರಭುದೇವ ಅವರು ಪತ್ನಿ ಸಮೇತರಾಗಿ ಮೊದಲ ಬಾರಿಗೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡದ್ದ ವೇಳೆ ಪ್ರಭುದೇವ್ ತಮ್ಮ ಪತ್ನಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಜನಸಂದಣಿಗೆ ಇದ್ದಂತಹ ದೇವಸ್ಥಾನದಲ್ಲಿ ಪತ್ನಿಯ ಸುರಕ್ಷತೆಗಾಗಿ ಪತ್ನಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದರು. ಈ ಜೋಡಿಯ ಫೋಟೋ ವೈರಲ್ ಆಗಿದ್ದು, ಅವರಿಬ್ಬರನ್ನೂ ಜೊತೆಯಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಪ್ರಭುದೇವ ಈ ಮೊದಲು ರಮಾಲತಾ ಎಂಬುವವರನ್ನ ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದು, ಮೊದಲ ಮಗ ವಿಶಾಲ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2010ರಲ್ಲಿ 16 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದು ಇದೀಗ ಪ್ರಭುದೇವ್ ಎರಡನೇ ಮದುವೆಯಾಗಿದ್ದಾರೆ.