ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ( Bangalore University)ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆದಿರುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು(Student of Engineering College) ಮೇ 1ರಿಂದ ಹೊರ ಹಾಕುವಂತೆ ಬೆಂಗಳೂರು ವಿಶ್ವವಿದ್ಯಾಲಯ ಸುತ್ತೋಲೆ(Bangalore University Circular) ಹೊರಡಿಸಿದ್ದು, ವಿಶ್ವವಿದ್ಯಾಲಯದ ಈ ಸೂಚನೆಗೆ ವಿದ್ಯಾರ್ಥಿಗಳ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಂಗಳೂರು ವಿವಿಯ ಮಲತಾಯಿ ಧೋರಣೆಯನ್ನ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ಇನ್ನೂ ವಿವಿ ನಡೆ ದುರಹಂಕಾರದ ಪರಮಾವಧಿ ಅಂತ ಸ್ಟೂಡೆಂಟ್ಸ್ ಗರಂ ಆಗಿದ್ದಾರೆ. UVCE ಕಾಲೇಜಿನ ಸ್ವಾಯತ್ತ ನೆಪವೊಡ್ಡಿ ಹಾಸ್ಟೆಲ್ ಇಂದ ವಿದ್ಯಾರ್ಥಿಗಳ ಹೊರ ಹಾಕಲು ವಿವಿ ಕುತಂತ್ರ ನಡೆಸಿದೆ. ಇನ್ನೊಂದು ದಿನದಲ್ಲಿ ಹಾಸ್ಟೆಲ್ ಖಾಲಿ ಮಾಡುವಂತೆ (Like vacating the hostel)ಆದೇಶ ಹೊರಡಿಸಲಾಗಿದೆ. ವಿವಿಯ ಆದೇಶದಿಂದ UVCE ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ವಿವಿ ನಡೆಗೆ ವಿದ್ಯಾರ್ಥಿ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನೊಂದು ವರ್ಷ ಬೆಂಗಳೂರು ವಿವಿ ( Bangalore University)ಯುವಿಸಿಇ ಸಂಪೂರ್ಣ ಖರ್ಚು ನೋಡಿ ಕೊಳ್ಳಬೇಕು ಎಂಬ ಸರ್ಕಾರದ ಅಧಿಕೃತ ಆದೇಶವಿದ್ದರೂ ಬೆಂಗಳೂರು ವಿವಿ ಅಸಡ್ಡೆ ತೋರ್ತಿದೆ ಅಂತ ವಿದ್ಯಾರ್ಥಿಗಳು ಕಿಡಿಕಾರಿದರು. ಸರ್ಕಾರವೇ ಆದೇಶ ಕೊಟ್ಟ ಮೇಲೆ ವಿದ್ಯಾರ್ಥಿಗಳ ನೋಡಿ ಕೊಳ್ಳಲು ವಿವಿಗೇನು ಸಮಸ್ಯೆ? ಏಕಾಏಕಿ ಹಠಾತ್ ನೇ ವಿವಿಯಿಂದ ವಸತಿ ನಿಲಯದಿಂದ ಹೊರ ನಡೆಯೋಕೆ ಡೆಡ್ ಲೈನ್ ಕೊಟ್ರೆ ಏನು ಮಾಡೋದು? ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದ್ದಾರೆ.