ಬೆಂಗಳೂರು : ಮಧ್ಯರಾತ್ರಿ ಮಹಿಳೆ ಮತ್ತು ಮಕ್ಕಳಿದ್ದ ಮೆನೆಗೆ ನುಗ್ಗಿದ ಆರೋಪದಡಿ ಇನ್ಸ್ಪೆಕ್ಟರ್ ವಿರುದ್ದ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಸುಬ್ರಮಣ್ಯ ನಗರ ಠಾಣೆ ಇನ್ಸ್ಪೆಕ್ಟರ್ (Subramanya Nagar Station Inspector)ಶರಣಗೌಡ ವಿರುದ್ದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ( Police Commissioner Pratap Reddy)ದೂರು ಕೊಡಲಾಗಿದೆ. ರಾಜಕುಮಾರ್ ಎಂಬುವರ ಬಂಧನಕ್ಕೆ ಪೊಲೀಸರು ತೆರಳಿದ್ದರು.
ಈ ವೇಳೆ ಮನೆಯಲ್ಲಿದ್ದ ಹೆಂಡತಿ ಹಾಗೂ ಮಗಳ ಜೊತೆ ಪೊಲೀಸರು ಅಸಭ್ಯ ವರ್ತನೆ ಮಾಡಿದ ಆರೋಪವಿದೆ. ಇದನ್ನ ಪ್ರಶ್ನೆ ಮಾಡಲು ರಾಜಕುಮಾರ್ ಇನ್ಸ್ಪೆಕ್ಟರ್ ಗೆ ಕರೆ ಮಾಡಿದ್ದ. ಈ ವೇಳೆ ರಾಜಕುಮಾರ್ ಗೆ ಯಾವುದರ ಬಗ್ಗೆ ಕಪ್ಲೆಂಟ್ ಆಗಿದೆ ಎಂದು ಇನ್ಸ್ಪೆಕ್ಟರ್ ಮಾಹಿತಿ ನೀಡಿಲ್ಲ. ಮಾತ್ರವಲ್ಲ ಯಾರಿಗೆ ಬೇಕಾದ್ರು ದೂರು ಕೊಡು ಎಂದು ಅವಾಜ್ ಹಾಕಿದ್ದ. ಇದೀಗ ಇನ್ಸ್ಪೆಕ್ಟರ್ ಶರಣಗೌಡ ಹಾಗೂ ರಾಜಕುಮಾರ್ ನಡುವಿನ ಸಂಭಾಷಣೆ ವೈರಲ್ ಆಗಿದೆ.