ಬೆಳಗಾವಿ: ಕರ್ನಾಟಕದಲ್ಲಿ ಸಂಸ್ಕೃತಿ, ಸಂಸ್ಕಾರವು ಎಲ್ಲವೂ ಇದೆ. ಪ್ರಕೃತಿಯ ಎಲ್ಲಾ ವಂಶಗಳು ರಾಜ್ಯದಲ್ಲಿ ಇವೆ. ಇಲ್ಲಿನ ಸರ್ಕಾರ ರಾಜ್ಯದ ಮಹತ್ವ ತಿಳಿದಿಲ್ಲ. ಜನರಿಗಾಗಿ ಕೆಲಸ ಮಾಡುವ ಸರ್ಕಾರ ಇರಬೇಕು ಎಂದು ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದರು.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ನಮಸ್ಕಾರ ಕನ್ನಡ, ಮರಾಠಿಯಲ್ಲಿ ಭಾಷಣ ಆರಂಭಿಸಿದ ಪ್ರಿಯಾಂಕ ಗಾಂಧಿ, ಅಧಿಕಾರಕ್ಕೆ ಸಿಗುತ್ತಲೇ ನಮಗೆ ಗಳಿಸುತ್ತೇವೆ ಎನ್ನುವ ಭಾವನೆ ಕೆಲವರಿಗೆ ಬರುತ್ತದೆ. ಇಂತಹ ಭಾವನೆ ಇರೋ ಸರ್ಕಾರ ಕಳೆದ ಮೂರು ವರ್ಷ ಹಿಂದೆ ರಚನೆ ಆಗಿದೆ. ಶಾಸಕರನ್ನು ಖರೀದಿಸಿ ಸರ್ಕಾರವನ್ನು ಬಿಜೆಪಿ ರಚಿಸಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆಯಿಂದ ಅಭಿವೃದ್ಧಿ ಕೆಲಸ ಕುಂಠಿತವಾಗಿದೆ. ಪರ್ಸಂಟೆಜ್ ಸರ್ಕಾರ ಎಂದೇ ಇದು ಗುರುತಿಸಿಕೊಂಡಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಬೆಲೆ ಏರಿಕೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ರೈತರ ಎಲ್ಲಾ ವಸ್ತುಗಳ ಮೇಲೆ ಜಿಎಸ್ಟಿ (GST), ಟ್ಯಾಕ್ಸ್ ಪರಿಣಾಮ ಬಿದ್ದಿದೆ. ಎಲ್ಲಾ ಹಂತದಲ್ಲಿ ರೈತರು, ಮಹಿಳೆಯರಿಗೆ ಮೋಸ ಆಗಿದೆ. 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದನ್ನು ತುಂಬಿಕೊಳ್ಳುವ ಕೆಲಸ ಸರ್ಕಾರ ಮಾಡಿಲ್ಲ.
ನೋಟು ಬ್ಯಾನ್, ಜಿಎಸ್ಟಿಯಿಂದ ಸಾಕಷ್ಟು ಸಮಸ್ಯೆ ಆಗಿದೆ. ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ಆಗಿದೆ. ಶಾಸಕನ ಪುತ್ರರ ಬಳಿ 8 ಕೋಟಿ ಸಿಕ್ಕರೂ ಯಾವುದೇ ಶಿಕ್ಷೆ ಆಗಿಲ್ಲ. ಗುತ್ತಿಗೆದಾರ ಸಂಘದಿಂದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದರೆ ಯಾವುದೇ ಕ್ರಮ ಆಗಿಲ್ಲ. ಐದು ವರ್ಷ ಇದೇ ಸರ್ಕಾರ ಇರಬೇಕೋ ಬದಲಾವಣೆ ಮಾಡಬೇಕು ಎಂದು ನೀವು ನಿರ್ಧಾರ ಮಾಡಬೇಕು ಎಂದು ಹೇಳಿದರು.
ಲೂಟ್, ಜೂಟ್ ಸರ್ಕಾರ ರಾಜ್ಯದಲ್ಲಿ ಇದೆ. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಮಾತು ಆಡುತ್ತಾರೆ. ಕೇಂದ್ರದಲ್ಲಿ ಮೀಸಲಾತಿ ಏರಿಕೆ ಸಾಧ್ಯವಿಲ್ಲ ಎನ್ನುತ್ತಾರೆ. ನ್ಯಾ.ನಾಗಮೋಹನ ದಾಸ್ ವರದಿಯನ್ನು ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಏರಿಕೆ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ದೊಡ್ಡ ದೊಡ್ಡ ಭರವಸೆ ನೀಡುತ್ತಾರೆ.ಭರವಸೆ ಈಡೇರಿಸುವ ಯಾವುದೇ ಉದ್ದೇಶ ಬಿಜೆಪಿ ಈಡೇರಿಲ್ಲ ಎಮದು ತಿಳಿಸಿದರು.