ಬೆಂಗಳೂರು: ಹಾಲಿ ಸಚಿವ ಅಶ್ವಥ್ ನಾರಾಯಣ್ (C.N.Ashwath Narayan) ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರದ ಮತ್ತೊಂದು ಹಗರಣ ಹೊರಬಿದ್ದಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ (Congress) ವಕ್ತಾರ ಗೌರವ್ ವಲ್ಲಭ್ (Gourav Vallabh) ಗಂಭೀರ ಆರೋಪವನ್ನು ಹೊರಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ (L.Hanu manthaiah) ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಸಹ ಭಾಗಿತ್ವದ ಪ್ರಗತಿ ಗ್ರೂಪ್ 40 ಎಕರೆ ಭೂಮಿಯನ್ನು 199 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ.
ಅದರಲ್ಲಿ 120 ಕೋಟಿ ರೂ.ಗೆ ಮಾತ್ರ ಟಿಡಿಎಸ್ (TDS) ತೋರಿಸಿದ್ದಾರೆ. ಆದರೆ ಸೇಲ್ ಡೀಡ್ನಲ್ಲಿ (Sale Deed) 199 ಕೋಟಿ ರೂ. ತೋರಿಸಿದ್ದಾರೆ. ಉಳಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.ಉಳಿದ ಹಣಕ್ಕೆ ಟಿಡಿಎಸ್ ಮೋಸ ಮಾಡಲಾಗಿದೆ. ಆದಾಯ ತೆರಿಗೆಯಲ್ಲಿ ಸಹ ಇದನ್ನು ತೋರಿಸಿಲ್ಲ. ಮೂರು ಸೇಲ್ ಡೀಡ್ ಮಾಡಿ ಚೆಕ್ನಲ್ಲಿ ಹಣ ಕೊಟ್ಟಿದ್ದಾರೆ. ಆದರೂ ಟಿಡಿಎಸ್ ಹಣ ಕಡಿಮೆ ಮಾಡಿದ್ದಾರೆ. ಉಳಿದ 79 ಕೋಟಿ ರೂ. ಎಲ್ಲಿಗೆ ಹೋಯಿತು? ಅದು ಕಪ್ಪು ಹಣವೇ ಅಥವಾ ಮನಿ ಲಾಂಡರಿಂಗ್ ಮಾಡಲಾಗಿದೆಯಾ? ಇದಕ್ಕೆಲ್ಲಾ ಅಶ್ವಥ್ ನಾರಾಯಣ್ ಉತ್ತರ ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.