ಆಕೆ ಬಳ್ಳಾರಿಯವಳು.ಮಂಗಳೂರಲ್ಲಿ ಓದ್ತಾ ಇದ್ಳು.ಆದ್ರೆ ಬೆಂಗಳೂರಿಗೆ ಬಂದು ಸಾವನ್ನಪ್ಪಿದ್ದಾಳೆ.ಇದೇ ಸಾವು ಈಗ ಹತ್ತಾರು ಅನುಮಾನ ಹುಟ್ಟು ಹಾಕಿದ್ದು.ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರಿಗೆ ಕಂಟಕವಾಗ್ತಿದೆ.ಹಾಗಾದ್ರೆ ಸಾವಿನ ಅಸಲಿಯತ್ತಾದ್ರೂ ಏನು ಅದನ್ನೇ ತೋರಿಸ್ತೀವಿ ನೋಡಿ.. ಸಿರ್ಸಿ ಸರ್ಕಲ್ ಬಳಿಯ ಪೊಲೀಸ್ ಕ್ವಾರ್ಟರ್ಸ್ ನ ವೃಷಭಾವತಿ ಬಲ್ಅಕ್ ನ ಏಳನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ಳು.ಬಂದು ನೋಡಿದ ಪೊಲೀಸರಿಗೆ ಕೈಮೇಲೆ ಯುವಕನ ಹೆಸರು ಮತ್ತು ನಂಬರ್ ಇತ್ತು.ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಸಿಕ್ಕಿದೆ.ಆದರೆ ಅದೇ ವಿದ್ಯಾರ್ಥಿನಿ ಸಾವು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಹೌದು..ಈ ಫೋಟೊದಲ್ಲಿ ಕಾಣ್ತಿರೊ ವಿದ್ಯಾರ್ಥಿನಿ ಹೆಸರು.ಆಯಿಶಾ ಬಳ್ಳಾರಿಯವಳು..ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ ಸಿ..ಕಂಪ್ಯೂಟರ್ ಸೈನ್ಸ್ ಒದ್ತಿದ್ಳು..ಆದ್ರೆ ಎರಡ್ಮೂರು ವರ್ಷದ ಹಿಂದೆ ಸಿಐಡಿ ನಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಭೀಮೇಶ್ ನಾಯಕ ನ ಪರಿಚಯವಾಗಿದೇ.ಇದೇ ಪರಿಚಯ ಪ್ರೇಮಕ್ಕೆ ತಿರುಗಿ ನಂತರ ಮನಸ್ತಾಪ ಕೂಡ ಉಂಟಾಗಿತ್ತು.ಆಕೆಯೇ ಭೀಮೇಶ್ ಮೇಲೆ ದೂರು ನೀಡಿದ್ಳು..ಹಾಗೂ ಪೋಕ್ಸೋ ಕೇಸ್ ನಲ್ಲಿ ಭೀಮೇಶ್ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದ.
ಇಷ್ಟಾದ ಮೇಲೂ ಕೂಡ ಆತ ಜೈಲಿನಿಂದ ಹೊರಬಂದ ಮೇಲೆ ಇಬ್ಬರೂ ಒಂದಾಗಿದ್ರೂ ಆಯಿಶಾ ಮಂಗಳೂರಿನಿಂದ ಬೆಂಗಳೂರಿನ ಸಿರ್ಸಿ ಸರ್ಕಲ್ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್ ನ ಭೀಮೇಶ್ ಮನೆಯಲ್ಲಿ ಬಂದು ಉಳಿದುಕೊಳ್ಳುತ್ತಿದ್ದಳು.ಹೀಗೇ ಏಪ್ರಿಲ್ 24 ರಂದು ಆಗಮಿಸಿದ್ದ ಆಯಿಶಾ ಭೀಮೇಶ್ ಜೊತೆಗೆ ವಾಸವಿದ್ಳು.ಆದ್ರೆ ನಿನ್ನೆ ಬೆಳಗ್ಗೆ 8.30 ಕ್ಕೆ ಭೀಮೇಶ್ ಊರಿಗೆ ತೆರಳಿದ್ದ.ಈ ವೇಳೆ ಆಕೆ ಕೂಡ ಹೊರಟಿದ್ಳು ಆಮೇಲೆ ಅದೇನಾಯ್ತೋ ಏನೊ ನಾನು ಬರೋದಿಲ್ಲ ಎಂದು ವಾಪಸ್ಸಾದವಳು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ.
ಯುವತಿ ಸಾಯುವ ಮುನ್ನ ಆಕೆಯ ಕೈ ಮೇಲೆ ಭೀಮೇಶ್ ನ ಹೆಸರು ಮತ್ತು ಆತನ ಫೋನ್ ನಂಬರ್ ಅನ್ನು ಕೂಡ ಬರೆದುಕೊಂಡಿದ್ದಾಳೆ.ಅಲ್ಲದೇ ಡೆತ್ ನೋಟ್ ಕೂಡ ಸಿಕ್ಕಿದ್ದು..ಡೆತ್ ನೋಟ್ ನಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ.. ಈ ನನ್ನ ಸಾವಿಗೆ ಕಾರಣ ಯಾರು ಅಲ್ಲ.ಈ ಜೀವನದ ಮೇಲೆ ಜಿಗುಪ್ಸೆ ಬಂದಿದೆ.ನಾನೇ ಸ್ವ ಇಚ್ಛೆಯಿಂದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ.ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್ ಮೇಲೆ ದೂರು ನೀಡಿದ್ದೆ.ನಾನು ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟಿದ್ದೇನೆ.ಭೀಮೇಶ್ ನಾಯಕ್ ತುಂಬ ಸೂಕ್ಷ್ಮ ಮತ್ತು ಮುಗ್ಧ ವ್ಯಕ್ತಿ.ಅವರ ಮತ್ತು ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇರುವುದಿಲ್ಲ.ನಾನು ಮಾಡಿದ ಈ ಸುಳ್ಳು ಕೇಸಿನಿಂದಾಗಿ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ.ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ.
ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ.ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ.ಭೀಮೇಶ್ ನಾಯಕ್ ನನ್ನ ಆತ್ಮ ಸ್ನೇಹಿತ.ಆ್ಯಮ್ ವೆರಿ Sorry..ಐ ಲವ್ ಯೂ ಸೋ ಮಚ್ ಭೀಮೇಶ್.ಈ ನನ್ನ ಆತ್ಮಹತ್ಯೆಗೂ ಭೀಮೇಶ್ ನಾಯಕನಿಗೂ ಯಾವುದೇ ಸಂಬಂಧ ಇಲ್ಲ.ಭೀಮೇಶ್ ಮಾಮ ಇವತ್ತು ನೀ ಆಫೀಸಿಗೆ ಹೋದಾಗ ಹಾಲು ಕಾಯಿಸಿದರು ಕುಡಿಯದೆ ಹೋದೆ.ಥ್ಯಾಂಕ್ ಯೂ ಸೋ ಮಚ್ ಭೀಮೇಶ್ ನನ್ನನ್ನು ಕ್ಷಮಿಸಿದ್ದಕ್ಕೆ.ನೀನು ತುಂಬ ದೊಡ್ಡ ವ್ಯಕ್ತಿ ಆ ದೇವರು ನಿನಗೆ ಒಳ್ಳೆಯದು ಮಾಡಲಿ ಮುದ್ದು.ನೀ ಇನ್ನು ಸ್ಟ್ರಾಂಗ್ ಆಗಿ ಚನ್ನಾಗಿ ತಿನ್ನು.ನಾನು ನಿನ್ನ ಜೊತೆ ತುಂಬಾ ಖುಷಿಯಾಗಿದ್ದೆ.ಆ ಸಂತೋಷ ಎಲ್ಲಾ ನನಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.I will miss you,May god bless you Dear.ನಮ್ಮ ಅಪ್ಪನಿಗೆ SORRY ಹೇಳು ಭೀಮೇಶ್.Iam very sorry ಬೀಮೇಶ್ ನಿನ್ನನ್ನ ಜೈಲಿಗೆ ಕಳಿಸಿದಕ್ಕೆ.ಅಪ್ಪ Sorry,ಅಪ್ಪ Love you,my family
ಇಂತಿ ನಿನ್ನ ಪ್ರೀತಿಯ
ಆಯಿಶಾ ಬಿ.ಆರ್
ಈ ರೀತಿ ಡೆತ್ ನೋಟ್ ಬರೆದಿದ್ದು..ಏಪ್ರಿಲ್ 24 ನೇ ದಿನಾಂಕ ನಮೂದಿಸಿದ್ದಾಳೆ.ಹಾಗಾಗಿ ಬೆಂಗಳೂರಿಗೆ ಬರುವಾಗಲೇ ಸಾಯುವ ನಿರ್ಧಾರ ಮಾಡಿದ್ಳಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ..ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು..ನಿಜಕ್ಕೂ ಇದು ಆತ್ಮಹತ್ಯೆನಾ? ಅಥವಾ ಬೇರೆ ಏನಾದರು ಕಾರಣ ಇದೆಯಾ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ..