ಕ್ಯಾಲಿಫೋರ್ನಿಯಾ: ತಮಾಷೆ ಮಾಡಲು ಮನೆಯ ಡೋರ್ ಬೆಲ್ ಬಾರಿಸಿದ್ದು ಮೂವರು ಹದಿಹರೆಯದ ಹುಡುಗರನ್ನು ಕೊಂದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ತಪ್ಪಿತಸ್ಥರೆಂದು ಸಾಬೀತಾಗಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆದಿದೆ.
ಭಾರತೀಯ ಮೂಲದ ಅನುರಾಗ್ ಚಂದ್ರ ಆರೋಪಿ. 2020ರಲ್ಲಿ ಅನುರಾಗ್ ಚಂದ್ರ ಮನೆಯಲ್ಲಿ ಕೆಲವು ಹುಡುಗರು ಡೋರ್ ಬೆಲ್ ಬಾರಿಸಿದರು. ಈ ವಿಚಾರವಾಗಿ ಮೂವರು ಯುವಕರನ್ನು ಅನುರಾಗ್ ಕಾರಿಗೆ ಡಿಕ್ಕಿ ಹೊಡೆದು ಸಾಯಿಸಿದ್ದನು. ಇದೇ ವೇಳೆ ಈ ಘಟನೆಯಲ್ಲಿ ಕೆಲವು ಇಬ್ಬರು ಹದಿಹರೆಯದವರೂ ಗಾಯಗೊಂಡಿದ್ದರು.
ಘಟನೆಯ ದಿನ ತಾನು ಹನ್ನೆರಡು ಬಿಯರ್ ಗಳನ್ನು ಕುಡಿದಿದ್ದಾಗಿ ಸ್ವತಃ ಅನುರಾಗ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದನು. ಡಿಕ್ಕಿಯಾಗುವ ಮೊದಲು ನಾನು 159 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದೆ. ಆದರೂ ನನ್ನ ಗುರಿ ಅವರನ್ನು ಹತ್ಯೆ ಮಾಡುವುದು ಆಗಿರಲಿಲ್ಲ. ಅವರಿಗೆ ಪಾಠ ಕಲಿಸುವುದಾಗಿತ್ತು ಎಂದು ಆರೋಪಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಡೋರ್ ಬೆಲ್ ಬಾರಿಸುತ್ತಿದ್ದರಿಂದ ನನಗೆ ವಿಪರೀತ ಸಿಟ್ಟು ಬಂತು. ಇದರಿಂದಾಗಿ ಬಾಲಕರನ್ನು ಹಿಂಬಾಲಿಸಿದೆ. ಆದರೆ ಸಕಾಲಕ್ಕೆ ಕಾರಿನ ಬ್ರೇಕ್ ಹಾಕಲಾಗದೆ ಈ ಅಪಘಾತ ಸಂಭವಿಸಿತ್ತು ಎಂದು ಹೇಳಿದ್ದಾನೆ.