ಬೆಂಗಳೂರು: ಹಳೇ ಮೈಸೂರು (Old Mysuru) ಭಾಗದಲ್ಲಿ ಕಾಂಗ್ರೆಸ್- ಜೆಡಿಎಸ್ಗೆ (Congresss- JDS) ನೇರ ಠಕ್ಕರ್ ಕೊಟ್ಟು ಮತ ಬೇಟೆಯಾಡಿರುವ ಮೋದಿ (PM Narendra Modi) ಕಾಂಗ್ರೆಸ್-ಜೆಡಿಎಸ್ ಅಸ್ಥಿರದ ಪ್ರತೀಕ ಅಂತ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಸಮಯದಲ್ಲಿ ಎರಡೂ ಪಕ್ಷಗಳು ಡಬ್ಲ್ಯೂ ಡಬ್ಲ್ಯೂಎಫ್ ರೀತಿ ಕಾದಾಡಿ ನಂತರ ಇಬ್ಬರು ಒಂದಾಗುತ್ತಾರೆ. ಜೆಡಿಎಸ್ 25 ಸ್ಥಾನ ಪಡೆದು ಸಿಎಂ ಕನಸು ಕಾಣುತ್ತಿದೆ. ಜೆಡಿಎಸ್ ಕಾಂಗ್ರೆಸ್ನ ಬಿ ಟೀಂ ಎಂದು ಹೇಳುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯೇ ಪರ್ಯಾಯ ಪಕ್ಷ ಎಂದು ದಾಳ ಉರುಳಿಸಿದ್ದಾರೆ.
ನಮೋ ಸಂದೇಶ ಏನು?
ಕರಾವಳಿ, ಬೆಂಗಳೂರು ನಗರ, ಮಧ್ಯ ಕರ್ನಾಟಕ ಸೇರಿದಂತೆ ಹಲವು ಕಡೆ ಬಿಜೆಪಿ ಭದ್ರವಾಗಿದ್ದರೂ ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿ ಬೆಳೆದಿಲ್ಲ. ಈ ಕಾರಣಕ್ಕೆ ಇಲ್ಲಿ ಬಿಜೆಪಿ ಸಂಘಟನೆಯಾಗಲು ಜೆಡಿಎಸ್ ಜೊತೆ ಯಾವುದೇ ಒಳ ಒಪ್ಪಂದ, ಅಡ್ಜೆಸ್ಟ್ಮೆಂಟ್ ಪಾಲಿಟಿಕ್ಸ್ ಇಲ್ಲ ಎಂಬ ಸಂದೇಶವನ್ನು ಮೋದಿ ರವಾನಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ನಮಗೆ ಸಮಾನ ವಿರೋಧಿಗಳು. ಜೆಡಿಎಸ್ 25 ಸ್ಥಾನ ಪಡೆದು ಸಿಎಂ ಹುದ್ದೆಯ ಕನಸು ಕಾಣುತ್ತಿದೆ. ಜೆಡಿಎಸ್, ಕಾಂಗ್ರೆಸ್ನಂತೆ ಕುಟುಂಬ ರಾಜಕೀಯಕ್ಕೆ ಬಿಜೆಪಿಗೆ ಇಲ್ಲ.
ಇತ್ತೀಚೆಗೆ ಪಕ್ಷ ಸೇರಿದವರ ಮೂಲಕ ಹಳೇ ಮೈಸೂರು ಭಾಗದಲ್ಲಿ ಪ್ರಚಾರ, ದಳಪತಿಗಳ ಹಿಡಿತದಿಂದ ಒಕ್ಕಲಿಗ ಮತ ಬ್ಯಾಂಕ್ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಸುಮಲತಾ, ವರ್ತೂರು ಪ್ರಕಾಶ್, ಮುದ್ದಹನುಮೇಗೌಡ, ಎಲ್.ಆರ್ ಶಿವರಾಮೇಗೌಡ, ಅಶೋಕ್ ಜಯರಾಮ್ ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೊಸ ಆಶಯದೊಂದಿಗೆ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಹಳೇ ಮೈಸೂರು ಭಾಗದಲ್ಲಿ 11 ಕ್ಷೇತ್ರ ಮಾತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 25+ ಸ್ಥಾನಕ್ಕಾಗಿ ಬಿಜೆಪಿ ಶತಾಯಗತಾಯ ಹೋರಾಟ ಮಾಡುತ್ತಿದೆ.
ಎಷ್ಟು ಸ್ಥಾನಗಳಿವೆ?
ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಹಳೇ ಮೈಸೂರು ಭಾಗ ಎಂದು ಕರೆಯಲಾಗುತ್ತದೆ. ಒಟ್ಟುಇಲ್ಲಿ 57 ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 19, ಜೆಡಿಎಸ್ 27, ಇತರರು 2 ಸ್ಥಾನವನ್ನು ಗೆದ್ದಿದ್ದರು.