ರಾಣೇಬೆನ್ನೂರ ಎನ್ ಸಿ ಪಿ ಅಭ್ಯರ್ಥಿ ಆರ್ ಶಂಕರ ಇಂದು ರಾಣೇಬೆನ್ನೂರು ತಾಲೂಕಿನ ಎಣ್ಣಿಹೊಸಳ್ಳಿ,ಚಳಗೇರಿ,ತೆರದಹಳ್ಳಿ,ಮಣಕೂರ,ನಂದಿಹಳ್ಳಿ,ಅಂತರವಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡಸಿದರು.
ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನಾನು ಸಚಿವನಾಗಿದ್ದಾಗ ಸಾಕಷ್ಟು ಅಭೀವೃದ್ದಿ ಮಾಡಿದ್ದೇನೆ ಜನರ ಕಷ್ಟಗಳಿಗೆ ಸ್ಪಂದನೆ ಮಾಡಿದ್ದೇನೆ ಹೀಗಾಗಿ ನನಗೆ ಮತ ನೀಡಿ ನನ್ನನ್ನು ಆಯ್ಕೆಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಹಿಂದಿನ ಶಾಸಕರು ಯಾವದೇ ಅಭಿವೃದ್ದಿ ಮಾಡಿಲ್ಲಾ ಬರಿ ಜಾತಿ ರಾಜಕಾರಣ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಅರುಣಕುಮಾರ ಪುಜಾರ ವಿರುದ್ದಾ ವಾಗ್ದಾಳಿ ಮಾಡಿದರು.